ಬೆಂಗಳೂರು(ಏ.06): ಕೊರೋನಾ ಬಾಧಿತ ದೇಶಗಳು ಸೇರಿದಂತೆ ವಿವಿಧ ದೇಶಗಳಿಂದ ರಾಜ್ಯಕ್ಕೆ ಆಗಮಿಸಿರುವ ಅಂತಾರಾಷ್ಟ್ರೀಯ ಪ್ರಯಾಣಿಕರ ಕ್ವಾರಂಟೈನ್‌ (ಏಕಾಂತ ವಾಸ) ಅವಧಿ ಸೋಮವಾರಕ್ಕೆ ಮುಕ್ತಾಯಗೊಳ್ಳಲಿದೆ. ಹೀಗಾಗಿ ಇನ್ನು ಮುಂದೆ ಸೋಂಕಿತ ವ್ಯಕ್ತಿಗಳೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವ 1,469 ಮಂದಿ ಹಾಗೂ ದ್ವಿತೀಯ ಹಂತದ ಸಂಪರ್ಕ ಹೊಂದಿರುವ 5,165 ಮಂದಿ ಸೇರಿ ಒಟ್ಟು 6,634 ಮಂದಿ ಮಾತ್ರ ಕ್ವಾರೆಂಟೈನ್‌ನಲ್ಲಿ ಉಳಿಯಲಿದ್ದಾರೆ.

ಇದರಲ್ಲಿ ದೆಹಲಿಯ ನಿಜಾಮುದ್ದೀನ್‌ ತಬ್ಲೀಘಿ ಜಮಾತ್‌ಗೆ ಹೋಗಿ ಬಂದವರು ಹಾಗೂ ಆ ಸೋಂಕಿತರ ಪ್ರಾಥಮಿಕ, ದ್ವಿತೀಯ ಹಂತದ ಸಂಪರ್ಕಿತರೂ ಸೇರಿದ್ದಾರೆ. ವಿದೇಶಿ ಪ್ರಯಾಣಿಕರ ಕ್ವಾರೆಂಟೈನ್‌ ಅವಧಿ ಬಹುತೇಕ ಭಾನುವಾರಕ್ಕೆ ಮುಕ್ತಾಯವಾಗಿದೆ. ಅಮೆರಿಕದಿಂದ ಮಾ.23ರಂದು ಆಗಮಿಸಿದ್ದ ಒಬ್ಬ ವ್ಯಕ್ತಿಯು ಮಾತ್ರ ಸೋಮವಾರ ಬಿಡುಗಡೆಯಾಗಲಿದ್ದಾರೆ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಹೋಂ ಕ್ವಾರಂಟೈನಲ್ಲಿದ್ದ ವ್ಯಕ್ತಿಯ ವಿವಿಧ ಬೇಡಿಕೆಗೆ ಸುಸ್ತಾದ ಅಧಿಕಾರಿಗಳು!

ಈ ನಡುವೆ, 14 ದಿನಗಳ ಕ್ವಾರೆಂಟೈನ್‌ ಅವಧಿ ಮುಗಿದಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಇನ್ನೂ ಹದಿನಾಲ್ಕು ದಿನಗಳ ಕಾಲ ಇವರ ಆರೋಗ್ಯದ ಮೇಲೆ ದೃಷ್ಟಿಇಡಲಾಗುತ್ತದೆ. ಕೆಲವರಿಗೆ 17, 18 ದಿನಗಳಿಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳವ ಸಾಧ್ಯತೆಯೂ ಇದೆ. ಹೀಗಾಗಿ ನಾವು ನಿರ್ಲಕ್ಷ್ಯ ವಹಿಸುತ್ತಿಲ್ಲ ಎಂದು ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ವಿಭಾಗದ ಜಂಟಿ ನಿರ್ದೇಶಕ ಡಾ. ಪ್ರಕಾಶ್‌ಕುಮಾರ್‌ ಹೇಳಿದ್ದಾರೆ.

