ಬೆಂಗಳೂರು, (ಮಾ.25): ಕೊರೋನಾ ವೈರಾಣು ಹರಡುವಿಕೆ ತಡೆಯುವ ಸಂಬಂಧ ವಿದೇಶದಿಂದ ಬಂದವರ ಕೈಗೆ ಮುದ್ರೆಯನ್ನು ಹಾಕಿ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಅಷ್ಟಾದರೂ ಕೆಲವರು ಮನೆಯಿಂದ ಹೊರಗೆ ಬಂದು ಸಾರ್ವಜನಿಕ ಸ್ಥಳಗಳಲ್ಲಿ ಬಿಂದಾಸ್ ಆಗಿ ಓಡಾಡುತ್ತಿದ್ದಾರೆ. ಇದರಿಂದ ಇತರೆ ಜನರ ಆತಂಕಕ್ಕೆ ಕಾರಣವಾಗಿದೆ.

ಸೋಂಕು ಹರಡುವುದನ್ನ ತಡೆಗಟ್ಟಲು ಮೊದಲಿಗೆ ಈ ಕ್ವಾರಂಟೈನ್‌ ನಲ್ಲಿರುವವರನ್ನ ನಾವು ಕಾವಲು ಕಾಯಬೇಕಿದೆ. ಕೇವಲ ಸರ್ಕಾರ, ವೈದ್ಯರು ಮಾತ್ರ ಈ ಕಿಲ್ಲರ್ ಕೊರೋನಾವನ್ನು ತಡೆಗಟ್ಟಲು ಸಾಧ್ಯವಿಲ್ಲ. ನಮ್ಮ ಕರ್ತವ್ಯಗಳು ಸಹ ಮುಖ್ಯವಾಗಿವೆ. 

ಸರ್ಕಾರಗಳು ಮನೆ-ಮನೆಗೆ ಬಂದು ಕಾಯಲು ಸಾಧ್ಯವಿಲ್ಲ. ಆದ್ದರಿಂದ ಸಾರ್ವಜನಿಕರು ಒಂದಿಷ್ಟು ಜವಾಬ್ದಾರಿ ತೆಗೆದುಕೊಂಡು ರಾಜ್ಯದಲ್ಲಿ ಕೊರೋನಾ ವ್ಯಾಪಿಸುವಿಕೆಯನ್ನು ತಡೆಗಟ್ಟಬೇಕು.

ಕೊರೋನಾ ಆತಂಕ: ಬೆಂಗಳೂರಲ್ಲಿ 20 ಸಾವಿರ ಜನರಿಗೆ ಕ್ವಾರಂಟೈನ್‌!

ಈ ಹಿನ್ನೆಯಲ್ಲಿ ನಿಮ್ಮ ಅಕ್ಕ-ಪಕ್ಕದ ಮನೆವರು, ಊರಿನವರು ಯಾರಾದರೂ ಇತ್ತೀಚೆಗೆ ವಿದೇಶದಿಂದ ಬಂದಿರುತ್ತಾರೆಯೋ ಅವರ ಬಗ್ಗೆ ಕೂಡಲೇ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಿ. ಪೊಲೀಸ್ ಠಾಣೆಗೆ ಹೋಗಲು ಆಗಲ್ಲವೆಂದರೆ 104, 100 ನಂಬರ್‌ಗೆ ಕರೆ ಮಾಡಿ ಮಾಹಿತಿ ನೀಡಿ. ಈ ಮೂಲಕ ಸೋಂಕು ಹರಡುವಿಕೆಯನ್ನು ತಡೆಗಟ್ಟಿ.

ಒಂದು ವೇಳೆ ಗೃಹ ಬಂಧನ ಇರುವವರು ಹೊರಗಡೆ ಬಂದ್ರೆ ಅವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ. ಐಪಿಸಿ ಸೆಕ್ಷನ್ 271 (ಕ್ವಾರಂಟೈನ್‌ ನಿಯಮಕ್ಕೆ ಅವಿಧೇಯತೆ) ಒಂದು ಸ್ಪಷ್ಟ ವಿಭಾಗವಾಗಿದೆ, ಆರು ತಿಂಗಳು ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡೂ ಇದೆ ಮತ್ತು ಇದು ಅರಿವಿಲ್ಲದ ಅಪರಾಧದಡಿ ಬರುತ್ತದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಖಡಕ್ ಎಚ್ಚರಿಕೆಯನ್ನೂ ಸಹ ನೀಡಿದ್ದಾರೆ.

 ಈಗಾಗಲೇ ಗೃಹ ಬಂಧನದಲ್ಲಿರುವ ಶಂಕಿತ ಸೋಂಕಿತರು ಕದ್ದುಮುಚ್ಚಿ ಸುತ್ತಾಡುತ್ತಿರುವವರ ಬಗ್ಗೆ ಕೂಡಲೇ ತಿಳಿಸಿ. ಒಂದು ವೇಳೆ  ಕ್ವಾರಂಟೈನ್‌ನಲ್ಲಿರುವವರು ರಾಜಾರೋಷಾವಾಗಿ ತಿರುಗಾಡಿದ್ರೆ ಮುಂದಿನ ದಿನಗಳಲ್ಲಿ ಕೊರೋನಾ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ. ಆದ್ದರಿಂದ ಗೃಹ ಬಂಧನದಲ್ಲಿ ಇರಲೇಬೇಕಾದವರ ವಿವರವನ್ನ ರಾಜ್ಯ ಸರ್ಕಾರ ಜಿಲ್ಲಾವಾರು ಲೀಸ್ಟ್  ತನ್ನ ಆನ್‌ಲೈನ್‌ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಸೋಂಕು ಹರಡುವಿಕೆಯನ್ನ ತಡೆಗಟ್ಟಲು ಇಂತಹ ಮುಂಜಾಗ್ರತಾ ಕ್ರಮಗಳು ಅತ್ಯಗತ್ಯವಾಗಿದ್ದು, ಕರ್ನಾಟ ಸರ್ಕಾರದ ಈ ಕ್ರಮ ನಿಜಕ್ಕೂ ಗ್ರೇಟ್. ತಮ್ಮ-ತಮ್ಮ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ ಕ್ವಾರಂಟೈನ್‌ ನಲ್ಲಿರುವವರ ಮಾಹಿತಿ ತಿಳಿದುಕೊಳ್ಳಿ. ಅವರೇನಾದರೂ ಹೊರಗಡೆ ಓಡಾಡುವುದು ಕಂಡುಬಂದರೆ ಮೇಲೆ ನೀಡಲಾಗಿರುವ ನಂಬರ್‌ಗೆ ಕರೆ ಮಾಡಿ ತಿಳಿಸಿ. ಈ ಮೂಲಕ ಕೊರೋನಾ ವೈರಸ್ ಒದ್ದೋಡಿಸಿ.

ಜಿಲ್ಲಾವಾರು ಹೋಮ್ ಕ್ವಾರಂಟೈನ್‌ಲ್ಲಿರವವರ ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ ಮಾಡಿದೆ.