ಹಾಸನ(ಏ.04): ಪ್ರಧಾನಿ ಮೋದಿ ಏ.5 ರಂದು ಮೇಣದ ಬತ್ತಿ ಇಡ್ಕೊಳ್ಳಿ ಅಂದಿದ್ದಾರೆ, ಮೇಣದ ಬತ್ತಿ ತರೋಕೆ ಅಂಗಡಿಗೆ ಹೋದ್ರೆ ಪೊಲೀಸರಿಂದ ಗೂಸಾ ಬೀಳುತ್ತೆ, ಮೇಣದ ಬತ್ತಿ ತಂದು ಕೊಡೋರು ಯಾರು ಎಂದು ಮಾಜಿ ಸಚಿವ ಎಚ್‌.ಡಿ. ರೇವಣ್ಣ ಪ್ರಶ್ನಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ದೇಶಾದ್ಯಂತ ಲಾಕ್‌ಡೌನ್‌ ಮಾಡಿದ್ದಾರೆ, ಪ್ರತಿನಿತ್ಯ ಬೆಳಗ್ಗೆ ಯೋಗ ಮಾಡಿ ಅಂತಿದ್ದಾರೆ, ಕೂಲಿ ಕೆಲಸ ಮಾಡುವವರು ಎಲ್ಲಿ ಯೋಗ ಮಾಡುತ್ತಾರೆ. ಯೋಗ ಹೇಳಿಕೊಡುವವರಿಗೆ ರೈತರು ಎಲ್ಲಿಂದ ತಂದು ದುಡ್ಡು ಕೊಡ್ತಾರೆ ಎಂದು ಪ್ರಶ್ನಿಸಿದರು. ಅಲ್ಲದೇ ಯಾವುದೋ ಹಳೇ ಬಟ್ಟೆಗಳಲ್ಲಿ ಮಾಸ್ಕ್‌ ರೆಡಿ ಮಾಡ್ತಿದ್ದಾರೆ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವವರು ಯಾರಿದ್ದಾರೆ ಎಂದು ಹೇಳಿದರು.

ಏ.5ಕ್ಕೆ 9 ಗಂಟೆಗೆ 9 ದೀಪ ಉರಿಸಲು ಹೇಳಿದ್ದೇಕೆ ಮೋದೀಜಿ?

ಗ್ರಾಮಗಳಲ್ಲಿ ಎಣ್ಣೆ (ಮದ್ಯ)ಬ್ಲಾಕ್‌ನಲ್ಲಿ ಸಿಗುತ್ತಿದೆ, ಇವೆಲ್ಲವನ್ನೂ ಹೇಳೋರು ಕೇಳೋರು ಯಾರೂ ಇಲ್ಲ, ಇದೇ ರೀತಿ ದೇಶದಲ್ಲಿ ಮುಂದಿವರೆದರೆ 30 ರಷ್ಟುಜನರು ಊಟವಿಲ್ಲದೇ ಸಾಯುತ್ತಾರೆ. ಸರ್ಕಾರ ಕೇವಲ ರಿಜಿಸ್ಪ್ರೇಷನ್‌ ಮಾಡಿರುವವರಿಗೆ ಪರಿಹಾರ ನೀಡುತ್ತಿದೆ, ದಿನಗೂಲಿ ಮಾಡುತ್ತಿದ್ದವರು ಏನು ಮಾಡಿದ್ದಾರೆ? ತರಕಾರಿ-ಹಣ್ಣು-ಹೂ ಮಾರುವವರ ಪರಿಸ್ಥಿತಿ ಏನಾಗಿದೆ ಗೊತ್ತಾ? ಇವೆಲ್ಲವುಗಳ ಬಗ್ಗೆ ಸರ್ಕಾರ ಕೂಡಲೇ ಗಮನಹರಿಸಬೇಕಿದೆ ಎಂದು ಹೇಳಿದರು.

'ದೀಪ ಬೆಳಗಲು ಹೇಳಿದ ಪ್ರಧಾನಿ ಮೋದಿ ಕರೆ ಕ್ರೂರ ಹಾಸ್ಯದಂತಿದೆ'

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹಾಲಿನ ಡೈರಿ ಬಂದ್‌ ಮಾಡುವ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ರೈತರು ಸಂಕಷ್ಟದಲ್ಲಿದ್ದಾರೆ , ಯಾವುದೇ ಕಾರಣಕ್ಕೂ ಹಾಸನ ಡೈರಿಯನ್ನು ಮುಚ್ಚಬಾರದೆಂದು ಹೇಳಿದ್ದೇನೆ ಎಂದು ತಿಳಿಸಿದರು.