ಬೆಂಗಳೂರು(ಮಾ.28): ರಾಜ್ಯದಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದ ಮೊದಲ ವ್ಯಕ್ತಿ (ಟೆಕಿ) ಹಾಗೂ ಅವರ ಮಗಳು ಸಂಪೂರ್ಣ ಗುಣಮುಖರಾಗಿದ್ದು, ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ್ದಾರೆ.

ಈ ಹಿಂದೆ ಟೆಕಿಯ ಪತ್ನಿ ಸೇರಿದಂತೆ ಮೂವರು ಗುಣಮುಖರಾಗಿ ಬಿಡುಗಡೆಯಾಗಿದ್ದರು. ಈಗ ಟೆಕಿ ಮತ್ತು ಅವರ ಮಗಳು ಕೂಡ ಬಿಡುಗಡೆಯಾಗುವ ಮೂಲಕ ಸೋಂಕಿನಿಂದ ಗುಣಪಟ್ಟವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಇವರೆಲ್ಲರಿಗೂ ಎರಡು ಬಾರಿ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ ಸೋಂಕಿನಿಂದ ಮುಕ್ತರಾಗಿರುವ ವರದಿ ಬಂದ ಬಳಿಕ ಬಿಡುಗಡೆ ಮಾಡಲಾಗಿದೆ.

ಇವರಾರ‍ಯರೂ ಇನ್ನು ಮುಂದೆ ಮನೆಯಲ್ಲಿ ಪ್ರತ್ಯೇಕವಾಗಿ ಇರಬೇಕಾಗುವುದಿಲ್ಲ. ಲಾಕ್‌ಡೌನ್‌ ತೆರವುಗೊಳಿಸುವವರೆಗೂ ಮನೆಯಲ್ಲೇ ಇರಬೇಕಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ ಶುಕ್ರವಾರ ಸುದ್ದಿಗೋಷ್ಠಿ ವೇಳೆ ಸ್ಪಷ್ಟಪಡಿಸಿದ್ದಾರೆ.