ಬೆಂಗಳೂರು(ಮಾ.30): ಲಾಕ್‌ಡೌನ್‌ ಇರುವ ಸಂದರ್ಭದಲ್ಲಿ ಜನರಿಗೆ ತೊಂದರೆ ಅಗದಂತೆ ಕಾರ್ಯನಿರ್ವಹಿಸಲು ಲಾ ಅಂಡ್ ಆರ್ಡರ್ ಅಂಡ್ ಟ್ರಾಫಿಕ್ ಪೊಲೀಸರಿಗೆ ಬೆಂಗಳೂರು ನಗರ ಆಯುಕ್ತ ಎಸ್‌. ಭಾಸ್ಕರ್ ರಾವ್‌ ಕೆಲವೊಂದು ಸಲಹೆ ಸೂಚನೆಗಳನ್ನ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಹಾಲು, ಪೇಪರ್ ವಾಹನಗಳಿಗೆ ಎಂದಿನಂತೆ ಬಿಡಬೇಕು. ಎಟಿಎಂ ವಾಹನಗಳಿಗೆ ತಡೆ ಹಾಕಬೇಡಿ ಪಾಸ್ ಇಲ್ಲದಿದ್ದರೂ ಪರಿಶೀಲನೆ ಮಾಡಿ ಬಿಡಿ. ಅಂಗಡಿಗಳ ಮುಂದೆ ಪೇಂಟ್‌ನಿಂದ ಮಾರ್ಕ್‌  ಮಾಡಬೇಕು. ರಂಗೋಲಿಗಳಿಂದ ಬರೆದಿರಬಾರದು. ಪೊಲೀಸ್ ಕಚೇರಿಗಳಲ್ಲಿ ಯಾರಿಗೂ ಅವಾಚ್ಯ ಶಬ್ಧಗಳಿಂದ ನಿಂದಿಸದೆ ಅವರ ಕೇಸ್‌ಗೆ ಸ್ಪಂದಿಸಬೇಕು. ಬೆಂಗಳೂರಿಗೆ ಬರುವ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿರಬೇಕು ಅಲ್ಲಿ ಯಾರನ್ನೂ ಓಡಾಡದಂತೆ ಎಚ್ಚರ ವಹಿಸಬೇಕು ಎಂದು ಹೇಳಿದ್ದಾರೆ.

ಬಾಗಲಕೋಟೆ ಪೊಲೀಸರ ಮಾನವಿಯತೆಗೊಂದು ಸಲಾಂ..!

ಇಲ್ಲಿಯವರೆಗೆ ನಗರದಲ್ಲಿ 2008 ಬೈಕ್‌ಗಳನ್ನ ಸೀಜ್ ಮಾಡಿದ್ದಾರೆ. ಬೈಕ್‌ ಮಾಲೀಕರಿಗೆ ವಾರ್ನಿಂಗ್ ಮಾಡಿ ಬಿಟ್ಟು ಬಿಡಿ. ನಾಳೆಯಿಂದ ಮತ್ತೆ ಸೀಜ್ ಮಾಡಲಾಗತ್ತೆ ಅದನ್ನ ಯಾವುದೇ ಕಾರಣಕ್ಕೂ ಲಾಕ್‌ಡೌನ್ ಮುಗಿಯುವವರೆಗೂ ನೀಡಬಾರದು. ಹೆಚ್ಚಿನ ಸಂಖ್ಯೆಯಲ್ಲಿ ಪಾಸ್ ಕೊಡಲಾಗಿದೆ. ಯಾರಿಗಂದ್ರೆ ಆವರಿಗೆ ಕೊಡದೆ ಇರುವ ರೀತಿಯಲ್ಲಿ ಎಚ್ಚರ ವಹಿಸಬೇಕು ಎಂದು ಎಲ್ಲ ಡಿಸಿಪಿಗಳಿಗೆ ಸೂಚನೆ ನೀಡಿದ್ದಾರೆ. 

ರಸ್ತೆಗಳಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳು ವಿಡಿಯೋ ರೆಕಾರ್ಡ್ ಮೂಲಕ ಕೆಲಸ ಮಾಡಬೇಕು. ಪಿಜಿಗಳು ಹಲವರಿಗೆ ತೊಂದರೆ ಕೊಡುತ್ತಿದ್ದಾರೆ. ಇದರ ಬಗ್ಗೆ ಎಚ್ಚರ ವಹಿಸಿ ಬಾಡಿಗೆ ಹೆಚ್ಚಳ ಮಾಡೋದು ಕಂಡು ಬಂದರೆ ಪೊಲೀಸರು ಮಾಲೀಕರಿಗೆ ಮಾಹಿತಿ ನೀಡಬೇಕು. ಮೂರು ಶಿಫ್ಟ್‌ಗಳ ಮೂಲಕ ಪೊಲೀಸ್ ಸಿಬ್ಬಂದಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.