ಬೆಂಗಳೂರು, (ಮಾ.31): ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.ಮಂಗಳವಾರ ಮತ್ತೆ ನಾಲ್ಕು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 98ಕ್ಕೇರಿಕೆಯಾಗಿದೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ. 

ಕಲಬುರಗಿ: 12ದಿನದಿಂದ ಇಲ್ಲ ಹೊಸ ಕೊರೋನಾ ಕೇಸ್‌, ಇದರ ಬೆನ್ನಲ್ಲೇ ಮತ್ತೊಂದು ಗುಡ್‌ ನ್ಯೂಸ್ 

ಈವರೆಗೆ ಒಟ್ಟು ರಾಜ್ಯದಲ್ಲಿ 98 ಪಾಸಿಟಿವ್ ಕೇಸ್‌ಗಳು ಇದ್ದು, ಮೂವರು ಸಾವನ್ನಪ್ಪಿದ್ದಾರೆ. ಇನ್ನು 6 ಜನರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

* ಬೆಂಗಳೂರಿನಿಂದ ಬಳ್ಳಾರಿಯ ಹೊಸಪೇಟೆಗೆ ಪ್ರಯಾಣಿಸಿದ್ದ ಒಂದು ಕುಟುಂಬದ ಸದಸ್ಯರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಕುಟುಂಬದ 52 ವರ್ಷದ ಪುರುಷ, 26 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಇವರು ಮಾ. 16ರಂದು ಬೆಂಗಳೂರಿನಿಂದ ಪ್ರಯಾಣ ಬೆಳೆಸಿದ್ದರು.

* ಅಲ್ಲದೆ, 59ನೇ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ 40 ವರ್ಷದ ಪುರುಷನಿಗೆ ಸೊಂಕು ಪತ್ತೆಯಾಗಿದೆ. ಮಾ. 22ರಂದು ಅಮೆರಿಕದಿಂದ ಆಗಮಿಸಿದ್ದ 19 ವರ್ಷದ ಯುವಕನಲ್ಲಿ ಸೋಂಕು ದೃಢಪಟ್ಟಿದೆ. 

* ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನ 40 ವರ್ಷದ ಮಹಿಳೆಯಲ್ಲಿ ಕೂಡ ಸೋಂಕು ದೃಢಪಟ್ಟಿದೆ. ಮೈಸೂರಿನಲ್ಲಿ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದ್ದು, 35 ಹಾಗೂ 41 ವರ್ಷದ ಪುರುಷರಲ್ಲಿ ಸೋಂಕಿರುವುದು ಪತ್ತೆಯಾಗಿದ್ದು, ಇದರೊಂದಿಗೆ ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

* ದಕ್ಷಿಣ ಕನ್ನಡ 37 ವರ್ಷದ ಪುರುಷ ಹಾಗೂ ಉತ್ತರಕನ್ನಡದ ಬಟ್ಕಳದ 26 ವರ್ಷದ ಯುವಕನಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಎಲ್ಲರನ್ನೂ ಪ್ರತ್ಯೇಕಿಸಿದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಹೀಗೆ ದಿನೇ ದಿನೇ ಮಾರಿ ವೈರಸ್ ವ್ಯಾಪಕವಾಗಿ ಪಸರಿಸುತ್ತಿದೆ. ಇದರಿಂದ ನಾಗರಿಕರು ಮುಂಜಾಗೃತ ಕ್ರಮಗಳನ್ನು ಕೈಗೊಂಡು ಮನೆಯಲ್ಲಿರಬೇಕೆಂದು ವಿನಂತಿಸುತ್ತೇವೆ.

ಮುಖ್ಯ ವಿಷಯ ಅಂದ್ರೆ, ದೇಶದಲ್ಲಿ ಮೊದಲ ಬಲಿಯಾಗಿದ್ದ ಕಲಬುರಗಿಯಲ್ಲಿ ಕಳೆದ 12 ದಿನಗಳಿಂದ ಇದುವರೆಗೂ ಒಂದು ಕೊರೋನಾ ಪಾಸಿಟಿವ್ ಕಂಡುಬಂದಿಲ್ಲದಿರುವುದು ಸಮಾಧಾನಕರ ಸಂಗತಿ.

ಅಷ್ಟೇ ಅಲ್ಲದೇ ಇದೀಗ ಬಂದ ಮಾಹಿತಿಯಂತೆ ಕೊರೋನಾಕ್ಕೆ ಬಲಿಯಾಗಿದ್ದ ವೃದ್ಧ ಮಗಳು ಸಹ ಸೋಂಕು ಹರಡಿತ್ತು. ಆದ್ರೆ, ಈಗ ಅವರು ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇದು ಒಳ್ಳೆ ಬೆಳವಣಿಗೆ.

"