ಹಾವೇರಿ(ಮಾ.29): ಮೂಲತಃ ಬಳ್ಳಾರಿಯವನಾಲಾಕ್‌ಡೌನ್‌ ಸಂದರ್ಭದಲ್ಲಿ ದಾರಿ ತಪ್ಪಿಸಿಕೊಂಡು ನಗರದಲ್ಲಿ ಅಲೆದಾಡುತ್ತಿದ್ದ ಅಂಧನೋರ್ವನನ್ನು ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ ಘಟನೆ ಶನಿವಾರ ನಗರದಲ್ಲಿ ಸಂಭವಿಸಿದೆ.

ಮಂಜುನಾಥ ಎಂಬವರು ಸಂಗೀತ ಕಲಾವಿದನಾಗಿದ್ದು, ಹುಬ್ಬಳ್ಳಿಗೆ ಬಂದಿದ್ದರು. ಅಲ್ಲಿ ತಮ್ಮ ಸಂಗಡಿಗರಿಂದ ತಪ್ಪಿಸಿಕೊಂಡು ಹೇಗೋ ಹಾವೇರಿಗೆ ಬಂದಿದ್ದರು. 

ಮಂಗ್ಳೂರು ಬಳಿಕ ಮತ್ತೊಂದು ಜಿಲ್ಲೆಯತ್ತ ಸುಧಾಮ್ಮನ ಸಹಾಯ ಹಸ್ತ

ಶನಿವಾರ ಸಿದ್ದಪ್ಪ ವೃತ್ತದಲ್ಲಿ ಅನಾಥನಂತೆ ಅಲೆಯುತ್ತಿದ್ದಾಗ ಅವನನ್ನು ಮಾಧ್ಯಮದವರು ವಿಚಾರಿಸಿ, ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕೊನೆಗೆ ಇಬ್ಬರೂ ಸೇರಿ ಬಳ್ಳಾರಿ ಮಾರ್ಗವಾಗಿ ಹೊರಟಿದ್ದ ವಾಹನವೊಂದರಲ್ಲಿ ಅಂಧನನ್ನು ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.