ಕೊರೋನಾ ವೈರಸ್‌ ಪತ್ತೆಯಾದಾಗಿನಿಂದ ವೈರಸ್‌ ಕುರಿತ ಸುಳ್ಳುಸುದ್ದಿಗಳು ಶರವೇಗದಲ್ಲಿ ಹಬ್ಬುತ್ತಿರುವುದರಿಂದ ಕೊರೋನಾ ಕುರಿತ ಯಾವುದೇ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದು ಶಿಕ್ಷಾರ್ಹ ಅಪರಾಧ ಎಂದು ಕೇಂದ್ರ ಗೃಹ ಸಚಿವಾಲಯ ಸುತ್ತೋಲೆ ಹೊರಡಿಸಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

Fact Check: 1 ವಾರ ದೇಶಾದ್ಯಂತ ಇಂಟರ್ನೆಟ್‌ ರದ್ದು?

ವೈರಲ್‌ ಪ್ರಕಟಣೆಯಲ್ಲಿ ಹೀಗಿದೆ, ‘ಇವತ್ತಿನಿಂದ ಕೊರೋನಾ ವೈರಸ್‌ ಕುರಿತಾದ ಯಾವುದೇ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಸರ್ಕಾರಿ ಏಜೆನ್ಸಿಗಳು ಮಾತ್ರ ಈ ಕುರಿತ ಮಾಹಿತಿ ಹಂಚಿಕೊಳ್ಳಬಹುದು. ಒಂದು ವೇಳೆ ತಪ್ಪು ಸಂದೇಶ ರವಾನಿಸಿದರೆ ಗುಂಪಿನ ಅಡ್ಮಿನ್‌ ಸೇರಿದಂತೆ ಎಲ್ಲ ಸದಸ್ಯರ ವಿರುದ್ಧ ಐಟಿ ಸೆಕ್ಷನ್‌ ಅಡಿಯಲ್ಲಿ ದೂರು ದಾಖಲಿಸಿಕೊಂಡು ಕ್ರಮ ಜರುಗಿಸಬೇಕಾಗುತ್ತದೆ’ ಎಂದಿದೆ.

ಪ್ರಕಟಣೆಯ ಕೆಳಗೆ ರವಿ ನಾಯ್ಕ್ ಗೃಹ ಸಚಿವಾಲಯದ ಪ್ರಿನ್ಸಿಪಾಲ್‌ ಸೆಕ್ರೆಟರಿ ಎಂದಿದೆ. ಬೂಮ್‌ಲೈವ್‌ ಫ್ಯಾಕ್ಟ್ಚೆಕ್‌ ಸಂಸ್ಥೆ ಈ ಬಗ್ಗೆ ಪರಿಶೀಲಿಸಿದಾಗ ಗೃಹ ಸಚಿವಾಲಯ ಇಂಥ ಯಾವುದೇ ಆದೇಶ ಹೊರಡಿಸಿಲ್ಲ ಎಂಬುದು ಖಚಿತವಾಗಿದೆ. ಗೃಹ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿದಾಗ ರವಿ ನಾಯ್ಕ್ ಎಂಬ ಹೆಸರಿನ ಯಾವ ಅಧಿಕಾರಿಯೂ ಪತ್ತೆಯಾಗಿಲ್ಲ. ಹಾಗೆಯೇ ಬೂಮ್‌, ಸಚಿವಾಲಯದ ಅಧಿಕಾರಿಯೊಂದಿಗೆ ಮಾತನಾಡಿ ಈ ಬಗ್ಗೆ ಸ್ಪಷ್ಟನೆ ಕೇಳಿದಾಗ ಅವರೂ ಇದು ಸುಳ್ಳು ಸುದ್ದಿ. ರವಿ ನಾಯ್‌್ಕ ಹೆಸರಿನ ಅಧಿಕಾರಿಯೇ ಸಚಿವಾಲಯದಲ್ಲಿ ಕೆಲಸ ಮಾಡುತ್ತಿಲ್ಲ ಎಂದಿದ್ದಾರೆ. ಹಾಗಾಗಿ ಇದು ಸುಳ್ಳುಸುದ್ದಿ ಎಂಬುದು ಸ್ಪಷ್ಟ.

- ವೈರಲ್ ಚೆಕ್