ಗದಗ(ಏ.01): ಭಾರತ್‌ ಲಾಕ್‌ಡೌನ್‌ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯ ಎಲ್ಲ ವ್ಯಾಪಾರ ವಹಿವಾಟನ್ನು ಬಂದ್‌ ಮಾಡಲಾಗಿತ್ತು. 

ಆದರೆ, ಮಾ. 30ರಂದು ದಲಾಲರು, ಖರೀದಿದಾರರ ವರ್ತಕರ ಸಂಘದವ​ರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಮನವಿ ಸಲ್ಲಿಸಿದ್ದರ ಹಿನ್ನೆಲೆಯಲ್ಲಿ ಅಂಗಡಿ ಮತ್ತು ಸಂಸ್ಕರಣಾ ಘಟಕದಲ್ಲಿ ಸಂಗ್ರಹಿಸಿಡಲಾದ ದವಸ-ಧಾನ್ಯ ಹಾಳಾ​ಗು​ವು​ದನ್ನು ತಡೆ​ಯುವ ನಿಟ್ಟಿ​ನ​ಲ್ಲಿ ಸರ್ಕಾರದ ಮಾರ್ಗಸೂಚಿಗಳನ್ವಯ ಲಾಕ್‌ಡೌನ್‌ನಿಂದ ಕೃಷಿ ಉತ್ಪನ್ನಗಳ ವ್ಯಾಪಾರಕ್ಕೆ ವಿನಾಯ್ತಿ ನೀಡಲಾಗಿದೆ. 

ಲಾಕ್‌ಡೌನ್: ತುಂಬು ಗರ್ಭಿಣಿಯಾದರೂ ಲಾಠಿ ಹಿಡಿದು ಕರ್ತವ್ಯ ಪ್ರಜ್ಞೆ ಮೆರೆದ ಪಿಎಸ್‌ಐ!

ಮಾರುಕಟ್ಟೆ ಪ್ರಾಂಗಣದಲ್ಲಿ ಬರುವ ಅಂಗಡಿಗಳ ಬಾಗಿಲುಗಳನ್ನು ತೆರೆಯಲು ಹಾಗೂ ಸಂಸ್ಕರಣಾ ಘಟಕಗಳಲ್ಲಿ ದವಸ-ಧಾನ್ಯಗಳನ್ನು ಸಂಸ್ಕರಿಸಿ ರವಾನೆ ಮಾಡಲು ಅನುಮತಿಸಲಾಗಿದೆ. ದಲಾಲರ, ಖರೀದಿದಾರರ ಅಂಗಡಿಗಳನ್ನು ಸೋಮವಾರ, ಬುಧವಾರ, ಗುರುವಾರ ಮತ್ತು ಶನಿವಾರದ ಮಾತ್ರ ತೆರೆಯಲು ಅವ​ಕಾಶ ನೀಡಲಾ​ಗಿ​ದೆ.