Asianet Suvarna News Asianet Suvarna News

ಸಿಎಂ BSY ಮತ್ತು ಸಿದ್ದರಾಮಯ್ಯ ನಡುವೆ ಫೋನ್ ಸಂಭಾಷಣೆ, ಚರ್ಚೆಯಾದ ವಿಚಾರಗಳು

ಸಿಎಂ ಯಡಿಯೂರಪ್ಪ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ದೂರವಾಣಿ ಮಾತುಕತೆ/ ವಿಪಕ್ಷಗಳ ಮನವಿಗೆ ಸ್ಪಂದಿಸುತ್ತೇನೆ ಎಂದು ತಿಳಿಸಿದ ಯಡಿಯೂರಪ್ಪ/ ಉಚಿತ ಆಹಾರ ದುರುಪಯೋಗ ಆಗುತ್ತಲಿತ್ತು

coronavirus lockdown Karnataka CM BS Yediyurappa and Opposition leader Siddaramaiah telephone talk
Author
Bengaluru, First Published Apr 6, 2020, 2:51 PM IST

ಬೆಂಗಳೂರು(ಏ.06)  ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಿಎಂ ಬಿಎಸ್ ಯಡಿಯೂರಪ್ಪ ದೂರವಾಣಿಯಲ್ಲಿ ಮಾತನಾಡಿ ಇಂದಿರಾ ಕ್ಯಾಂಟೀನ್  ನಲ್ಲಿ ಆಹಾರ ನಿಲ್ಲಿಸಿದ್ದರ ಬಗ್ಗೆ ವಿವರಣೆ ನೀಡಿದ್ದಾರೆ.  ಇಂದಿರಾ ಕ್ಯಾಂಟೀನ್ ನಲ್ಲಿ ನೀಡುತ್ತಿದ್ದ ತಿಂಡಿ, ಊಟ ನಿಲ್ಲಿಸಿರುವ ವಿಷಯದ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಕೊರೋನಾ ಆರ್ಭಟ ಇದ್ದರೂ ಊಟ, ತಿಂಡಿ ನಿಲ್ಲಿಸಿರುವ ಕುರಿತು ಸಿಎಂಗೆ ಸಿದ್ದರಾಮಯ್ಯ ಪತ್ರ ಬರೆದಿದ್ದರು.  ಊಟ ತಿಂಡಿ ಉಚಿತವಾಗಿ ನೀಡಲಾಗ್ತಿತ್ತು. ಆದ್ರೆ ದುರುಪಯೋಗ ಆಗ್ತಿರುವ ಕಾರಣ ದರ ನಿಗದಿ ಮಾಡಲಾಗಿದೆ. ದುರುಪಯೋಗವಾಗದಂತೆ ಊಟ, ತಿಂಡಿಯನ್ನು ಇಂದಿರಾ ಕ್ಯಾಂಟೀನ್ ಮೂಲಕ ಬಡವರಿಗೆ ಉಚಿತವಾಗಿ ನೀಡಿ. ದುರುಪಯೋಗಕ್ಕೆ ಅವಕಾಶ ಮಾಡಿಕೊಡುವ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಎಂದು ಸಿದ್ದರಾಮಯ್ಯ ಸಿಎಂ ಗೆ ಒತ್ತಾಯಿಸಿದ್ದರು.

ಏ. 14 ರ ನಂತರವೂ ಲಾಕ್ ಡೌನ್ ಮುಂದುವರಿಯುತ್ತಾ?

ಈ ಕುರಿತು ಪರಿಶೀಲನೆ ನಡೆಸುವುದಾಗಿ ಯಡಿಯೂರಪ್ಪ ಅವರು ಮಾತುಕತೆ ವೇಳೆ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ.  ಲಾಕ್ ಡೌನ್ ನಿಂದ ರೈತರು, ಕೃಷಿ ಕೂಲಿ ಕಾರ್ಮಿಕರು, ಜತೆಗೆ ಹಲವಾರು ಕ್ಷೇತ್ರಗಳ ದುಡಿಯುವ ವರ್ಗದವರಿಗೆ ತೊಂದರೆಯಾಗಿದೆ. ಅವರ ನೆರವಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಇದೇ ವೇಳೆ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.

ಬಡವರ ಅನ್ನಕ್ಕೆ ಕನ್ನ, ಯಾರ ಪಾಲಾಗ್ತಿದೆ ಇಂದಿರಾ ಕ್ಯಾಂಟೀನ್ ಊಟ

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಪ್ರತಿಪಕ್ಷಗಳ ಸಲಹೆ, ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು  ಕಾರ್ಯಕ್ರಮ ರೂಪಿಸುವುದಾಗಿ ತಿಳಿಸಿದ್ದಾರೆ.  ಕರ್ನಾಟಕ ಸರ್ಕಾರ ಕೊರೋನಾ ವಿರುದ್ಧ ನಿರಂತ ರ ಹೋರಾಟ ಮಾಡಿಕೊಂಡು ಬಂದಿದೆ.  ಒಂದು ಹಂತದ ನಿಯಂತ್ರಣವನ್ನು ಸಾಧಿಸಿದೆ.

Follow Us:
Download App:
  • android
  • ios