ಬೆಳಗಾವಿ, (ಏ.06): ಕೊರೋನಾ ಲಾಕ್‌ಡೌನ್‌ನಿಂದ ಮದ್ಯ ಸಿಗದೇ ಕುಡುಕನೊಬ್ಬ ಕಳ್ಳ ಭಟ್ಟಿ ಸಾರಾಯಿ ಸೇವಿಸಿ ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಶಿವಬಸವನಗರದ ಬಳಿ  ನಡೆದಿದೆ.

ಅಶೋಕ್ ನಗರ ನಿವಾಸಿ ಪ್ರಕಾಶ್ ಮಸರಗುಪ್ಪಿ(33) ಮೃತ ವ್ಯಕ್ತಿ.  ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಈತ ಕಳ್ಳಬಟ್ಟಿ ಸರಾಯಿ ಸೇವಿಸಿ ಸಾವನ್ನಪ್ಪಿದ್ದಾನೆಂದು ಸ್ಥಳೀಯರ ಹೇಳುತ್ತಿದ್ದಾರೆ.

ಲಾಕ್‌ಡೌನ್ ಎಫೆಕ್ಸ್: ರಾಜ್ಯದಲ್ಲಿ ಮದ್ಯ ಸಿಗದೆ 17 ಮಂದಿ ಆತ್ಮಹತ್ಯೆ! 

ಆದ್ರೆ, ಕೆಲವರು ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಮಾಳಮಾರುತಿ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.  ತನಿಖೆಯ ಬಳಿಕವೇ ಸಾವಿನ ಸತ್ಯಾಸತ್ಯೆತೆ ತಿಳಿಯಬೇಕಾಗಿದೆ.

ಲಾಕ್ ಡೌನ್ ಹಿನ್ನೆಲ್ಲೆಯಲ್ಲಿ ವೈನ್ ಶಾಪ್ ಅಂಗಡಿಗಳು ಬಂದ್ ಆಗಿವೆ. ಇದರಿಂದ ಕಳ್ಳ ಭಟ್ಟಿ ಸಾರಾಯಿ ಮಾರಾಟ ಜೋರಾಗಿ ನಡೆದಿದ್ದು, ಒಬ್ಬ ಕಳ್ಳ ಭಟ್ಟಿ ಸಾರಾಯಿ ಕುಡಿದು ಮೃತ ಪಟ್ಟಿದ್ದಾನೆ ಎಂದು ಎನ್ನಲಾಗುತ್ತಿದೆ.

ಕಳೆದ ಕೆಲ ದಿನಗಳಿಂದ ಮದ್ಯದಂಗಡಿಗಳು ಬಂದ್ ಆಗಿದ್ದು, ಕುಡುಕರಿಗೆ ಇನ್ನಿಲ್ಲದ ತೊಂದರೆ ಉಂಟಾಗುತ್ತಿದೆಯಂತೆ. ಈ ನಡುವೆ ಮದ್ಯ ಸಿಗದೇ ಖಿನ್ನತೆಗೆ ಒಳಗಾಗಿ ಕಳೆದ ಆರು ದಿನಗಳಲ್ಲಿ ರಾಜ್ಯದ ಹಲವೆಡೆ ಒಟ್ಟು 13 ಮಂದಿ ಸಾವನ್ನಪ್ಪಿದ್ದಾರೆ.