ಬೀಜಿಂಗ್(ಮಾ28): ಚೀನಾದಲ್ಲಿ ಕೊರೋನಾ ಸೋಂಕು ಪತ್ತೆಯಾದ ಮೊದಲ ವ್ಯಕ್ತಿ ಬಾವಲಿಯೊಂದಿಗೆ ಸೆಕ್ಸ್ ಮಾಡುತ್ತಿದ್ದನಾ? ಇದರಿಂದಾಗಿಯೇ ಕೊರೋನಾ ಹಬ್ಬಿತಾ? ಸೋಶಿಯಲ್ ಮಿಡಿಯಾದಲ್ಲಿ ಇಂತಹುದ್ದೊಂದು ಸುದ್ದಿ ಹರಿದಾಡಲಾರಂಭಿಸಿದೆ. 

ಹೌದು ವರ್ಲ್ಡ್‌ ನ್ಯೂಸ್ ಡೈಲಿ ರಿಪೋರ್ಟಟ್ ಎಂಬ ಜಾಲಾತಾಣ ಈ ಕುರಿತಾದ ವರದಿ ಪ್ರಕಟಿಸಿದ್ದು, ಹುಬೇ ಪ್ರಾಂತ್ಯದ 24 ವರ್ಷದ ಯಿನ್ ದಾವ್ ತಾಂಗ್‌ನಲ್ಲಿ ನವೆಂಬರ್ 17 ರಂದು ಮೊಟ್ಟ ಮೊದಲು ನೋವೆಲ್ ಕೊರೋನಾ ವೈರಸ್ ಪತ್ತೆಯಾಗಿತ್ತು ಎಂಬುವುದು ಚೀನಾ ಸರ್ಕಾರ ಬಿಡುಗಡೆಗೊಳಿಸಿದ ದಾಖಲೆಗಳಿಂದ ಬಹಿರಂಗವಾಗಿದೆ. ತಾಂಗ್ ಹಲವಾರು ಪ್ರಾಣಿಗಳೊಂದಿಗೆ ಸೆಕ್ಸ್ ನಡೆಸಿದ ಬಳಿಕ ಈ ಮಹಾಮಾರಿ ಪತ್ತೆಯಾಗಿದ್ದು ಎಂಬುವುದು ಚೀನಾ ಅಧಿಕಾರಿಗಳು ಹೇಳಿದ್ದಾರೆ. ಈ ಸಂಬಂಧ ಥಾಂಗ್ ತಂದೆ ಕೂಡಾ ಪ್ರತಿಕ್ರಿಯಿಸಿದ್ದು, ನನ್ನ ಮಗನ ಇಂತಹ ವರ್ತನೆಗೆ ನಾನು ಕ್ಷಮೆ ಯಾಚಿಸುತ್ತೇನೆ. ಆದರೆ ಚೀನಾದಲ್ಲಿ ಸೆಕ್ಸ್ ಮಾಡಲು ಯಾವುದೇ ಮಹಿಳೆ ಸಿಗುತ್ತಿಲ್ಲ, ಕೇವಲ ಪುರುಷರಷ್ಟೇ ಇದ್ದಾರೆ ಎಂದು ಆತ ಪ್ರತಿ ಬಾರಿಯೂ ಕಂಪ್ಲೇಂಟ್ ಮಾಡುತ್ತಿದ್ದ ಎಂದು ಹೇಳಿದ್ದಾರೆ.

ಸದ್ಯ ಚೀನಾದ ಅಧಿಕಾರಿಗಳು ಪ್ರಾಣಿಗಳೊಂದಿಗೆ ಅದರಲ್ಲೂ ವಿಶೇಷವಾಗಿ ಬಾವಲಿಗಳೊಂದಿಗೆ ಸೆಕ್ಸ್ ನಡೆಸದಂತೆ ಖಡಕ್ ಸೂಚನೆ ನೀಡಿದ್ದಾರೆ. ನಾಗರಿಕರು ದೈಹಿಕವಾಗಲಿ, ಮೌಖಿಕವಾಗಲಿ ಪ್ರಾಣಿಗಳೊಂದಿಗೆ ಯಾವುದೇ ರೀತಿಯ ಸೆಕ್ಸ್‌ನಲ್ಲಿ ಡಗಿಸಿಕೊಳ್ಳಬಾರದೆಂದು ಸೂಚಿಸಿದೆ. ಅಲ್ಲದೇ ಈ ಮಹಾಮಾರಿ ನಿಲ್ಲುವವರೆಗೂ ಯಾರೂ ಇಂತಹ ಚಟುವಟಿಕೆ ನಡೆಸಬಾರದು, ಈ ಕುರಿತಾಗಿ ಮಾಹಿತಿ ಸಿಕ್ಕರೆ ಭಾರೀ ದಂಡ ವಿಧಿಸಲಾಗುತ್ತದೆ ಎಂದೂ ಸರ್ಕಾರ ಚೀನಾ ಜನತೆಗೆ ಸೂಚಿಸಿದೆ ಎಂದು ತನ್ನ ವರದಿಯಲ್ಲಿ ಹೇಳಿತ್ತು.

ಆದರೆ ಈ ಸುದ್ದಿ ನಿಜಾನಾ? ಎಂದು ಪರಿಶೀಲಿಸಿದಾಗ ಇದೊಂದು ಸುಳ್ಸುದ್ದಿ ಎಂಬುವುದು ಬಯಲಾಗಿದೆ. ಇದೊಂದು ಕಟ್ಟು ಕತೆಯಾಗಿದ್ದು, ಚೀನಾ ಅಧಿಕಾರಿಗಳು ಇಂತಹ ಯಾವುದೇ ಸೂಚನೆ ನೀಡಿಲ್ಲ. ಅಲ್ಲದೇ ಈ ಜಾಲತಾಣದಲ್ಲಿ ಬಳಸಿದ ಪೋಟೋ ಕೂಡಾ ಹಾಂಗ್‌ ಕಾಂಗ್‌ ಫ್ರೀ ಪ್ರೆಸ್‌ನವರದ್ದಾಗಿದೆ. ಅಲ್ಲದೇ ವೆಬ್‌ಸೆಐಟ್‌ ಕುರಿತಾಗಿಯೂ ಸೂಕ್ತ ಮಾಹಿತಿ ನೀಡಿಲ್ಲ. ಈ ಹಿಂದೆಯೂ ಈ ವೆಬ್‌ಸೈಟ್‌ ಇಂತಹುದೇ ಅನೇಕ ಸುಳ್ಸುದ್ದಿಗಳನ್ನು ಹಬ್ಬಿಸಿದೆ.