ಬೆಂಗಳೂರು (ಮಾ. 28): ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಜನ ಎಚ್ಚೆತ್ತುಕೊಂಡಿದ್ದಾರೆ. ಮೆಜೆಸ್ಟಿಕ್‌ನಲ್ಲಿ ಜನರ ಓಡಾಟ ಕಡಿಮೆಯಾಗಿದೆ. ಲಾಕ್‌ಡೌನ್ ಮೊದಲ ದಿನದಿಂದ ಮೆಜೆಸ್ಟಿಕ್‌ನಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು ರಸ್ತೆ ಮಧ್ಯೆ ಬ್ಯಾರಿಕೇಡ್ ಹಾಕಲಾಗಿದೆ. 

"

ಹಾವೇರಿಯಲ್ಲಿ ಲಾಕ್‌ಡೌನ್‌ಗೆ ಹೊಸ ತಂತ್ರ ಉಪಯೋಗಿಸಿದ್ದಾರೆ. ಲಾಠಿ ಬಿಟ್ಟು ದಂಡ ಪ್ರಯೋಗಿಸಲು ಮುಂದಾಗಿದ್ದಾರೆ. ಒಂದು ಗಾಡಿಗೆ 500 ರೂ ದಂಡ ವಸೂಲಿ ಮಾಡುತ್ತಿದ್ದಾರೆ. 

"

ಕೋಟೆನಾಡಿನ ಜನ ಲಾಕ್‌ಡೌನ್‌ಗೆ ಸ್ಪಂದಿಸುತ್ತಿಲ್ಲ. ರಸ್ತೆಯಲ್ಲಿ ಓಡಾಡುತ್ತಿದ್ದವರಿಗೆ ಪೊಲೀಸರು ಸರಿಯಾದ ಪಾಠ ಕಲಿಸಿದ್ದಾರೆ. ಅವರ ಶರ್ಟನ್ನೇ ಬಿಚ್ಚಿಸಿ ಮುಖಕ್ಕೆ ಕಟ್ಟಿಸಿದ್ದಾರೆ. 

"

ಹಾಸನದ ಎಪಿಎಂಸಿಯಲ್ಲಿ ತರಕಾರಿ ಖರೀದಿಗೆ ಜನ ಮುಗಿ ಬಿದ್ದಿದ್ದಾರೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಂಡಿಲ್ಲ. 

"