ಕರ್ನಾಟಕದಲ್ಲಿ ಕೊರೋನಾ ಕೇಸ್‌ಗಳು ದಿನದಿಂದ ದಿನಕ್ಕೆ ಏರುತ್ತೇ ಇದೆ. ಇವತ್ತು ಒಂದೇ ದಿನ ಬರೊಬ್ಬರಿ 16 ಜನರಲ್ಲಿ ಸೋಂಕು ದೃಢವಾಗಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ರಾಜ್ಯದ ಕೊರೋನಾ ಮಾಹಿತಿದಾರರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವರೂ ಆಗಿರುವ ಸುರೇಶ್ ಕುಮಾರ್ ಅವರು ಮಾಹಿತಿ ನೀಡಿದರು.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 144ಕ್ಕೇರಿದೆ. ಒಂದೇ ದಿನ 16 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ರಾಜ್ಯದಲ್ಲಿ 4 ಮಂದಿ ಮೃತಪಟ್ಟಿದ್ದು 11 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
16 ಮಂದಿ ಸೋಂಕಿತರ ಪೈಕಿ 7 ಪ್ರಕರಣಗಳು ಮೈಸೂರಿನಲ್ಲಿ ಪತ್ತೆಯಾಗಿವೆ. ಇನ್ನು ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ 28ಕ್ಕೇರಿದೆ. ಈ 7 ಮಂದಿ ಪೈಕಿ ನಾಲ್ವರು ದೆಹಲಿಯ ತಬ್ಲೀಘಿ ಜಮಾತ್ ಗೆ ಹೋಗಿದ್ದವರು.
ಇನ್ನು ಒಂದು ಪ್ರಕರಣ 109ನೇ ಕೊರೋನಾ ಸೋಂಕಿತನಿಂದ ಬಂದಿದೆ. ಇನ್ನೆರೆಡು ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ವಿವರಿಸಿದರು.
ಸೋಂಕಿತರ ಜಿಲ್ಲಾವಾರು ಮಾಹಿತಿ
ಬೆಂಗಳೂರು- 55
ಮೈಸೂರು- 28
ದಕ್ಷಿಣ ಕನ್ನಡ- 12
ಉತ್ತರ ಕನ್ನಡ- 8
ಚಿಕ್ಕಬಳ್ಳಾಪುರ- 7
ಕಲಬುರಗಿ- 5
ಬಳ್ಳಾರಿ- 5
ದಾವಣಗೆರೆ- 3
ಉಡುಪಿ- 3
ಧಾರವಾಡ- 1
ಕೊಡಗು- 1
ತುಮಕೂರು- 1
ಬೀದರ್- 10
ಬಾಗಲಕೋಟೆ- 1
ಬೆಳಗಾವಿ- 3
ಬೆಂಗಳೂರು ಗ್ರಾಮಾಂತರ-1
ಒಟ್ಟು 144
Scroll to load tweet…
