Asianet Suvarna News Asianet Suvarna News

ಭಾರತ ಲಾಕ್‌ಡೌನ್‌ ಎಫೆಕ್ಟ್‌: ನಿರ್ಗತಿಕರಿಗೆ ಊಟದ ವ್ಯವಸ್ಥೆ

ನಿರ್ಗತಿಕರಿಗೆ ಹಾಗೂ ಅಲೆಮಾರಿಗಳಿಗೆ ಊಟದ ವ್ಯವಸ್ಥೆ|ದೇಶವ್ಯಾಪಿ ಏಪ್ರಿಲ್‌- 14ರವರೆಗೆ ಸಂಪೂರ್ಣ ಬಂದ್‌|ಎನ್‌ಜಿಒ ಮತ್ತು ಸ್ವಯಂ ಸೇವಕರ ಸಹಕಾರದೊಂದಿಗೆ ಉಪಹಾರ ಊಟದ ಮತ್ತು ಕುಡಿಯುವ ನೀರಿನ ವ್ಯವಸ್ಥೆ|

Food arrangement to Destitutes in Koppala During Bharath LockDown
Author
Bengaluru, First Published Mar 29, 2020, 7:34 AM IST

ಕೊಪ್ಪಳ(ಮಾ.29): ನಿರ್ಗತಿಕರಿಗೆ ಹಾಗೂ ಅಲೆಮಾರಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ದರಾಮೇಶ್ವರ ಅವರು ತಿಳಿಸಿದ್ದಾರೆ.

ಕೋವಿಡ್‌ -19 ಕೊರೋನಾ ಸೋಂಕು ಹರಡುತ್ತಿರುವದರಿಂದ, ದೇಶವ್ಯಾಪಿ ಏಪ್ರಿಲ್‌- 14ರವರೆಗೆ ಸಂಪೂರ್ಣ ಬಂದ್‌ ಘೋಷಿಸಿರುವದರಿಂದ, ಎಲ್ಲಾ ಹೋಟಲ್‌ಗಳು ಬೀದಿ ಬದಿ ವ್ಯಾಪಾರ ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಈ ಪ್ರಯುಕ್ತ ಕೊಪ್ಪಳ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಸತಿರಹಿತರು, ನಿರ್ಗತಿಕರಿಗೆ ಹಾಗೂ ಅಲೆಮಾರಿಗಳಿಗೆ ಆಹಾರ, ವಸತಿ ಮತ್ತು ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಎನ್‌ಜಿಒ ಮತ್ತು ಸ್ವಯಂ ಸೇವಕರ ಸಹಕಾರದೊಂದಿಗೆ ಉಪಹಾರ ಊಟದ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಸ್ವಯಂ ಸೇವಕರ ವಿವರ: 

ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಹುಸೇನ್‌ ಬಾಷಾ ಮೊ.ಸಂ. 8095987364, ಮಂಜುನಾಥ ಬೆಲ್ಲದ ಮೊ. 9448034199, ಗಂಗಾವತಿ ನಗರಸಭೆ ಸರಸ್ವತಿ ಮೊ. 7019683162, ಮೃತ್ಯುಂಜಯ ಮೊ. 9886759882, ಕುಷ್ಟಗಿ ಪುರಸಭೆ ಬಸವಕುಮಾರ ಮೊ. 9972839510, ಮಹಾಂತೇಶ ಉಳ್ಳಾಗಡ್ಡಿ ಮೊ. 7338651100, ಕಾರಟಗಿ ಪುರಸಭೆ ಈರಣ್ಣ ಎಂ. ಮೊ. 9480756761, ರಾಘವೇಂದ್ರ ಮೊ. 8147065115, ಯಲಬುರ್ಗಾ ಪಪಂ ವೆಂಕಣ್ಣ ಜೋಷಿ ಮೊ. 7996441060, ಸೋಮಶೇಖರ ಮೊ. 8618364078, ಕುಕನೂರ ಪಪಂ ಪ್ರಕಾಶ ಬಂಡಿ ಮೊ. 9611446559 ಹಾಗೂ ಚೆನ್ನಯ್ಯ ಕೆಂಬಾವಿಮಠ ಮೊ. 8431363187, ತಾವರಗೇರಾ ಪಟ್ಟಣ ಪಂಚಾಯಿತಿ ಖಾಜಾಹುಸೇನ್‌ ಮೊ. 9880854313, ಪ್ರಾಣೇಶ ಮೊ. 9620910740, ಕನಕಗಿರಿ ಪಪಂ ಕನಕಪ್ಪ ನಾಯಕ್‌ ಮೊ. 9036401729 ಹಾಗೂ ಪ್ರಕಾಶ ಮಹಿಪತಿ ಮೊ. 9448858642 ಮತ್ತು ಭಾಗ್ಯನಗರ ಪಪಂ ವ್ಯಾಪ್ತಿಯಲ್ಲಿ ಚನ್ನಬಸಪ್ಪ ವಿ ಅಗಡಿ ಮೊ. 9986152637, ಉಜ್ವಲ್‌ ಜೆ ಮೊ. 9620250727, ಇವರ ಸಹಕಾರದೊಂದಿಗೆ ಉಪಹಾರ ಊಟದ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿರುತ್ತದೆ. ನಿರ್ಗತಿಕರು ಅಲೆಮಾರಿಗಳು ಕಂಡುಬಂದಲ್ಲಿ ಇವರಿಗೆ ಸಂಪರ್ಕಿಸಬಹುದು.
 

Follow Us:
Download App:
  • android
  • ios