ಯುಟ್ಯೂಬರ್ ಬಯಿಲ್ವನ್ ರಂಗನಾಥನ್ ಕಾಲಿವುಡ್ ನಟಿಯರ ಖಾಸಗಿ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಯಾರು ಕುಡಿಯುತ್ತಾರೆ? ಯಾರಿಗೆ ಎಷ್ಟು ಬಾಯ್‌ಫ್ರೆಂಡ್ಸ್ ಇದ್ದಾರೆ ಎಂದೆಲ್ಲಾ ಈ ವಿಡಿಯೋದಲ್ಲಿ ಹೇಳಿದ್ದಾರೆ... 

ತಮಿಳು ಚಿತ್ರರಂಗದಲ್ಲಿ ಪೋಷಕ ನಟನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಯಿಲ್ವನ್ ರಂಗನಾಥನ್ ಯುಟ್ಯೂಬ್ ಚಾನೆಲ್‌ವೊಂದನ್ನು ತೆರೆದಿದ್ದಾರೆ. ತಮ್ಮ ಚಾನೆಲ್‌ನಲ್ಲಿ ಕಾಲಿವುಡ್‌ ನಟಿಯರ ಡರ್ಟಿ ಸತ್ಯಗಳನ್ನು ರಿವೀಲ್ ಮಾಡುತ್ತಿದ್ದಾರೆ. ನಟಿಯರಿಗೆ ಇದರಿಂದ ಎಷ್ಟು ತೊಂದರೆ ಆಗುತ್ತೆ. ಆದರೆ ಅವರೆಲ್ಲಾ ಇರುವುದೇ ಹೀಗೆ ಎಂದಿದ್ದಾರೆ. 

'ಕಿರಾತಕ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಟಿ ಒವಿಯಾ ಬಗ್ಗೆ ಮಾತನಾಡಿದ್ದಾರೆ. 'ಓವಿಯಾರನ್ನು ನಟಿ ಎನ್ನಬೇಕೋ ಬೇಡವೋ ಗೊತ್ತಿಲ್ಲ. ಆಕೆ ವಿಪರೀತ ಕುಡಿಯುತ್ತಾಳೆ. ಪಬ್‌ಗಳಿಗೆ ಹೋಗುತ್ತಾಳೆ. ಬಾಯ್‌ಫ್ರೆಂಡ್‌ಗಳನ್ನು ಬದಲಾಯಿಸುತ್ತಲೇ ಇರುತ್ತಾಳೆ. ಇದನ್ನೆಲ್ಲ ಆಕೆ ಬಹಿರಂಗವಾಗಿಯೂ ಹೇಳಿಕೊಳ್ಳುತ್ತಾಳೆ. ಮಹಾಬಲಿಪುರಂನಲ್ಲಿ ಆಕೆ ತಂಗದ ಹೋಟೆಲ್‌ಗಳೇ ಇಲ್ಲ, ಬಾಯ್ ಫ್ರೆಂಡ್‌ ಅಲ್ಲದವರ ಜೊತೆಗೂ ಆಕೆ ತಂಗಿದ್ದಾಳೆ. ಹಣ ಸಂಪಾದಿಸುವ ಜೊತೆಗೆ ಬೇರೆ ರೂಪದಲ್ಲಿಯೂ ಆಕೆ ಸಂಪಾದನೆ ಮಾಡಿದಳು. ಅದಿಕ್ಕೆ ಒವಿಯಾಗೆ ಅವಕಾಶಗಳು ಕಡಿಮೆ ಆದವು,' ಎಂದು ರಂಗನಾಥನ್ ಹೇಳಿದ್ದಾರೆ. 

'ಚಂದು' ಚಿತ್ರದ ನಟಿ ಸೋನಿಯಾ ಅಗರ್ವಾಲ್‌ : 
'ಸೋನಿಯಾ ಬಹಳ ಒಳ್ಳೆಯ ನಟಿ ಆದರೆ ಆಕೆಗೆ ವಿಪರೀತ ಕುಡಿಯುವ ಹಾಗೂ ಸಿಗರೇಟ್ ಸೇದುವ ಕೆಟ್ಟ ಚಟವಿತ್ತು. ಆಕೆಯನ್ನು ಮದುವೆಯಾದ ನಿರ್ದೇಶಕ ಸೆಲ್ವರಾಗವನ್‌ ಇವೆಲ್ಲ ಗೊತ್ತಿತ್ತು. ಆದರೆ ಮದುವೆ ಆದ ಮೇಲೆ ಸರಿಹೋಗುತ್ತಾಳೆ, ಎಂದು ಕೊಂಡಿದ್ದ. ಆದೆರ ಸೋನಿಯಾ ನಾನು ಇರುವುದೇ ಹೀಗೆ ಎಂದಳು ಅದಕ್ಕೆ ಅವರ ಮದುವೆ ಮುರಿದು ಬಿತ್ತು,' ಎಂದಿದ್ದಾರೆ. 

ಮಗಳಿಗೆ ಸೆಲ್ಫ್ ಡಿಫೆನ್ಸ್‌ ಬದಲು, ಗೌರವಿಸುವುದ ಹೇಗೆಂದು ಮಗನಿಗೆ ಕಲಿಸಿ: ಓವಿಯಾ

'ನಟಿ ಸಂಧ್ಯಾ ಮೊದಲ ಸಿನಿಮಾ ಬಿಟ್ಟರೆ ಇನ್ನಾವ ಸಿನಿಮಾನೂ ಹಿಟ್ ಆಗಲಿಲ್ಲ. ಆಕೆಗೆ ನಟನೆ ಬರುತ್ತಿರಲಿಲ್ಲ. ಅಲ್ಲದೇ ಮುಖವೂ ಚೆನ್ನಾಗಿರಲಿಲ್ಲ, ಮೈಮಾಟವೂ ಇರಲಿಲ್ಲ. ಅವಳ ದೇಹದ ತೂಕ ಇದ್ದಕ್ಕಿದ್ದಂತೆ ಜಾಸ್ತಿಯಾಗಿ ಬಿಟ್ಟಿತು. ಹಾಗಾಗಿ ಆಕೆ ಚಿತ್ರರಂಗದಲ್ಲಿ ಅವಕಾಶಗಳು ಸಿಗಲಿಲ್ಲ,' ಎಂದಿದ್ದಾರೆ.