ಕೋಲಾರ(ಮಾ.29): ಕೊರೋನಾ ವೈರಸ್‌ ಎಫೆಕ್ಟ್‌ ಹಿನ್ನೆಲೆಯಲ್ಲಿ ವಾಹನದ ಸಮಸ್ಯೆಯಿಂದ ರೈತನೊಬ್ಬ ಕ್ಯಾಪ್ಸಿಕಂ ಅನ್ನು ಮಾರುಕಟ್ಟೆಗೆ ಹಾಕಲಾಗದೆ ಉಚಿತವಾಗಿ ಜನರಿಗೆ ಹಂಚಿದ ಘಟನೆ ನೀಡಿದ ತಾಲೂಕಿನ ದಿನ್ನೂರು ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. 

ಕೋಲಾರ ತಾಲೂಕಿನ ದಿನ್ನೂರು ಗ್ರಾಮದ ಪ್ರವೀಣ್ ಎಂಬುವವರು ತಮ್ಮ ಜಮೀನಿನಲ್ಲಿ ಬೆಳೆದ ಕ್ಯಾಪ್ಸಿಕಂ ಅನ್ನು ಟೆಂಪೋದಲ್ಲಿ ತುಂಬಿಕೊಂಡು ಜನರಿಗೆ ಉಚಿತವಾಗಿ ಹಂಚಿದ್ದಾರೆ. ರೈತ ಪ್ರವೀಣ್ ಅವರು ಸುಮಾರು ಎರಡು ಟನ್‌ನಷ್ಟು ಕ್ಯಾಪ್ಸಿಕಂ ಅನ್ನು ಗ್ರಾಮಗಳಿಗೆ ತೆರಳಿ ಜನರಿಗೆ ದಾನ ಮಾಡಿದ್ದಾರೆ. 

ಲಾಕ್‌ಡೌನ್‌: ಗಗನಕ್ಕೇರಿದ ತರಕಾರಿ ಬೆಲೆ

ಈ ವೇಳೆಯಲ್ಲಿ ಮಾದ್ಯಮವರ ಜೊತೆ ಮಾತನಾಡಿದ ರೈತ ಪ್ರವೀಣ್ ಅವರು, ಅಂತರರಾಜ್ಯ ಮಾರುಕಟ್ಟೆಗೆ ಸರಬರಾಜು ಮಾಡಲಾಗದೆ ಸ್ಥಳೀಯ ಜನರಿಗೆ ಹಂಚಿಕೆ ಮಾಡಿದ್ದೇನೆ ಎಂದು ಹೇಳಿದ್ದಾರೆ.