ನವದೆಹಲಿ(ಏ. 06) ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿರುವ ಕೊರೋನಾ ಹೊಡೆದು ಓಡಿಸಲು ಇಡೀ ಪ್ರಪಂಚವನ್ನೇ ಲಾಕ್ ಡೌನ್ ಮಾಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಈ ಬಗ್ಗೆ ಒಂದು ನಿರ್ದೇಶನ ನೀಡಿದೆ ಎಂಬ ಸುದ್ದಿ ಮತ್ತು ಸಂದೇಶ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇದೆ.

ಹಾಗಾದರೆ ಇದರ ಸತ್ಯಾಸತ್ಯತೆ ಏನು? ನಾಲ್ಕು ಹಂತಗಳಲ್ಲಿ ಲಾಕ್ ಡೌನ್ ಕೈಗೊಂಡು ವೈರಸ್ ಗೆ ಕೊನೆ ಹಾಡಬೇಕು ಎಂಬುದನ್ನು ಹೇಳಿದೆ.. ಇದು ಹೌದೆ?

ತಬ್ಲಿಘಿಗಳ ಹುಚ್ಚಾಟ ಒಂದೇ ಎರಡೇ!

ಮೊದಲ ಹಂತದಲ್ಲಿ ಒಂದು ದಿನ್ ಲಾಕ್ ಡೌನ್, ಎರಡನೇ ಹಂತದಲ್ಲಿ 21 ದಿನ ಲಾಖ್ ಡೌನ್, ನಂತರ 5 ದಿನ ರಿಲಾಕ್ಸ್, ಬಳಿಕ ಮೂರನೇ ಹಂತದಲ್ಲಿ 28 ದಿನ ಲಾಕ್ ಡೌನ್ ಅದಾದ ಮೇಲೆ 5 ದಿನ ಸಡಿಲ, ನಾಲ್ಕನೇ ಹಂತದಲ್ಲಿ 15 ದಿನ ಲಾಖ್ ಡೌನ್ ಮಾಡಲಾಗುತ್ತದೆ ಎಂಬ ಸಂದೇಶ ಹರಿದಾಡುತ್ತಿದೆ.

ಭಾರತದಲ್ಲಿ ಮೊದಲ ಹಂತವಾಗಿ ಮಾರ್ಚ್ 22 ರಂದು ಜನತಾ ಕರ್ಫ್ಯೂ ಮಾಡಲಾಗಿತ್ತು ಅದಾದ ಮೇಲೆ 21 ದಿನಗಳ ಲಾಕ್ ಡೌನ್ ಘೋಷಣೆ ಮಾಡಲಾಗಿದೆ ಇದನ್ನು ಬಿಟ್ಟು ಮುಂದಿನ ದಿನಗಳಲ್ಲಿ ಉಳಿದ ಹಂತಕ್ಕೆ ಸಿದ್ಧವಾಗಬೇಕಿದೆ ಎಂದು ಹೇಳಲಾಗಿದೆ.

ಈ ವಿಚಾರವನ್ನು ಬಹಳ ಗಂಭೀರವಾಗಿ ತೆಗೆದುಕೊಂಡ ವಿಶ್ವ ಆರೋಗ್ಯ ಸಂಸ್ಥೆ ಈ ರೀತಿಯ ಯಾವುದೇ ನಿರ್ದೇಶನದ ಸೂತ್ರ ನಾವು ಹೊರಡಿಸಿಲ್ಲ ಎಂದು ತಿಳಿಸಿದೆ. ಒಂದು ಕಡೆ ಕೊರೋನಾ ವೈರಸ್ ಸುದ್ದಿಗಳು , ಆತಂಕ ಹರಿದಾಡುತ್ತಲೇ ಇದ್ದರೆ ಇನ್ನೊಂದು ಕಡೆ ಈ ರೀತಿಯ ಸುಳ್ಳು ಸುದ್ದಿಗಳು ಶರವೇಗದಲ್ಲಿ ಹರಿದಾಡುತ್ತಿದೆ.