Asianet Suvarna News Asianet Suvarna News

ಸಿದ್ದಾರ್ಥ್ ಶುಕ್ಲಾ ಸಾವಿನ ಮುಂಚೆ ನೀಡಿದ್ರಾ ಮುನ್ಸೂಚನೆ?ಇಲ್ಲಿದೆ ತಾಯಿ ಜೊತೆ ಕೊನೆಯ ಮಾತುಕತೆ!

  • ಚರ್ಚೆಯಾಗುತ್ತಿದೆ ನಟ, ಬಿಗ್‌ಬಾಸ್ ವಿಜೇತ ಸಿದ್ಧಾರ್ಥ್ ಶುಕ್ಲಾ ಸಾವು ಪ್ರಕರಣ
  • ನಟನ ಸಾವಿನ ಹಿಂದಿನ ರಾತ್ರಿ ತಾಯಿ ಜೊತೆ ನಡೆಸಿದ ಅಂತಿಮ ಸಂಭಾಷಣೆ
  • ಸಾವಿಗೆ ಕಾರಣವೇನು? ಅಭಿಮಾನಿಗಳಿಗೆ ಶಾಕ್ ನೀಡಿದ ದುರಂತ ಸಾವು
What actor Sidharth Shukla did one night before his tragic death ckm
Author
Bengaluru, First Published Sep 2, 2021, 8:01 PM IST
  • Facebook
  • Twitter
  • Whatsapp

ಮುಂಬೈ(ಸೆ.02):  ನಟ, ಬಿಗ್‌ಬಾಸ್ ಖ್ಯಾತಿಯ ಸಿದ್ಧಾರ್ಥ್ ಶುಕ್ಲಾ ಸಾವು ಅಭಿಮಾನಿಗಳ ಜೊತೆ ಬಾಲಿವುಡ್ ಲೋಕಕ್ಕೆ ಶಾಕ್ ನೀಡಿದೆ. 40ರ ಹರೆಯ ನಟ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಆದರೆ ಆರೋಗ್ಯವಾಗಿದ್ದ, ಚುರುಕಿನ ನಟ ದಿಢೀರ್ ಸಾವನ್ನಪ್ಪಿದ್ದು ಹೇಗೆ? ಅನ್ನೋ ಚರ್ಚೆ ಶುರುವಾಗಿದೆ. ಇದರ ನಡುವೆ ಸಿದ್ಧಾರ್ಥ್ ಶುಕ್ಲಾ ಸಾವಿನ ಹಿಂದಿನ ರಾತ್ರಿ ನಡೆದ ಘಟನೆ  ಕೆಲ ಸೂಚನೆ ನೀಡುತ್ತಿದೆ.

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಗೆ ತಕ್ಕ ಉತ್ತರ ನೀಡಿದ್ದ ಸಿದ್ದಾರ್ಥ್ ಶುಕ್ಲಾ!

ಇಂದು( ಸೆಪ್ಟೆಂಬರ್ 2) ಬೆಳಗ್ಗೆ 9.30ಕ್ಕೆ ಸಿದ್ದಾರ್ಥ್ ಅಸ್ವಸ್ಥನಾಗಿರುವುದನ್ನು ಗಮನಿಸಿದ ಕುಟಂಬಸ್ಥರು ತಕ್ಷಣ ಕೂಪರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. 10.30ರ ವೇಳೆ ಆಸ್ಪತ್ರೆ ತಲುಪಿದ ಕುಟುಂಬಸ್ಥರಿಗ ಶಾಕ್ ಕಾದಿತ್ತು. ಇಸಿಜಿ ಸೇರಿದಂತೆ ಇತರ ಪರೀಕ್ಷೆ ನಡೆಸಿದ ವೈದ್ಯರು ಸಿದ್ಧಾರ್ಥ್ ಶುಕ್ಲಾ 11.30ಕ್ಕೆ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. ಸಿದ್ಧಾರ್ಥ್ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಆಸ್ಪತ್ರೆಗೆ ಬರುವ ಮೊದಲೇ ಸಿದ್ಧಾರ್ಥ್ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ದಾರೆ. 

