ಡಿಸೈನರ್ ಡ್ರೆಸ್ ಬಿಟ್ಟು ಅಮ್ಮನ 33 ವರ್ಷದ ಹಳೆಯ ಸೀರೆಯುಟ್ಟು ಸಪ್ತಪದಿ ತುಳಿದ ಯಾಮಿ ಗೌತಮ್
ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಯಾಮಿ ಮದುವೆಗೆ ಧರಿಸಿದ್ದು ತಾಯಿ ಸೀರೆಯಂತೆ!
ಕನ್ನಡದ 'ಉಲ್ಲಾಸ ಉತ್ಸಾಹ' ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ನಟಿ ಯಾಮಿ ಬಾಲಿವುಡ್‌ನ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹಿಂದಿ, ತೆಲುಗು, ಪಂಜಾಬಿ ಸಿನಿಮಾಗಳಲ್ಲಿ ಅಭಿನಯಿಸಿರುವ ಯಾಮಿ ಜೂನ್ 4ರಂದು ಹಿಮಾಚಲ ಪ್ರದೇಶದಲ್ಲಿ ಉರಿ ಚಿತ್ರದ ನಿರ್ದೇಶಕನೊಂದಿಗೆ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಫೇರ್ & ಲವ್ಲಿ ಹುಡುಗಿಯ ಬ್ಯೂಟಿಫುಲ್ ಲವ್ ಸ್ಟೋರಿ ಇದು ...
ನಿರ್ದೇಶಕ ಆದಿತ್ಯ ಹಾಗೂ ಯಾಮಿ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆ ಅಂದ್ಮೇಲೆ ನಟಿಯರು, ಎರಡು ಮೂರು ತಿಂಗಳು ಮುನ್ನವೇ ಡಿಸೈನಲ್ ಉಡುಪುಗಳನ್ನು ತಯಾರಿ ಮಾಡಿಸುತ್ತಾರೆ. ಆದರೆ ಯಾಮಿ ಈ ವಿಷಯದಲ್ಲಿ ಮಾತ್ರ ಸಖತ್ ಡಿಫರೆಂಟ್. ತನ್ನ ತಾಯಿಯ ಮದುವೆ ಸೀರೆಯನ್ನು ತನ್ನ ಮದುವೆಗೂ ಧರಿಸಿದ್ದಾರೆ. ಅಂದ್ರೆ 33 ವರ್ಷದ ಹಳೆ ಸೀರೆ ಇದು. ತಲೆಯ ಮೇಲಿಂದ ಧಿರಿಸಿರುವ ಕೆಂಪು ಬಣ್ಣದ ದುಪ್ಪಟ್ಟಾ ಅವರ ಅಜ್ಜಿ ಕೊಟ್ಟಿದ್ದು ಎನ್ನಲಾಗಿದೆ.
ಸರಳವಾಗಿ ಎರಡು ರೀತಿಯ ಸರ ಹಾಗೂ ಬೈತಲೆ ಬೊಟ್ಟು ಧಿರಿಸರುವ ಯಾಮಿ ಮದುವೆಗೆ ತಾವೇ ಮೇಕಪ್ ಮಾಡಿಕೊಂಡಿದ್ದಾರೆ. ಕೆಂಪು ಲಿಪ್‌ಸ್ಟಿಕ್, ಕಣ್ಣಿಗೆ ಕಪ್ಪು ಹಾಗೂ ಸ್ವಲ್ಪ ಚೀಕ್ ರೋಸ್ ಬಿಟ್ಟರೆ ಮತ್ತೇನೂ ಅಪ್ಲೈ ಮಾಡಿರಲಿಲ್ಲ. ಮದುವೆ ವಿಚಾರ ಬಹಿರಂಗ ಮಾಡಿದ ನಂತರ ಎಲ್ಲಾ ಸಮಾರಂಭ ಫೋಟೋಗಳನ್ನು ಯಾಮಿ ಹಂಚಿಕೊಳ್ಳುತ್ತಿದ್ದಾರೆ. ಯಾಮಿ ಸರಳತೆ ಕಂಡು ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ.