ವಿಜಯಪುರ(ಏ.06): ಕೊರೋನಾ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಗೋವಾ ಕನ್ನಡಿಗರಿಗೆ ನೆರವಾಗಲು ಮಾಜಿ ಸಚಿವ ಎಂ.ಬಿ.ಪಾಟೀಲ್‌ ಅವರು ತಮ್ಮ ಎಂ.ಬಿ.ಪಾಟೀಲ್‌ ಫೌಂಡೇಶನ್‌ ಮೂಲಕ ಗೋವಾದ ಕನ್ನಡಿಗರಿಗೆ ದಿನ ನಿತ್ಯ ಬಳಕೆಯ ಆಹಾರ-ಧಾನ್ಯಗಳ ಕಿಟ್‌ಗಳನ್ನು ತಯಾರಿಸಿ, ಎರಡು ಲಾರಿ ಮೂಲಕ ಗೋವಾಕ್ಕೆ ಕಳಿಸಿ, ಮಾನವೀಯತೆ ಮೆರೆದಿದ್ದಾರೆ. 

ಕಳೆದೆರಡು ದಿನಗಳ ಹಿಂದೆಷ್ಟೇ ಜಿಲ್ಲೆಯಿಂದ ಸಾಕಷ್ಟು ಜನ ಗೋವಾ ರಾಜ್ಯಕ್ಕೆ ಗುಳೆ ಹೋಗಿದ್ದು, ಲಾಕ್‌ಡೌನ್‌ ನಿಮಿತ್ತ ಕನ್ನಡಿಗರಿಗೆ ಬಹಳಷ್ಟು ಕಷ್ಟ ಆಗಿದೆ ಎಂದು ಗೋವಾ ರಾಜ್ಯದ ಮಾಜಿ ಸಚಿವ ಮೈಕಲ್‌ ಲೋಬೊ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ ಮಾಜಿ ಸಚಿವ ಪಾಟೀಲ್‌ ಅವರು ಕನ್ನಡಿಗರಿಗೆ ಆಹಾರ ಧಾನ್ಯಗಳು ಹಾಗೂ ಊಟದ ವ್ಯವಸ್ಥೆ ಮಾಡಿಸುವಲ್ಲಿ ಗಮನ ಸೆಳೆದರೆ, ಈಗ ತಾವೇ ತಮ್ಮ ಎಂ.ಬಿ.ಪಾಟೀಲ್‌ ಫೌಂಡೇಶನ್‌ ಮೂಲಕ ಗೋವಾದ ಕನ್ನಡಿಗರಿಗೆ ಆಹಾರಧಾನ್ಯಗಳ ಕಿಟ್‌ ಕಳಿ​ಸಿ​ದರು.

ಕೊರೋನಾ ಗಾಳಿಯಲ್ಲಿ ಹರಡಲ್ಲ: ಕಾರಣ ಕೊಟ್ಟ ಭಾರತೀಯ ವೈದ್ಯರು!

ಪ್ರತಿ ಕಿಟ್‌ನಲ್ಲಿ 5 ಕೆಜಿ ಗೋಧಿ ಹಿಟ್ಟು, 3 ಕೆಜಿ ಅಕ್ಕಿ, 1 ಕೆಜಿ ಬೇಳೆ, 1 ಲೀಟರ್‌ ಎಣ್ಣೆ, ಮಸಾಲೆ, ಉಪ್ಪು, ಖಾರ ಸೇರಿದಂತೆ ದಿನನಿತ್ಯದ ಅಗತ್ಯ ಸಾಮಗ್ರಿಗಳು ಒಳಗೊಂಡಿವೆ.