Asianet Suvarna News Asianet Suvarna News

ಕೊರೋನಾ ಭೀತಿ ನಡುವೆಯೇ 72 ಸಾವಿರು ಲಡ್ಡು ವಿತರಣೆ

ಚಾಮರಾಜನಗರದಲ್ಲಿ ಕೊರೋನಾ ವೈರಸ್ ಭೀತಿ ನಡುವೆಯೇ 72 ಸಾವಿರ ಲಡ್ಡುಗಳನ್ನು ಜನರಿಗೆ ಹಂಚಲಾಗಿದೆ.

 

72 thousand laddu distributed to people in midst of COVID19
Author
Bangalore, First Published Mar 25, 2020, 12:26 PM IST

ಚಾಮರಾಜನಗರ(ಮಾ.25): ರಾಜ್ಯದ ಪ್ರಸಿದ್ಧ ಧಾರ್ಮಿಕ ತಾಣ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಸಲುವಾಗಿ ಸಿದ್ಧಪಡಿಸಲಾಗಿದ್ದ 72 ಸಾವಿರ ಲಾಡು ಪ್ರಸಾದವನ್ನು ಶ್ರೀ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಬೆಟ್ಟದ ಸುತ್ತಮುತ್ತಲ ಗ್ರಾಮಸ್ಥರಿಗೆ ವಿತರಣೆ ಮಾಡಲಾಯಿತು.

ಕೊರೋನಾ ಭೀತಿ: ನಿರ್ಗತಿಕರಿಗೆ ಆಶ್ರಯ ನೀಡಿದ ಪಾಲಿಕೆ

ಪ್ರತಿ ವರ್ಷದ ಯುಗಾದಿ ಜಾತ್ರೆ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಆಗಮಿಸುತ್ತಿದ್ದರು. ಲಕ್ಷಾಂತರ ಲಾಡು ಪ್ರಸಾದವನ್ನು ಮಾರಾಟ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಕೊರೋನಾ ಪರಿಣಾಮ ಏ. 1ರವರೆಗೆ ಮಹದೇಶ್ವರ ಬೆಟ್ಟಕ್ಕೆ ಭಕ್ತರಿಗೆ ನಿಷೇಧ ವಿಧಿಸಿರುವುದಿಂದ ಮುಂಚಿತವಾಗಿಯೇ ಸಿದ್ದಪಡಿಸಲಾಗಿದ್ದ ಲಾಡು ಪ್ರಸಾದವನ್ನು ದೇವಾಲಯದ ಸುತ್ತಮುತ್ತಲ ಗ್ರಾಮಗಳಲ್ಲಿ ಭಕ್ತಾದಿಗಳಿಗೆ ಉಚಿತವಾಗಿ ನೀಡಲಾಯಿತು.

ದೇವರ ಪ್ರಸಾದ ವ್ಯರ್ಥವಾಗದೇ ಕಟ್ಟಕಡೆಯ ಸಾಮಾನ್ಯ ಭಕ್ತಾದಿಗಳಿಗೆ ತಲುಪಲೆಂಬುದೇ ಪ್ರಾಧಿಕಾರದ ಆಶಯವಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.

Follow Us:
Download App:
  • android
  • ios