ಬೆಂಗಳೂರು, (ಮಾ.24):  ಕೊರೋನಾ ವೈರಸ್ ನಿಯಂತ್ರಣ ಉದ್ದೇಶದಿಂದ ರಾಜ್ಯದಲ್ಲಿ ಲಾಕ್ ಡೌನ್ ತೀರ್ಮಾವನ್ನು ಕೈಗೊಳ್ಳಲಾಗಿದ್ದು, ಯಾರು ಹೊರಗಡೆ ಬರಬಾರದು ಎಂದು ಆದೇಶ ಹೊರಡಿಸಲಾಗಿದೆ.

ಅಷ್ಟೇ ಅಲ್ಲದೇ ನಗರವಾಸಿಗಳು ಯಾರು ಹಳ್ಳಿಗಳಿಗೆ ಹೋಗಬೇಡಿ ಎಂದು ಇದೇ ಸಿಎಂ ಯಡಿಯೂರಪ್ಪ ಸಾಹೇಬ್ರು ಹೇಳಿದ್ರು. ಆದ್ರೆ, ಇದೀಗ ತಮ್ಮ ಮಾತುಗಳನ್ನು ಬದಲಿಸಿ ನಗರವಾಸಿಗಳನ್ನ ಹಳ್ಳಿಗಳತ್ತ ಹೋಗಲು ಬಿಟ್ಟಿದ್ದಾರೆ.

ಕರ್ನಾಟಕ ಸಂಸದರೊಬ್ಬರ ಪುತ್ರಿಗೆ ಕೊರೋನಾ ವೈರಸ್ ದೃಢ..!

ಬೆಂಗಳೂರಿನಲ್ಲಿ ಇಂದು (ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು (ಮಂಗಳವಾರ) ರಾತ್ರಿ ವರೆಗೆ ಮಾತ್ರ ಸಾರ್ವಜನಿಕರಿಗೆ ಊರಿಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ. ಅದರಲ್ಲೂ ಪ್ರಮುಖವಾಗಿ ಬೆಂಗಳೂರಿಗೆ ಬರಲು, ಬೆಂಗಳೂರಿನಂದ ಊರಿಗೆ ಹೋಗಲು ಇಂದು ಅವಕಾಶ ನೀಡಲಾಗಿದೆ. ಬೆಂಗಳೂರಿಗೆ ಬರುವವರು ಇಂದು ರಾತ್ರಿಯೊಳಗೆ ಬರಬೇಕು. ನಾಳೆಯಿಂದ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಸಿಎಂ ಮಾತು ಬದಲಿಸಿದ್ದಾರೆ. 

ಮೇಲಿನ ಮಾತಿಗೆ ಬುಧವಾರದಿಂದ ಮತ್ತಷ್ಟು ಬಿಗಿಗೊಳಿಸಲಾಗುವುದು ಎಂದು ಸಬೂಬು ಬೇರೆ ಹೇಳಿದರು. ಸರ್ಕಾರದ ಆದೇಶ ಉಲ್ಲಂಘಿಸುವವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಸರ್ಕಾರದ ನಿರ್ಧಾರವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲವಾದಲ್ಲಿ ಕ್ರಮ ಖಚಿತ ಎಂದರು. 

 ಸಿಎಂ ಸಾಹೇಬ್ರೆ ಇದೇನಾ ನಿಮ್ಮ ಸರ್ಕಾರ ಲಾಕ್ ಡೌನ್..? ಬೆಳಗ್ಗೆ ಹೇಳೋದು ಒಂದು ಸಂಜೆಗೆ ಹೇಳಿಕೆ ಕೊಡೋದು ಮತ್ತೊಂದು. ಜನರನ್ನು ಹೀಗೇಕೆ ಗೊಂದಲಗೊಳಿಸುತ್ತಿದ್ದೀರಾ. ನಗರವಾಸಿಗಳು ಹೋಗಿ ಹಳ್ಳಿಗಳಿಗೂ ಕೊರೋನಾ ಹಬ್ಬಿಸಲು ಹೊರಟಿದ್ದೀರಾ ಮುಖ್ಯಮಂತ್ರಿಗಳೇ..? 

ನಗರವಾಸಿಗಳು ಒಂದು ವೇಳೆ ಕೊರೋನಾ ಸೋಂಕಿತರಾಗಿದ್ರೆ, ಹಳ್ಳಿಗಳ ಪರಿಸ್ಥಿತಿ ಹೇಗೆ? ಹಳ್ಳಿಗಳಲ್ಲಿ ಆಸ್ಪತ್ರೆಗಳು ಇದ್ದಾವಾ? ಇದ್ರೆ ಸೂಪರ್ ಸೆಷಲಿಟಿಗಳು ಇದ್ದಾವಾ..? ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಾದ ನೀವುಗಳೇ ಬೆಳಗ್ಗೆ ಒಂದು ಹೇಳಿಕೆ ನೀಡಿ ಸಂಜೆ ಒಂದು ಮಾತನಾಡುವುದು ಎಷ್ಟು ಸರಿ?.

ಇನ್ನೊಂದೆಡೆ ನಿಮ್ಮ ಪ್ರಧಾನಿಗಳು ನಗರವಾಸಿಗಳಿಗೆ ಹಳ್ಳಿಗಳ ಕಡೆ ಹೋಗುವುದು ಬೇಡ. ಎಲ್ಲಿ ಇದ್ದೀರಾ ಅಲ್ಲೇ ಇರಿ ಎಂದು ಕರೆ ಕೊಟ್ಟಿದ್ದಾರೆ. ಆದ್ರೆ, ಯಡಿಯೂರಪ್ಪನವರೇ ನೀವು ಮಾಡುತ್ತಿರುವುದಾದರೂ ಏನು..? ಏನು ಮಾಡಲು ಹೊರಟ್ಟಿದ್ದೀರಾ..? 

ಇಡೀ ರಾಜ್ಯವನ್ನೇ ಲಾಕ್‌ಡೌನ್ ಮಾಡಿ ನೀವೇ ಆದೇಶ ಹೊರಡಿಸಿದ್ದೀರಾ. ಅಷ್ಟೇ ಅಲ್ಲ ಯಾರು ಹೊರಗಡೆ ಬರಬಾರದೂ ಅಂತಲೂ ಆದೇಶ ಹೊರಿಡಿಸಿದ್ದೀರಾ..? ಅದಕ್ಕಾಗಿ ಪೊಲೀಸರು ಜನರಗನ್ನು ಮನೆಗೆ ಹೋಗಿ ಅಂತ ಲಾಠಿ ಏಟು ಕೊಡುತ್ತಿದ್ದಾರೆ.

ಆದ್ರೆ, ಇದೀಗ ಏಕಾಏಕಿ ಹೋಗೋರು ಹೋಗಿ, ಬರೋರು ಬರ್ಲಿ ಎಂದು ಹೇಳಿದ್ದು ಎಷ್ಟು ಸರಿ ಮುಖ್ಯಮಂತ್ರಿಗಳೇ..? ಈ ನಿರ್ಧಾರ ಇಂತಹ ವಿಚಾರದಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಬದ್ಧರಾಗಿರಬೇಕು.