ಉಡುಪಿಗೆ ಇಸ್ಫೋಸಿಸ್‌ ಪ್ರತಿ​ಷ್ಠಾನ 54 ಲಕ್ಷ ರೂಪಾಯಿ ನೆರವು

ಜಿಲ್ಲೆಯಲ್ಲಿ ಕೊರೋನಾ ವೈರಸ್‌ ಹರಡುವುದನ್ನು ತಡೆಗಟ್ಟುವುದಕ್ಕಾಗಿ ಅತ್ಯಗತ್ಯವಾಗಿರುವ ವೈದ್ಯಕೀಯ ಸಲಕರಣೆಗಳ ಕೊರತೆಯಾಗಿದೆ. ಈ ಬಗ್ಗೆ ಜಿಲ್ಲಾಡಳಿತದ ಮನವಿಗೆ ಓಗೊಟ್ಟಿರುವ ಬೆಂಗಳೂರಿನ ಇಸ್ಫೋಸಿಸ್‌ ಫೌಂಡೇಶನ್‌, ತಕ್ಷಣವೇ ಸ್ಪಂದಿಸಿ 54 ಲಕ್ಷ ರು.ಗಳ ವೈದ್ಯಕೀಯ ಸಲಕರಣೆಗಳನ್ನು ಕಳುಹಿಸಿದೆ.

 

Infosys donates 54 lakhs to udupi district

ಉಡುಪಿ(ಎ.02): ಜಿಲ್ಲೆಯಲ್ಲಿ ಕೊರೋನಾ ವೈರಸ್‌ ಹರಡುವುದನ್ನು ತಡೆಗಟ್ಟುವುದಕ್ಕಾಗಿ ಅತ್ಯಗತ್ಯವಾಗಿರುವ ವೈದ್ಯಕೀಯ ಸಲಕರಣೆಗಳ ಕೊರತೆಯಾಗಿದೆ. ಈ ಬಗ್ಗೆ ಜಿಲ್ಲಾಡಳಿತದ ಮನವಿಗೆ ಓಗೊಟ್ಟಿರುವ ಬೆಂಗಳೂರಿನ ಇಸ್ಫೋಸಿಸ್‌ ಫೌಂಡೇಶನ್‌, ತಕ್ಷಣವೇ ಸ್ಪಂದಿಸಿ 54 ಲಕ್ಷ ರು.ಗಳ ವೈದ್ಯಕೀಯ ಸಲಕರಣೆಗಳನ್ನು ಕಳುಹಿಸಿದೆ.

4,000ದಷ್ಟು ಎನ್‌ 95 ಮಾಸ್ಕ್, 4000 ಹ್ಯಾಂಡ್‌ ಸ್ಯಾನಿಟೈಸರ್‌, 25,000 ಟ್ರಿಪಲ್‌ ಲೇಯರ್‌ ಮಾಸ್ಕ್, 10,000 ಸರ್ಜಿಕಲ್‌ ಗ್ಲೌಸ್‌ ಮತ್ತು 1,500 ಪರ್ಸನಲ್‌ ಪ್ರೊಟೆಕ್ಷನ್‌ ಇಕ್ಯೂಪ್ಮೆಂಟ್‌ಗಳನ್ನು 24 ಗಂಟೆಗಳೊಳಗೆ ಇಸ್ಫೋಸಿಸ್‌ ಫೌಂಡೇಶನ್‌ ಉಡುಪಿಗೆ ಕಳುಹಿಸಿದೆ.

ಮಂಗ್ಳೂರು ಬಳಿಕ ಮತ್ತೊಂದು ಜಿಲ್ಲೆಯತ್ತ ಸುಧಾಮ್ಮನ ಸಹಾಯ ಹಸ್ತ

ಈ ಹಿನ್ನೆಲೆಯಲ್ಲಿ ಫೌಂಡೇಶನ್‌ ಅಧ್ಯಕ್ಷೆ ಸುಧಾಮೂರ್ತಿ ಅವರಿಗೆ ಮತ್ತು ಫೌಂಡೇಶನ್‌ ನ ಡಾ.ರಾಮದಾಸ ಕಾಮತ್‌ ಅವರಿಗೆ ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ಕೃತಜ್ಞತೆ ಸಲ್ಲಿಸಿದ್ದಾರೆ.

Latest Videos
Follow Us:
Download App:
  • android
  • ios