Asianet Suvarna News Asianet Suvarna News

ಕೊರೋನಾ ಆತಂಕ: 5000 ಮಾಸ್ಕ್‌, 1000 ಸ್ಯಾನಿಟೈಸರ್‌ ನೀಡಿದ ಮಾಜಿ ಸಿಎಂ HDK

ಜಿಲ್ಲಾ ಪೊಲೀಸ್‌ ವರಿ​ಷ್ಠಾ​ಧಿ​ಕಾರಿ ಅನೂಪ್‌ ಎ.ಶೆಟ್ಟಿಗೆ ಸಾಂಕೇ​ತಿ​ಕ​ವಾಗಿ ಮಾಸ್ಕ್‌, ಸ್ಯಾನಿ​ಟೈ​ಸರ್‌ ಹಸ್ತಾಂತರಿಸಿದ ಮಾಜಿ ಸಿಎಂ ಕುಮಾಸಸ್ವಾಮಿ| ಸೋಂಕು ವ್ಯಾಪಕವಾಗಿ ಹರಡುವ ಸಾಧ್ಯತೆ| ಪೊಲೀಸ್‌ ಇಲಾಖೆಯ ಸಿಬ್ಬಂದಿಯೂ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ| ಪೊಲೀಸ್‌ ಇಲಾಖೆ ಹಾಗೂ ಹೋಂ ಗಾರ್ಡ್‌ ಸಿಬ್ಬಂದಿ​ಗಳ ಆರೋಗ್ಯದ ಹಿತದೃಷ್ಟಿಯಿಂದ 5000 ಮಾಸ್ಕ್‌ ಹಾಗೂ 1000 ಸಾನಿಟೈಸರ್‌ಗಳನ್ನು ಕೊಡು​ಗೆ​ಯಾಗಿ ಎಚ್‌.ಡಿ.ಕುಮಾರಸ್ವಾಮಿ|  

Former CM  H D Kumarswamy Distribute 5000 Mask And 1000 sanitizer in Ramanagar
Author
Bengaluru, First Published Apr 1, 2020, 1:14 PM IST

ರಾಮ​ನ​ಗರ(ಏ.01): ಕೊರೋನಾ ವೈರಸ್‌ ಭೀತಿಯ ನಡು​ವೆಯೂ ಸಾರ್ವ​ಜ​ನಿ​ಕ​ರಿಗೆ ಅಗತ್ಯ ಸೇವೆ ಒದ​ಗಿ​ಸು​ತ್ತಿ​ರುವ ಪೊಲೀಸ್‌ ಇಲಾಖೆ, ಪೌರ ಕಾರ್ಮಿ​ಕರು ಹಾಗೂ ಮಾಧ್ಯಮ ಪ್ರತಿ​ನಿ​ಧಿ​ಗ​ಳಿಗೆ ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ.​ಕು​ಮಾ​ರ​ಸ್ವಾಮಿ ಮಾಸ್ಕ್‌ ಹಾಗೂ ಸ್ಯಾನಿ​ಟೈ​ಸರ್‌ ವಿತ​ರಣೆ ಮಾಡಿ​ದ್ದಾರೆ. 

ನಗರದ ಜಿಲ್ಲಾ ಸಂಕೀರ್ಣಗಳ ಕಚೇರಿಯಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಕೊರೋನಾ ಸೋಂಕು ತಡೆಗಟ್ಟುವಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯ ತರು​ವಾಯ ಕುಮಾ​ರ​ಸ್ವಾ​ಮಿ ಜಿಲ್ಲಾ ಪೊಲೀಸ್‌ ವರಿ​ಷ್ಠಾ​ಧಿ​ಕಾರಿ ಅನೂಪ್‌ ಎ.ಶೆಟ್ಟಿ ಅವ​ರಿಗೆ ಸಾಂಕೇ​ತಿ​ಕ​ವಾಗಿ ಮಾಸ್ಕ್‌ ಹಾಗೂ ಸ್ಯಾನಿ​ಟೈ​ಸರ್‌ ವಿತ​ರಿ​ಸಿ​ದರು.

ಕೊರೋನಾ ತಡೆಗೆ ತಿಮ್ಮಪ್ಪನ ಸನ್ನಿಧಿಯಲ್ಲಿ ವಿಶೇಷ ಹೋಮ, ಹವನ! 

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ಪೊಲೀಸರಿಗೆ ಹೆಚ್ಚಾಗಿದೆ. ವಿರಾಮವಿಲ್ಲದೆ ಕರ್ತವ್ಯ ನಿರ್ವಹಿಸಬೇಕಾಗಿದೆ. ಸಾರ್ವಜನಿಕರೊಂದಿಗೆ ನಿಕಟ ಸಂಪರ್ಕ ಹೊಂದಿರಬೇಕಾಗಿದೆ. ಈ ಸಮಯದಲ್ಲಿ ಕೊರೊನಾ ವೈರಸ್‌ ಸೋಂಕಿನಿಂದ ಪೊಲೀಸರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕಾಗಿದೆ. ತಮ್ಮ ಕುಟುಂಬಗಳಿಂದ ದೂರ ಇದ್ದು, ಸಾರ್ವಜನಿಕರನ್ನು ರಕ್ಷಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

ಸೋಂಕು ವ್ಯಾಪಕವಾಗಿ ಹರಡುವ ಸಾಧ್ಯತೆ ಇರುವುದರಿಂದ ಪೊಲೀಸ್‌ ಇಲಾಖೆಯ ಸಿಬ್ಬಂದಿಯೂ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ಈ ಸೂಕ್ಷ್ಮವನ್ನು ಅರಿತು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪೊಲೀಸ್‌ ಇಲಾಖೆ ಹಾಗೂ ಹೋಂ ಗಾರ್ಡ್‌ ಸಿಬ್ಬಂದಿ​ಗಳ ಆರೋಗ್ಯದ ಹಿತದೃಷ್ಟಿಯಿಂದ 5000 ಮಾಸ್ಕ್‌ ಹಾಗೂ 1000 ಸಾನಿಟೈಸರ್‌ಗಳನ್ನು ಕೊಡು​ಗೆ​ಯಾಗಿ ನೀಡಿ​ದ್ದಾರೆ.

