ಸರಿಯಿದ್ದ ಸೆರಗನ್ನು ಜಾರಿಸಿ ಸಹಾಯಕನನ್ನು ಕರೆದ ನಟಿ ಶ್ರಿಯಾ ಶರಣ್: ಕ್ಯಾಮೆರಾಗಳ ಎದುರೇ ಎಲ್ಲಾ ಬಟಾಬಯಲು!
ಸರಿಯಿದ್ದ ಸೆರಗನ್ನು ಜಾರಿಸಿ ಸಹಾಯಕನನ್ನು ಕರೆದ ನಟಿ ಶ್ರಿಯಾ ಶರಣ್. ಕ್ಯಾಮೆರಾಗಳ ಎದುರೇ ಎಲ್ಲಾ ಬಟಾಬಯಲಾಗಿದ್ದು ವಿಡಿಯೋ ವೈರಲ್ ಆಗಿದೆ.
ಖ್ಯಾತ ತಾರೆಯರಿಗೆ ಕೈಗೊಬ್ಬ, ಕಾಲಿಗೊಬ್ಬ ಸಹಾಯಕರು ಇರುವುದು ಸಾಮಾನ್ಯವೇ. ಅದರಲ್ಲಿಯೂ ನಟಿಯರಿಗಂತೂ ಅವರ ಬಟ್ಟೆ ಹಿಡಿದುಕೊಳ್ಳಲು ಮುಂದೊಬ್ಬರು, ಹಿಂದೊಬ್ಬರು ಇರಬೇಕು, ಜೊತೆಗೆ ಆಗಾಗ್ಗೆ ಮೇಕಪ್ಗೆ ಟಚಪ್ ಕೊಡಲು, ಕೂದಲು ಸರಿ ಮಾಡಲು, ಡ್ರೆಸ್ ಸರಿ ಮಾಡಲು... ಹೀಗೆ ಫಂಕ್ಷನ್ಗಳಿಗೆ ಹೋಗುವಾಗ ಸಹಾಯಕರು ಇಲ್ಲದೇ ಹೋದರೆ ಅವರ ಪಾಡು ಯಾರಿಗೂ ಬೇಡವಾಗುತ್ತದೆ. ಕಂಫರ್ಟ್ ಆಗದ ಡ್ರೆಸ್ ಧರಿಸಿ ಎಲ್ಲಾ ಕಡೆ ಎಳೆದುಕೊಳ್ತಿರೋದು, ಮಂಡಿಯಿಂದ ಮಾರುದ್ದ ಮೇಲಕ್ಕೆ ಡ್ರೆಸ್ ಧರಿಸಿ ಕೆಳಕ್ಕೆ ಜಾರಿಸುವುದು, ನೆಲ ಗುಡಿಸುವ ಡ್ರೆಸ್ ಹಾಕಿಕೊಂಡು ಆಗಾಗ್ಗೆ ಎಡವಿ ಬೀಳುವುದು, ಅವರನ್ನು ಹಿಡಿದುಕೊಳ್ಳಲು ಸಹಾಯಕರು ಇರುವುದು... ಇವೆಲ್ಲಾ ಮಾಮೂಲಾಗಿ ಹೋಗಿವೆ. ಈಗಂತೂ ಕ್ಯಾಮೆರಾ ಕಣ್ಣುಗಳು ಎಲ್ಲಾ ಕಡೆ ನೆಟ್ಟಿರುವ ಕಾರಣ, ನಟಿಯರ ಪ್ರತಿಯೊಂದು ಅವತಾರಗಳೂ ಅದರಲ್ಲಿ ದಾಖಲಾಗುತ್ತವೆ.
ಸೀರೆಯುಟ್ಟರೂ ಧಾರಾಳವಾಗಿ ಎಲ್ಲೆಡೆ ಪ್ರದರ್ಶನ ಮಾಡುವ ನಟಿಯರ ದೊಡ್ಡ ದಂಡೇ ಇದೆ. ಇವರು ಸೀರೆಯುಟ್ಟರೂ ಕೆಲವೊಮ್ಮೆ ಬಿಕಿನಿ ಧರಿಸಿದಂತೆಯೇ ಇರುತ್ತದೆ ಎಂದು ಟ್ರೋಲ್ ಆಗುವುದೂ ಇದೆ. ಹೆಸರಿಗೆ ಮಾತ್ರ ಸೀರೆ, ಆದರೆ ಸೀರೆ ಎಲ್ಲಿದೆ ಎಂದು ಹುಡುಕಬೇಕು ಎನ್ನುವ ಮೀಮ್ಸ್ಗಳು ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಸೀರೆಗೆ ಹಾಕುವ ಸೆರಗಿನ ಸ್ಥಿತಿಯಂತೂ ಕೇಳುವುದೇ ಬೇಡ. ಇದೀಗ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಕ್ಯಾಮೆರಾಗಳ ಎದುರೇ ನಟಿ ಶ್ರಿಯಾ ಶರಣ್ ಸೆರಗು ಸಮಸ್ಯೆ ಆಗಿ, ಅದನ್ನು ತಾವೇಸರಿ ಮಾಡುವ ಬದಲು ಸಹಾಯಕನನ್ನು ಕರೆದು ಟ್ರೋಲ್ಗೆ ಒಳಗಾಗಿದ್ದಾರೆ.
