ವಿಶ್ವದೆಲ್ಲೆಡೆ ಕೊರೋನಾದ್ದೆ ಕಾಟ. ಮನೆಯಲ್ಲಿಯೇ ಉಳಿದಿದ್ದಾರೆ ಎಲ್ಲರೂ. ಕೆಲವೆಡೆ ದಂಪತಿ ಅತ್ಯುತ್ತಮ ಸಂಬಂಧವನ್ನು ಒಟ್ಟಾಗಿ ಕಳೆಯುತ್ತಿದ್ದರೆ, ಮತ್ತೊಂದೆಡೆ ಜೊತೆಗಿದ್ದು ಜಗಳ ಹೆಚ್ಚಾಗಿವೆಯಂತೆ. ಇದರಿಂದ ಡಿವೋರ್ಸ್ ಸಂಖ್ಯೆಯೂ ಹೆಚ್ಚಾಗಿದೆಯಂತೆ. ಅಷ್ಟಕ್ಕೂ ಇತ್ತೀಚೆಗೆ ದಾಂಪತ್ಯಕ್ಕೆ ಕಾಲಿಟ್ಟು, ವಿದೇಶದಲ್ಲಿರುವ ಈ ನಟಿ ಏನು ಮಾಡುತ್ತಿದ್ದಾರೆ ನೀವೇ ನೋಡಿ...

ಬಹುಭಾಷಾ ತಾರೆ, ಡಿಂಪಲ್‌ ಕ್ಷೀನ್‌ ರಚಿತಾ ರಾಮ್ ಮುದ್ದಿನ ಅಕ್ಕ ನಿತ್ಯಾ ರಾಮ್‌ ಇತ್ತೀಚಿಗೆ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ಮೂಲದ ಉದ್ಯಮಿ ಜೊತೆ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಕಿರುತೆರೆಗೆ ಗುಡ್‌ ಬೈ ಹೇಳಿ, ಪತಿಯ ಜೊತೆ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ. ಈಗ ಎಲ್ಲೆಡೆ ಕೊರೋನಾ ವೈರಸ್‌ ಹೆಚ್ಚಾಗುತ್ತಿರವ ಕಾರಣ ಮಾಸ್ಕ್‌ ಧರಿಸುವುದು ಹಾಗೂ ಕೈಗಳನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಕಡ್ಡಾಯ ಹೌದು. ಈ ನಡುವೆಯೂ ನವ ದಂಪತಿ, ಪ್ರೇಮಿಗಳು ರೊಮ್ಯಾನ್ಸ್ ಮಾಡುವುದು ಹೇಗೆಂದು ಹೇಳಿ ಕೊಟ್ಟಿದ್ದಾರೆ ನಿತ್ಯಾ.

ಮತ್ತೆ ದಾಂಪತ್ಯಕ್ಕೆ ಕಾಲಿಟ್ಟ ರಚಿತಾ ಅಕ್ಕ ನಿತ್ಯಾ ರಾಮ್!

ಅಷ್ಟೇ ಅಲ್ಲ, 'Romance Responsibly' ಎಂದು ಬರೆದುಕೊಂಡಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು, ಸಿಕ್ಕಾಪಟ್ಟೆ ಕಾಮೆಂಟ್‌ ಮಾಡುತ್ತಿದ್ದಾರೆ. 'ನಿಮ್ಮಿಬ್ಬರನ್ನು ಯಾವುದಾರೋ ಮಾಸ್ಕ್‌ ಜಾಹೀರಾತಿಗೆ ಕಳುಹಿಸಬೇಕು', 'ನಿಮ್ಮ ರೋಮ್ಯಾನ್ಸ್‌ ಇನ್ನೂ ಸ್ಟ್ರಾಂಗ್‌ ಆಗಲಿ ' ಎಂದು ಹೇಳುವ ಮೂಲಕ ಕಾಲೆಳೆದಿದ್ದಾರೆ.

 

 
 
 
 
 
 
 
 
 
 
 
 
 

Romance responsibly 💏 #coronaeffect😷 #staysafe #neverstopromance❤️

A post shared by Nithya Ram (@nithyaraam) on Mar 20, 2020 at 8:19pm PDT

ತೆಲುಗು ನಟಿ ಶ್ರೀ ರೆಡ್ಡಿ ನಿರಂತರ ಸೆಕ್ಸ್‌ನಿಂದ ಕೊರೋನಾ ವೈರಸ್ ಅನ್ನು ದೂರವಿಡಬಹುದು ಎನ್ನುವ ಮೂಲಕ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದರು. ಸಾಲದ್ದಕ್ಕೆ ಅದಕ್ಕೆ ಮತ್ತೆ ಅಸಭ್ಯವಾಗಿ ಪ್ರತಿಕ್ರಿಯೆ ನೋಡಿ, ತಮ್ಮ ಲೆವೆಲ್ ಏನೆಂದು ಜಗತ್ತಿಗೇ ಜಗಜ್ಜಾಹೀರಗೊಳಿಸಿದ್ದರು.