ಸಾರ್ವ​ಜ​ನಿ​ಕ​ರೊ​ಡನೆ ನಿಕಟ ಸಂಪರ್ಕ ಹೊಂದಿ​ರುವ ಚನ್ನ​ಪಟ್ಟಣ ನಗ​ರ​ಸಭೆ ಸಿಬ್ಬಂದಿ, ಪೌರ​ಕಾ​ರ್ಮಿ​ಕರು ಹಾಗೂ ಮಾಧ್ಯಮ ಪ್ರತಿ​ನಿ​ಧಿ​ಗಳು ತಮ್ಮದೇ ಆದ ಸೇವೆ​ಯನ್ನು ಸಮಾ​ಜಕ್ಕೆ ಒದ​ಗಿ​ಸು​ತ್ತಿ​ದ್ದಾರೆ. ಸೋಂಕು ಹರಡುವ ಪರಿಸ್ಥಿತಿಯಲ್ಲೂ ಮಾಧ್ಯಮ ಪತ್ರಿನಿಧಿಗಳು ತಮ್ಮ ಓದುಗರಿಗೆ ಸುದ್ದಿ ಕೊಡುವ ಸಲುವಾಗಿ ಓಡಾಡಬೇಕಾಗಿದೆ ಎಂದು ಪತ್ರ​ಕ​ರ್ತ​ರ ಬಗ್ಗೆಯೂ ಕಾಳಜಿವಹಿಸಿರುವ ಎಚ್‌.ಡಿ.ಕುಮಾರ ಸ್ವಾಮಿ ಜಿಲ್ಲಾ ಕೇಂದ್ರದಲ್ಲಿರುವ ಮಾಧ್ಯಮ ಪ್ರತಿನಿಧಿಗಳಿಗೂ ತಲಾ 100 ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ಗಳನ್ನು ವಿತರಿಸಿದರು. ಚನ್ನಪಟ್ಟಣ ನಗರಸಭೆಯ ಪೌರ ಕಾರ್ಮಿಕರಿಗೂ ಜೆಡಿಎಸ್‌ವತಿಯಿಂದ ಮಾಸ್ಕ್‌ಗಳನ್ನು ಅವರು ವಿತರಣೆ ಮಾಡಿ​ದರು.

ಕೊರೋನಾ ಭೀತಿ: ಮೈಸೂರಿನಲ್ಲಿ 2534 ಜನರ ಮೇಲೆ ನಿಗಾ

ಈ ವೇಳೆ ಕುಮಾ​ರ​ಸ್ವಾ​ಮಿ ಮಾತನಾಡಿ, ರಾಮ​ನ​ಗ​ರ ಜಿಲ್ಲೆಯಲ್ಲಿ ಈವರೆಗೂ ಯಾವುದೇ ಕೊರೋನಾ ಪಾಸಿಟಿವ್‌ ಪ್ರಕರಣ ದಾಖಲಾಗದಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ದಿಕ್ಕಿನಲ್ಲಿ ಶ್ರಮಿಸಿದ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ, ಆರೋಗ್ಯ ಇಲಾಖೆ, ತಳಮಟ್ಟದಲ್ಲಿ ದುಡಿಯುತ್ತಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಾದಿಯಾಗಿ ಕೊರೋನಾ ವೈರಾಣು ತಡೆಗಟ್ಟಲು ಶ್ರಮಿಸುತ್ತಿರುವ ಎಲ್ಲರೂ ಅಭಿನಂದನೆಗೆ ಅರ್ಹರು ಎಂದು ಬಣ್ಣಿ​ಸಿ​ದರು.

ಕೊರೋನಾ ವೈರಸ್‌ ಹಿನ್ನೆ​ಲೆ​ಯಲ್ಲಿ ಕಾನೂನು ಸುವ್ಯ​ವಸ್ಥೆ ಕಾಪಾ​ಡು​ತ್ತಿ​ರುವ ಪೊಲೀಸ್‌ ಇಲಾಖೆ, ನಗ​ರ​ದಲ್ಲಿ ಸ್ವಚ್ಛತೆ ಕಾಪಾ​ಡು​ತ್ತಿ​ರುವ ಪೌರ ಕಾರ್ಮಿ​ಕರು ಹಾಗೂ ವೈರಸ್‌ ನ ಕುರಿ​ತಾಗಿ ಜನ ಸಾಮಾ​ನ್ಯ​ರಿಗೆ ಅಗತ್ಯ ಮಾಹಿತಿ ಒದ​ಗಿ​ಸು​ತ್ತಿ​ರುವ ಮಾಧ್ಯಮ ಪ್ರತಿ​ನಿ​ಧಿ​ಗಳು ಮುಂಜಾ​ಗೃತ ಕ್ರಮ​ಗ​ಳನ್ನು ಅನು​ಸ​ರಿಸಿ ಕರ್ತವ್ಯ ನಿರ್ವ​ಹಿ​ಸ​ಬೇಕು ಎಂದು ಕುಮಾ​ರ​ಸ್ವಾಮಿ ಸಲಹೆ ನೀಡಿ​ದ​ರು.
 

Follow Us:
Download App:
  • android
  • ios