ಈ ನಟನ ನೋಡಿದಾಕ್ಷಣ ನಟಿಯರ ಸೆರಗು ಜಾರತ್ತೆ, ಚಪ್ಪಲಿ ಕಿತ್ತೋಗತ್ತೆ ಯಾಕೆ? ವಿಡಿಯೋಗೆ ತಲೆಬಿಸಿ ಮಾಡ್ಕೊಂಡ ನೆಟ್ಟಿಗರು
ಸರಿಯಿದ್ದ ಸೆರಗನ್ನು ಏನೋ ರಿಪೇರಿ ಮಾಡಲು ಹೋಗಿ ಕೆಳಗೆ ಜಾರಿಸಿದ್ದಾರೆ. ಕೊನೆಗೆ ಅದನ್ನು ಸರಿ ಮಾಡಲು ಬರಲಿಲ್ಲ. ಕೊನೆಗೆ ಸಹಾಯಕನನ್ನು ನೋಡಿದಾಗ ಅವರು ಅಲ್ಲಿಗೆ ಬಂದು ಸೆರಗನ್ನು ಸರಿ ಮಾಡಿದ್ದಾರೆ. ಇದು ಇನ್ನಿಲ್ಲದ ಟ್ರೋಲ್ಗೆ ಒಳಗಾಗಿದೆ. ವೇದಿಕೆಯ ಮೇಲೆ ಬರುವಾಗಲೇ ಸೆರಗನ್ನು ಸರಿಮಾಡಿಕೊಂಡು ಬರಲು ತಿಳಿದಿರಲಿಲ್ಲವೆ ಎಂದು ಕೆಲವರು ಪ್ರಶ್ನಿಸಿದ್ದರೆ, ಸರಿಯಿದ್ದ ಸೆರಗನ್ನು ಜಾರಿಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಸೀರೆ ಸರಿ ಮಾಡಲು ಗಂಡಸರೇ ಬೇಕಾ ಎಂದು ಮತ್ತೆ ಕೆಲವರು ನಟಿಯ ಕಾಲೆಳೆದಿದ್ದಾರೆ. ಒಟ್ಟಿನಲ್ಲಿ ನಟಿ ಶ್ರಿಯಾ ಶರಣ್ ಸಕತ್ ಟ್ರೋಲ್ಗೆ ಒಳಗಾಗುತ್ತಿದ್ದಾರೆ.
ಅಂದಹಾಗೆ ಶ್ರಿಯಾ ಬಹುಭಾಷಾ ತಾರೆ. ಮೂಲತಃ ಟಾಲಿವುಡ್ ನಟಿ. ಹದಿಮೂರು ವರ್ಷಗಳ ಬಣ್ಣದ ಪಯಣ ಈಕೆಯದ್ದು. ಹಿಂದೆ ‘ಇಷ್ಟಂ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರೋ ನಟಿ, ನೇನು ನಾನು ಮುಂತಾದ ಬ್ಲಾಕ್ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ. ಕೆಲ ಕಾಲ ಸಿನಿಮಾದಿಂದ ದೂರ ಸರಿದಿರೋ ನಟಿ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಹಾಟ್ ಫೋಟೋ, ವಿಡಿಯೋಗಳನ್ನು ಶೇರ್ ಮಾಡುತ್ತಾ ಫ್ಯಾನ್ಸ್ ನಿದ್ದೆ ಕದಿಯುತ್ತಿದ್ದಾರೆ. ಕಳೆದ ವರ್ಷದ ಕಬ್ಜಾ, ಮ್ಯೂಸಿಕ್ ಸ್ಕೂಲ್ ಸಿನಿಮಾಗಳಲ್ಲಿ ಮಿಂಚಿದ್ದ ಈ ಚೆಲುವೆ ಸದ್ಯ ತಮಿಳಿನಲ್ಲಿ ‘ನರಗಾಸೂರನ್’ ಸಿನಿಮಾ ಮಾಡುತ್ತಿದ್ದಾರೆ. ಈ 41ರ ವಯಸ್ಸಿನಲ್ಲಿಯೂ ಯುವತಿಯರನ್ನ ನಾಚಿಸುವಂತೆ ಶೈನ್ ಆಗುತ್ತಿದ್ದಾರೆ. ಆಗಾಗ್ಗೆ ಬಿಕಿನಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುತ್ತಾರೆ.
ವೇದಿಕೆಗೆ ಬರುವಾಗ ಪ್ಯಾಂಟ್ ಕಳಚಿ ಬಿತ್ತಾ? ನಟಿ ತಾನಿಯಾ ಶ್ರಾಫ್ ಒಳ ಉಡುಪು ವಿಡಿಯೋ ನೋಡಿ ಫ್ಯಾನ್ಸ್ ಸುಸ್ತು