ವಿಜಯಪುರ ಜಿಲ್ಲೆಗೆ ವಿದೇಶದಿಂದ ಬಂದ 290 ಮಂದಿ: 144 ಸೆಕ್ಷನ್ ಜಾರಿ

ನಿಷೇದಾಜ್ಞೆ ಉಲ್ಲಂಘಿಸಿದವರ ವಿರುದ್ಧ ಕ್ರಮ| ಮಹಾರಾಷ್ಟ್ರದಲ್ಲಿ ಕೊರೋನಾ ಹಾವಳಿ ಹೆಚ್ಚಳ| ಗಡಿಯಲ್ಲಿ 23  ಚೆಕ್ ಪೋಸ್ಟ್ ನಿರ್ಮಾಣ| ಹೋ ಕೊರೈಂಟನ್ ಉಲ್ಲಂಘನೆ ಮಾಡಿದ ವ್ಯಕ್ತಿಯ ಮೇಲೆ ಕೇಸ್ ಹಾಕಲು ನಿರ್ಧಾರ|

DC Y S Patil Says 290 People Came From Foreign to Vijayapura District

ವಿಜಯಪುರ[ಮಾ.23]: ಇದುವರೆಗೂ ಜಿಲ್ಲೆಗೆ  290 ಜನರು ವಿದೇಶದಿಂದ ಬಂದಿದ್ದಾರೆ. ಅದರಲ್ಲಿ 173 ಮಂದಿ ನಿಗಾದಲ್ಲಿದ್ದಾರೆ. ಈಗಿನಿಂದಲೇ ಜಿಲ್ಲೆಯಲ್ಲಿ 144 ಜಾರಿ ಮಾಡಲಾಗಿದೆ. ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಚೆಕ್ ಪೋಸ್ಟ್ ಗಳನ್ನ ನಿರ್ಮಾಣ ಮಾಡಲಾಗಿದೆ. ಇಂದಿನಿಂದ ಮಾರ್ಚ್ 31ರ ವರೆಗೆ 144 ಸೆಕ್ಷನ್  ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಹೇಳಿದ್ದಾರೆ. 

ಇಂದು[ಸೋಮವಾರ] ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ನಿಷೇದಾಜ್ಞೆ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮಹಾರಾಷ್ಟ್ರದಲ್ಲಿ ಕೊರೋನಾ ಹಾವಳಿ ಹೆಚ್ಚಾಗಿದೆ. ಮಹಾರಾಷ್ಟ್ರದಿಂದ ಹೆಚ್ಚಿನ ಜನರು ಬರುತ್ತಿದ್ದಾರೆ, ಹಾಗಾಗಿ ಅವರನ್ನು ತಗಡೆಗಟ್ಟುವ ಕೆಲಸ ನಡೆಯುತ್ತಿದೆ. ಗಡಿಯಲ್ಲಿ 23  ಚೆಕ್ ಪೋಸ್ಟ್ ಗಳನ್ನ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ದಾರೆ.

ಬೆಳಗಾವಿ: ಮಗುವಿಗೆ ಕೊರೋನಾ ಸೋಂಕು ಇಲ್ಲ, ಕುಟುಂಬಸ್ಥರ ಮೇಲೂ ನಿಗಾ

ಜಿಲ್ಲೆಗೆ ಒಳಬರುವವರ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ. ಮಾರ್ಕೆಟ್, ಮಾಲ್, ಸೂಪರ್ ಬಜಾರ್ ಬಂದ್ ಮಾಡಲಾಗಿದೆ. ಹೋ ಕೊರೈಂಟನ್ ಉಲ್ಲಂಘನೆ ಮಾಡಿದ ವ್ಯಕ್ತಿಯ ಮೇಲೆ ಕೇಸ್ ಹಾಕಲು ನಿರ್ಧರಿಸಲಾಗಿದೆ. ಅನುಮತಿ ಇಲ್ಲದೆ ಸಮಾರಂಭ ನಡೆಸಿದವರ ಮೇಲೂ ಕೇಸ್ ಮಾಡಲು ನಿರ್ಧರಿಸಲಾಗಿದೆ.  ಆದೇಶವನ್ನು ಉಲ್ಲಂಘಿಸಿದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ವಿಜಯಪುರ ಸುತ್ತಮುತ್ತ ಜಿಲ್ಲೆಗಳು ಬ್ಲಾಕ್ ಡೌನ್ ಆಗಿವೆ. ಹಾಗಾಗಿ ನಾವು ಕಟ್ಟೆಚ್ಚರ ವಹಿಸುತ್ತಿದ್ದೇವೆ ಎಂದು ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios