Asianet Suvarna News Asianet Suvarna News

ಸೋಂಕು ನಿವಾರಕ ದ್ರಾವಣ ಸಿಂಪಡಿಸಲು ಡಿಆರ್‌ಡಿಒ ಯಂತ್ರ!

ಸೋಂಕು ನಿವಾರಕ ದ್ರಾವಣ ಸಿಂಪಡಿಸಲು ಡಿಆರ್‌ಡಿಒ ಯಂತ್ರ| ಕೊರೋನಾ ತಡೆಗೆ 2 ರೀತಿಯ ಉಪಕರಣ ಅಭಿವೃದ್ಧಿಪಡಿಸಿದ ರಕ್ಷಣಾ ಸಂಸ್ಥೆ

Coronavirus Outbreak DRDO Machine To spray disinfection solution
Author
Bangalore, First Published Apr 5, 2020, 12:11 PM IST

ಬೆಂಗಳೂರು(ಏ.05): ಮಾರಕ ಕೊರೋನಾ ವೈರಸ್‌ ಹರಡುವುದನ್ನು ತಡೆಯಲು ಸೋಂಕು ನಿವಾರಕ ದ್ರಾವಣ ಸಿಂಪಡಿಸಲು ರಕ್ಷಣಾ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಉಪಕರಣವನ್ನು ಅಭಿವೃದ್ಧಿಪಡಿಸಿದೆ.

ದೆಹಲಿಯ ಸ್ಫೋಟಕ ವಸ್ತುಗಳ ಮತ್ತು ಪರಿಸರ ಸುರಕ್ಷತಾ ಕೇಂದ್ರವು ಈ ಉಪಕರಣವನ್ನು ಅಭಿವೃದ್ಧಿ ಮಾಡಿದ್ದು, ಎರಡು ಗಾತ್ರದ ಉಪಕರಣಗಳನ್ನು ಅಭಿವೃದ್ಧಿ ಪಡಿಸಿದೆ. ಪೋರ್ಟಬಲ್‌ ಬ್ಯಾಕ್‌ ಪ್ಯಾಕ್‌ (ವ್ಯಕ್ತಿ ಬೆನ್ನಿಗೆ ಹಾಕಿಕೊಂಡು ಸಾಗುವ) ಒಂದು ಮಾದರಿಯಾದರೆ, ಟ್ರಾಲಿ ಮೌಂಟೆಡ್‌ (ತಳ್ಳುವ ಗಾಡಿಯಲ್ಲಿ ತಳ್ಳಿಕೊಂಡು ಹೋಗುವ) ಮತ್ತೊಂದು ಬಗೆಯ ಉಪಕರಣ ಆಗಿದೆ.

ಪೋರ್ಟಬಲ್‌ ಬ್ಯಾಕ್‌ ಪ್ಯಾಕ್‌ ಸುಲಭವಾಗಿ ಸಿಬ್ಬಂದಿಯ ಬೆನ್ನಿಗೆ ಹಾಕಿಕೊಂಡು ಕೊಂಡೊಯ್ಯಬಹುದು. ಶೇ.1ರಷ್ಟುಹೈಪೋಕ್ರೋಟಿಕ್‌ ಸಲ್ಯೂಷನ್‌ ಅನ್ನು ಒಳಗೊಂಡಿರುವ ಸ್ಯಾನಿಟೈಜರ್‌ ಅನ್ನು ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಸಿಂಪಡಿಸಬಹುದು. ಒಂದು ಉಪಕರಣದಿಂದ ಸುಮಾರು 300 ಮೀಟರ್‌ ವಿಸ್ತೀರ್ಣದ ಪ್ರದೇಶಕ್ಕೆ ಸ್ಯಾನಿಟೈಜರ್‌ ಸಿಂಪಡಿಸಬಹುದಾಗಿದೆ. ಆಸ್ಪತ್ರೆಯ ಸ್ವಾಗತ ದ್ವಾರ, ವೈದ್ಯರ ಕೊಠಡಿ, ಸಾರ್ವಜನಿಕರ ಕಚೇರಿ, ಕಾರಿಡಾರ್‌, ಪಾತ್‌ ವೇ, ಮೆಟ್ರೋ ಹಾಗೂ ಬಸ್‌ ನಿಲ್ದಾಣಗಳಲ್ಲಿ ಈ ಬ್ಯಾಕ್‌ ಪ್ಯಾಕ್‌ ಉಪಕರಣಗಳನ್ನು ಬಳಸಬಹುದಾಗಿದೆ.

ಟ್ರಾಲಿ ಮೌಂಟೆಡ್‌ ಉಪಕರಣವು 50 ಲೀಡರ್‌ ದ್ರಾವಣದ ಸಾಮರ್ಥ್ಯ ಹೊಂದಿದೆ. ಈ ಉಪಕರಣದಿಂದ 12ರಿಂದ 15 ಮೀಟರ್‌ ದೂರದಿಂದ ಸಿಂಪಡಣೆ ಮಾಡಬಹುದಾಗಿದೆ. ಈ ಉಪಕರಣವನ್ನು ಮಾಲ್‌, ಆಸ್ಪತ್ರೆ, ಏರ್‌ಪೋರ್ಟ್‌, ಮೆಟ್ರೋ ನಿಲ್ದಾಣ, ಐಸೋಲೇಷನ್‌ ಪ್ರದೇಶ, ಕ್ವಾರಂಟೈನ್‌ ಪ್ರದೇಶ, ಹೈರಿಸ್ಕ್‌ ವಸತಿ ಪ್ರದೇಶಗಳಲ್ಲಿ ಬಳಸಬಹುದಾಗಿದೆ ಎಂದು ಡಿಆರ್‌ಡಿಓ ಪ್ರಕಟಣೆ ತಿಳಿಸಿದೆ.

Follow Us:
Download App:
  • android
  • ios