ಬೆಂಗಳೂರು, (ಏ.06): ಕರ್ನಾಟಕದಲ್ಲಿ ಇಂದು (ಸೋಮವಾರ) ಒಂದೇ ದಿನದಲ್ಲಿ 12 ಕೊರೋನಾ ವೈರಸ್ ಕೇಸ್ ದೃಢಪಟ್ಟಿದೆ.

ಸೋಮವಾರ ಸಂಜೆ 5ಗಂಟೆಯ ವರಗೆ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 163ಕ್ಕೆ ಏರಿಕೆಯಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನು 20 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.

ಎಚ್ಚರಿಕೆ: ಕೊರೋನಾ ವ್ಯಾಪಿಸುತ್ತಿರುವ ಬೆನ್ನಲ್ಲೇ ಆತಂಕಕಾರಿ ವಿಷಯ ಬಿಚ್ಚಿಟ್ಟ ಆರೋಗ್ಯ ಇಲಾಖೆ

ಇಂದು ಪತ್ತೆಯಾದ 12ಕೇಸ್‌ಗಳ ಪೈಕಿ ಮೈಸೂರಿನಲ್ಲಿ 7 ಜನರಿಗೆ, ಬೆಂಗಳೂರಿನಲ್ಲಿ 2, ಬಾಗಲಕೋಟೆಯಲ್ಲಿ 2 ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. 

ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಬೆಂಗಳೂರಿನ 32 ವರ್ಷದ ವ್ಯಕ್ತಿ ಅಂದರೇ 43, 44ನೇ ಕೊರೋನಾ ಸೋಂಕಿತ ದಂಪತಿಗಳ ಮಗ, ತಂದೆ-ತಾಯಿಗಳ ಸಂಪರ್ಕ ಹೊಂದಿದ್ದರಿಂದಾಗಿ ಕೊರೊನಾ ವೈರಸ್ ಸೋಂಕು ತಗುಲಿದೆ. 

ಬೆಂಗಳೂರಿನಲ್ಲಿ ಕೇರಳ ಮೂಲದ ವ್ಯಕ್ತಿಗೂ ಕೊರೊನಾ ಸೋಂಕು ತಗುಲಿದೆ. ಅಲ್ಲದೇ ಮೈಸೂರಿನಿಂದ ದೆಹಲಿಯ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೂವರು ಸೇರಿದಂತೆ 7 ಜನರಿಗೆ ಕೊರೊನಾ ವೈರಸ್ ದೃಢವಾಗಿದೆ.

ಇದಲ್ಲದೇ ಭಾಗಲಕೋಟೆಯ ಇಬ್ಪರಿಗೆ ಸೇರಿದಂತೆ ಇಂದು ಒಂದೇ ದಿನ ರಾಜ್ಯದಲ್ಲಿ 12 ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿವೆ. 

ಯಾವ ಜಿಲ್ಲೆಯಲ್ಲಿ ಎಷ್ಟು..?
ಬೆಂಗಳೂರು-59
ಮೈಸೂರು-35
ಚಿಕ್ಕಬಳ್ಳಾಪುರ-07
ದಕ್ಷಿಣ ಕನ್ನಡ-12
ಕಲಬುರಗಿ-05
ದಾವಣಗೆರೆ-03
ಉಡುಪಿ-03
ಬಳ್ಳಾರಿ-06
ತುಮಕೂರು-01
ಕೊಡಗು-01
ಧಾರವಾಡ-01
ಬೀದರ್-10
ಬೆಳಗಾವಿ-07
ಬೆಂಗಳೂರು ಗ್ರಾಮಾಂತರ-02
ಒಟ್ಟು 163