ಬಳ್ಳಾರಿ,(ಮಾ.26) :  ಕೋವಿಡ್-19 ಹಿನ್ನೆಲೆಯಲ್ಲಿ 2 ಸಾವಿರ ವೆಂಟಿಲೇಟರ್ ಗಳನ್ನು ಖರೀದಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಶೀಘ್ರದಲ್ಲಿ ಅವುಗಳನ್ನು ವಿದೇಶದಿಂದ ಖರೀದಿಸಿ ತರಲಾಗುವುದು ಎಂದು ಹೇಳಿದರು.

ಕೇಂದ್ರ ಸರಕಾರವು ವೆಂಟಿಲೇಟರ್ ಗಳನ್ನು ಖರೀದಿಸಿ ನೀಡಲಾಗುವುದು ಎಂದು ತಿಳಿಸಿದೆ ಮತ್ತು ಈ ಕೋವಿಡ್-19 ವಿರುದ್ಧದ ಹೋರಾಟಕ್ಕೆ ಸಾಕಷ್ಟು ಪ್ರಮಾಣದಲ್ಲಿ ಹಣ ಮೀಸಲಿರಿಸಿದೆ ಎಂದರು.

ಕಾರು ತಯಾರಿಕೆ ನಿಲ್ಲಿಸಿ ವೆಂಟಿಲೇಟರ್ ಉತ್ಪಾದನೆಗೆ ಮುಂದಾದ ಮಹೀಂದ್ರ!

ಬಳ್ಳಾರಿ ಜಿಲ್ಲಾಸ್ಪತ್ರಗೆ ಭೇಟಿ ಬಳಿಕ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕೋವಿಡ್-19ಗೆ ಸಂಬಂಧಿಸಿದಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು ರಾಮುಲು, ನಮ್ಮ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೋವಿಡ್-19 ಚಿಕಿತ್ಸಗೆ ಸಂಬಂಧಿಸಿದಂತೆ ವೆಂಟಿಲೇಟರ್ ಸೇರಿದಂತೆ ಅಗತ್ಯ ಪರಿಕರಗಳನ್ನು ಸಮರ್ಪಕವಾಗಿ ಒದಗಿಸುವ ನಿಟ್ಟಿನಲ್ಲಿ ಇತ್ತೀಚೆಗೆ ನಡೆದ ಟಾಸ್ಕ್‍ಪೋರ್ಸ್ ಸಮಿತಿ ಸಭೆಯಲ್ಲಿ ವಿವರಿಸಿದರು.

ದೇಶಕ್ಕೆ ಕೋವಿಡ್-19 ರೂಪದಲ್ಲಿ ಸಂಕಷ್ಟದ ಸ್ಥಿತಿ ಎದುರಾಗಿದ್ದು, ಈ ಹೋರಾಟದಲ್ಲಿ ವೈದ್ಯರು,ಪೊಲೀಸರು,ಜಿಲ್ಲಾಡಳಿತ,ಮಾಧ್ಯಮ ಸೇರಿದಂತೆ ಎಲ್ಲರ ಪಾತ್ರ ಶ್ಲಾಘನೀಯ ಎಂದರು.

ತುರ್ತುಚಿಕಿತ್ಸೆಗೆ ಮಾತ್ರ ಚಿಕಿತ್ಸೆ ಎಂದು ಹೇಳಿ ತಮ್ಮ ಖಾಸಗಿ ಆಸ್ಪತ್ರೆಗಳನ್ನು ಬಂದ್ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲ ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಒಪನ್ ಮಾಡಿ ಜನರಿಗೆ ಚಿಕಿತ್ಸೆ ಕೊಡುವ ಕೆಲಸ ಮಾಡಿ ಎಂದು ಸೂಚನೆ ನೀಡಿದರು. 

ಪ್ರಧಾನಮಂತ್ರಿಗಳು ಹೇಳಿದಂತೆ 21 ದಿನಗಳ ಕಾಲ ಮನೆಯಲ್ಲಿಯೇ ಇರುವುದಕ್ಕೆ ಲಕ್ಷ್ಮಣರೇಖೆ ಹಾಕಿಕೊಳ್ಳುವುದರ ಮೂಲಕ ಈ ಸರಪಳಿಯನ್ನು ನಾವು ಮುರಿಯಬೇಕು ಮತ್ತು ಈ ಸವಾಲನ್ನು ಗೆಲ್ಲಬೇಕು ಎಂದು ಅವರು ಮನವಿ ಮಾಡಿದರು.