ಹಾವೇರಿ ಜಿಲ್ಲೆಯಲ್ಲಿಲ್ಲ ಕೊರೋನಾ ಪಾಸಿಟಿವ್: 22 ವರದಿ ನೆಗೆಟಿವ್, ನಿಟ್ಟುಸಿರು ಬಿಟ್ಟ ಜನತೆ!
ದೆಹಲಿಗೆ ತೆರಳಿದ್ದ ಶಿಗ್ಗಾವಿಯ 12 ಜನ, ಹಾವೇರಿ ಹಾಗೂ ರಾಣಿಬೆನ್ನೂರಿನ ತಲಾ ಒಬ್ಬರು ಸೇರಿ 14 ಜನರ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಎಲ್ಲವೂ ನೆಗಟಿವ್ ಬಂದಿದೆ| ಮುಂಜಾಗ್ರತಾ ಕ್ರಮವಾಗಿ 12 ಜನರಿಗೆ ಆಸ್ಪತ್ರೆಯಲ್ಲಿ ಐಸೋಲೇಶನ್‌ನಲ್ಲಿಟ್ಟು ಚಿಕಿತ್ಸೆ|
ಹಾವೇರಿ(ಏ.05): ದೆಹಲಿ ಪ್ರವಾಸಕ್ಕೆ ಹೋಗಿ ಬಂದಿದ್ದ 14 ಜನರ ರಕ್ತ, ಗಂಟಲು ದ್ರವದ ಪರೀಕ್ಷಾ ವರದಿಗಳೆಲ್ಲವೂ ನೆಗಟಿವ್ ಬಂದಿದ್ದು, ಜಿಲ್ಲೆಯ ಜನರ ಆತಂಕ ನಿವಾರಣೆಯಾದಂತಾಗಿದೆ.
ಮಾರ್ಚ್ ಆರಂಭದಲ್ಲಿ ದೆಹಲಿಗೆ ತೆರಳಿದ್ದ ಶಿಗ್ಗಾವಿಯ 12 ಜನ, ಹಾವೇರಿ ಹಾಗೂ ರಾಣಿಬೆನ್ನೂರಿನ ತಲಾ ಒಬ್ಬರು ಸೇರಿ 14 ಜನರ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಎಲ್ಲವೂ ನೆಗಟಿವ್ ಬಂದಿದೆ. ಶನಿವಾರ ಮತ್ತೆ 12 ಜನರನ್ನು ತಪಾಸಣೆಗೆ ಒಳಪಡಿಸಿ ಅವರೆಲ್ಲರ ರಕ್ತ, ಗಂಟಲಿನ ದ್ರವವನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಆ 12 ಜನರನ್ನು ಆಸ್ಪತ್ರೆಯಲ್ಲಿ ಐಸೋಲೇಶನ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಕ್ವಾರಂಟೈನ್‌ನಲ್ಲಿದ್ದ ವಿದೇಶದಿಂದ ಬಂದ 2 ಸಾವಿರಕ್ಕೂ ಹೆಚ್ಚು ಜನಕ್ಕೆ ಕೊರೋನಾ ನೆಗೆಟಿವ್
ಈವರೆಗೆ ಶಂಕಿತ ಲಕ್ಷಣಗಳುಳ್ಳ ಒಟ್ಟು 217 ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು ಇವರಲ್ಲಿ 90 ಜನರ 28 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಂಡಿದೆ. ಉಳಿದ 115 ಜನರು ಹೋಂ ಕ್ಯಾರಂಟೈನ್‌ನಲ್ಲಿದ್ದಾರೆ. ಈವರೆಗಿನ ಲ್ಯಾಬ್‌ನಿಂದ ಬಂದಿರುವ 22 ವರದಿಗಳು ನೆಗೆಟಿವ್ ಆಗಿದೆ ಎಂದು ಡಿಎಚ್‌ಒ ಡಾ.ರಾಜೇಂದ್ರ ದೊಡ್ಮನಿ ತಿಳಿಸಿದ್ದಾರೆ.