"

ಬಂದವರೆಷ್ಟು?:

ವಿಶ್ವ ಮಟ್ಟದಲ್ಲಿ ಕೊರೋನಾ ಸೋಂಕು ವರದಿಯಾದ ಬಳಿಕ 1,27,902 ಮಂದಿ ಬೆಂಗಳೂರು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕಾರವಾರ ಹಾಗೂ ಮಂಗಳೂರು ಬಂದರುಗಳು ಮೂಲಕ ರಾಜ್ಯಕ್ಕೆ ಆಗಮಿಸಿದ್ದರು. ಈ ಪೈಕಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾ.10 ರಿಂದ 22ರವರೆಗೆ ಮಾಚ್‌ರ್‍ 8 ರಿಂದ ವಿಮಾನ ಸಂಚಾರ ಬಂದ್‌ ಆದ 22ರವರೆಗೆ 14,910 ಮಂದಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಮಂಗಳೂರು ವಿಮಾನ ನಿಲ್ದಾಣ ಹಾಗೂ ಕಾರವಾರ, ಮಂಗಳೂರು ಬಂದರುಗಳ ಮೂಲಕ ಸುಮಾರು 9 ಸಾವಿರ ಮಂದಿ ಆಗಮಿಸಿದ್ದರು. ಅಂದರೆ ಒಟ್ಟಾರೆ ಸುಮಾರು 25 ಸಾವಿರ ಜನ ಬಂದಿದ್ದರು.

ಇಷ್ಟೂಮಂದಿಯ ಕ್ವಾರೆಂಟೈನ್‌ ಅವಧಿಯು ಹಂತ-ಹಂತವಾಗಿ ಮುಕ್ತಾಯವಾಗಿದ್ದು, ಸೋಮವಾರದ ವೇಳೆಗೆ ಎಲ್ಲಾ ವಿದೇಶಿ ಪ್ರಯಾಣಿಕರ ಮನೆ ಹಾಗೂ ಸಾಂಸ್ಥಿಕ ಕ್ವಾರಂಟೈನ್‌ ಅವಧಿ ಮುಕ್ತಾಯವಾಗಲಿದೆ. ಇದರಿಂದ ಸೋಂಕಿತರ ಸಂಪರ್ಕದ ಬಗ್ಗೆ ಗಮನ ನೀಡಬಹುದು ಎಂದು ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ವಿಭಾಗದ ಜಂಟಿ ನಿರ್ದೇಶಕ ಡಾ. ಪ್ರಕಾಶ್‌ಕುಮಾರ್‌ ಹೇಳಿದ್ದಾರೆ.

CRPF ಡಿಜಿ ಹಾಗೂ ಹಿರಿಯ ಅಧಿಕಾರಿಗೆ ಕೊರೋನಾ, ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಪ್ರಕರಣ!

ಈ ನಡುವೆ, ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಿಂದ ಭಾನುವಾರ 47 ಮಂದಿ ಬಿಡುಗಡೆಯಾದರು. ಆಸ್ಪ್ರೇ​ಲಿಯಾ, ಜಪಾನ್‌, ದುಬೈ, ಸಿಂಗಾ​ಪುರ ಸೇರಿ 6 ದೇಶ​ಗ​ಳಿಂದ ಬಂದ​ವ​ರನ್ನು ಈ ಆಸ್ಪ​ತ್ರೆ​ಯಲ್ಲಿ ಪ್ರತ್ಯೇ​ಕ​ವಾಗಿ ಇಡ​ಲಾ​ಗಿತ್ತು. ಪ್ರಸ್ತುತ ವಿದೇಶಿ ಪ್ರಯಾಣಿಕರ ಮೇಲೆ ನಿಗಾ ವಹಿಸುವ ಹೆಚ್ಚುವರಿ ಹೊರೆ ಕಡಿಮೆಯಾಗಿದೆ. ಹೀಗಾಗಿ ರಾಜ್ಯಾದ್ಯಂತ ಸೋಂಕಿತರ ಸಂಪರ್ಕಕ್ಕೆ ಬಂದಿರುವ 1,232 ಮಂದಿ ಪ್ರಾಥಮಿಕ ಸಂಪರ್ಕಿತರು ಹಾಗೂ ದ್ವಿತೀಯ ಹಂತದ ಸಂಪರ್ಕ ಹೊಂದಿರುವ 4,571 ಮಂದಿ ಮೇಲೆ ವಿಶೇಷ ಗಮನ ಹರಿಸಬಹುದು. ಇದು ಆರೋಗ್ಯ ಇಲಾಖೆಗೆ ಹೊರೆ ಕಡಿಮೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.