ಸಿದ್ಧಾರ್ಥ್ ಶುಕ್ಲಾ ಸಾವಿನ ಮುಂಚಿನ ಕ್ಷಣಗಳು:
ಮುಂಬೈನ ಒಶಿವಾರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಹಿಂದಿನ ದಿನ(ಸೆಪ್ಟೆಂಬರ್ 1) ಸಿದ್ಧಾರ್ಥ್ ಶುಕ್ಲಾ ರಾತ್ರಿ 8 ಗಂಟೆಗೆ ತಾಯಿ ಜೊತೆ ಕೆಲ ಹೊತ್ತು ಮಾತನಾಡಿದ್ದಾರೆ. ಅಪಾರ್ಟ್‌ಮೆಂಟ್ ಒಳಾಂಗಣದಲ್ಲಿ ನಡೆದಾಡುತ್ತಾ ತಾಯಿ ಜೊತೆ ಕೆಲ ಮಾತುಗಳನ್ನು ಮಾತ್ರ ಆಡಿದ್ದಾರೆ. ಬಳಲಿಕೆ, ಅಸ್ವಸ್ಥತೆ ಕಾಡುತ್ತಿದೆ. ಇಂದು ಹೆಚ್ಚು ಹೊತ್ತು ನಡೆದಾಡಲು, ಮಾತನಾಡಲು ಸಾಧ್ಯವಾಗುತ್ತಿಲ್ಲ. ನಾನು ವಿಶ್ರಾಂತಿ ಪಡೆಯುವುದಾಗಿ ತಾಯಿಗೆ ಹೇಳಿದ್ದಾರೆ.

ಅಂದು ಸುಶಾಂತ್, ಇಂದು ಸಿದ್ಧಾರ್ಥ್: ಕೂಪರ್ ಹಾಸ್ಪಿಟಲ್‌ ವಿರುದ್ಧ 'ಹತ್ಯೆ' ಆರೋಪ!

ತಾಯಿ ಜೊತೆ ಮನಗೆ ಬಂದ ಸಿದ್ಧಾರ್ಥ್ ಶುಕ್ಲಾ ನೇರವಾಗಿ ಕೋಣೆಗೆ ತೆರಳಿ ವಿಶ್ರಾಂತಿಗೆ ಜಾರಿದ್ದಾರೆ. ಈ ವೇಳೆ ಕೆಲ ಮಾತ್ರೆಗಳನ್ನು ತೆಗೆದುಕೊಂಡಿರುವುದಾಗಿ ಶುಕ್ಲಾ ತಾಯಿ ಹೇಳಿದ್ದಾರೆ. ಮಾತ್ರೆಗಳನ್ನು ತೆಗೆದು ನಿದ್ರೆಗೆ ಜಾರಿದ ಸಿದ್ಧಾರ್ಥ್ ಮತ್ತೆ ಏಳಲೇ ಇಲ್ಲ ಅನ್ನೋದು ಯಾರಿಗೂ ಊಹಿಸಲು ಸಾಧ್ಯವಾಗುತ್ತಿಲ್ಲ.

ತನಗೆ ಅಸ್ವಸ್ಥತೆ ಕಾಡುತ್ತಿದೆ ಎಂದು ತಾಯಿಗೆ ಹೇಳಿದ್ದ ಸಿದ್ಧಾರ್ಥ್ ಮುನ್ಸೂಚನೆ ನೀಡಿದ್ದರು ಅನ್ನೋ ಚರ್ಚೆಗಳು ಶುರುವಾಗಿದೆ. ಆದರೆ ಎಲ್ಲೂ ಕೂಡ ಸಿದ್ದಾರ್ಥ್ ತನಗೆ ತೀವ್ರ ಸಮಸ್ಯೆ ಕಾಡುತ್ತಿದೆ. ಅಥವಾ ಅಸ್ವಸ್ಥತೆ ಕಾಡುತ್ತಿದೆ ಎಂದು ಹೇಳಿರಲಿಲ್ಲ. ಆಸ್ಪತ್ರೆಗೆ ತೆರಳಬೇಕು ಅನ್ನೋ ಕುರಿತು ತಾಯಿ ಬಳಿ ಹೇಳಿರಲಿಲ್ಲ. ಆದರೆ ಸಾವಿಗೆ ಕಾರಣಗಳು ಇದೀಗ ಭಾರಿ ಚರ್ಚೆಯಾಗುತ್ತಿದೆ.

Follow Us:
Download App:
  • android
  • ios