ಕಲಬುರಗಿಯಲ್ಲಿ ಮತ್ತೆ ಕೊರೋನಾ ಹಾವಳಿ, ರಾಜ್ಯದಲ್ಲಿ 100ರ ಗಡಿ ದಾಟಿದ ಸೊಂಕಿತರ ಸಂಖ್ಯೆ
ಕರ್ನಾಟಕದಲ್ಲಿ ಕೊರೋನಾ ಮಾಹಾಮಾರಿ ದಿನೇ ದಿನೇ ತನ್ನ ಅಟ್ಟಹಾಸವನ್ನು ಮುಂದುವರಿಸಿದ್ದು, ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇದೀಗ ಬಂದ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ಪ್ರಕಾರ ಕೊರೋನಾ ಸಂಖ್ಯೆ ನೂರರ ಗಡಿ ದಾಟಿದೆ.
ಬೆಂಗಳೂರು, (ಮಾ.31): ನಿನ್ನೆ ಅಂದ್ರೆ ಸೋಮವಾರ ಅಷ್ಟೇ 88 ಇದ್ದ ಕೊರೋನಾ ಸೋಂಕಿತರ ಸಂಖ್ಯೆ ಇಂದು (ಮಂಗಳವಾರ) 100ರ ಗಡಿ ದಾಟಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಮಂಗಳವಾರ ಒಂದೇ ದಿನದಲ್ಲಿ 13 ಕೇಸ್‌ಗಳು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 101ಕ್ಕೆ ಏರಿಕೆಯಾಗಿದ್ದು,ಈವರೆಗೆ 8 ಮಂದಿ ಕೊರೋನಾ ವೈರಸ್‌ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕಲಬುರಗಿ: 12ದಿನದಿಂದ ಇಲ್ಲ ಹೊಸ ಕೊರೋನಾ ಕೇಸ್, ಇದರ ಬೆನ್ನಲ್ಲೇ ಮತ್ತೊಂದು ಗುಡ್ ನ್ಯೂಸ್
ಇನ್ನು ಬಹುಮುಖ್ಯವಾಗಿ ಕಳೆದ 11 ದಿನಗಳಿಂದ ಕಲಬುರಗಿ ಜಿಲ್ಲೆಯಲ್ಲಿ ಒಂದೂ ಕೊರೋನಾ ಪಾಸಿಟಿವ್ ಕಂಡುಬಂದಿರಲ್ಲಿ. ಆದ್ರೆ, ಇದೀಗ 12 ದಿನದಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ಪ್ರಕಾರ, ಮಂಗಳವಾರ ಕಲಬುರಗಿಯ ಓರ್ವರಿಗೆ ಸೋಂಕು ತಗುಲಿರುವುದು ದೃಢವಾಗಿದೆ.
ಕಳೆದ 11 ದಿನಗಳಿಂದ ಯಾವುದೇ ಕೊರೋನಾ ಪಾಸಿಟಿವ್ ಪತ್ತೆಯಾಗಿಲ್ಲ ಎಂದು ನಿರಾಳರಾಗಿದ್ದ ಕಲಬುರಗಿ ಜಿಲ್ಲೆಯ ಜನರಿಗೆ ಇದೀಗ ಮತ್ತೆ ಭಯ ಶುರುವಾಗಿದೆ.
ಹಾಗಾದ್ರೆ ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್..?
ಬೆಂಗಳೂರು-45
ಮೈಸೂರು-14
ಚಿಕ್ಕಬಳ್ಳಾಪುರ-9
ದಕ್ಷಿಣ ಕನ್ನಡ-8
ಉತ್ತರ ಕನ್ನಡ-8
ಕಲಬುರಗಿ-4
ದಾವಣಗೆರೆ-3
ಉಡುಪಿ-3
ಬಳ್ಳಾರಿ-3
ತುಮಕೂರು-2
ಕೊಡಗು-1
ಧಾರವಾಡ-1
ಒಟ್ಟು 101