ಗದಗ(ಮಾ.28): ಇಲ್ಲಿಯ ಜಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದ ಕೊರೋನಾ ನೆಗೇಟಿವ್‌ ವರದಿ ಬಂದಿದ್ದ 80 ವರ್ಷದ ವೃದ್ಧೆ ಶುಕ್ರವಾರ ಮೃತಳಾಗಿದ್ದಾಳೆ. ಮಾ. 24ರಂದು ಗದಗ ಜಿಮ್ಸ್‌ಗೆ ದಾಖಲಾಗಿದ್ದ ವೃದ್ಧೆಗೆ ಎದೆ ನೋವು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಳು.

ಈ ಮಹಿಳೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಗ್ರಾಮವೊಂದರ ನಿವಾಸಿಯಾಗಿದ್ದು, ಮಾ. 24ರಂದು ಮಂಗಳೂರಿನಿಂದ ಬಾಗಲಕೋಟೆಗೆ ಲಾರಿಯಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ತಪಾಸಣೆ ವೇಳೆ ಅಸ್ವಸ್ಥರಾಗಿ​ದ್ದು ಕಂಡು ಬಂದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಕೇರಳದಿಂದ ನಡೆದುಕೊಂಡು ಕೊಡಗಿಗೆ ಬಂದ 133 ಕಾರ್ಮಿಕರಿಗೆ ಗೃಹಬಂಧನ

ಮಾ. 25ರಂದು ವೃದ್ಧೆಯ ರಕ್ತ, ಗಂಟಲು ಮಾದರಿ ಪರೀಕ್ಷೆಗೆ ಕಳಿಸಲಾಗಿತ್ತು. 26ರಂದು ವೃದ್ಧೆಯ ವರದಿ ನೆಗೆಟಿವ್‌ ಅಂತ ಬಂದು ಜಿಲ್ಲಾಡಳಿತ ಸೇರಿದಂತೆ ಜಿಲ್ಲೆಯ ಜನತೆಯೇ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಶುಕ್ರವಾರ ಬೆಳಗ್ಗೆ ಗದಗ ಜಿಮ್ಸ್‌ ಆಸ್ಪತ್ರೆಯಲ್ಲಿ ಸಾವನ್ನಪ್ಪಿದಾಳೆ.