ರಶ್ಮಿಕಾ ಮಂದಣ್ಣ ಕೈಗೆ ಮುತ್ತಿಟ್ಟ ವಿಜಯ್ ದೇವರಕೊಂಡ, ನಾಚಿ ನೀರಾದ ನಟಿ ವಿಡಿಯೋ ಬಹಿರಂಗ, ಮಂದಣ್ಣ ಕೈ ಹಿಡಿದು ಮುತ್ತಿಟ್ಟಿದ್ದಾರೆ. ರಹಸ್ಯವಾಗಿ ಎಂಗೇಜ್‌ಮೆಂಟ್ ಮುಗಿಸಿರುವ ಈ ಜೋಡಿ ಮದುವೆ ತಯಾರಿಯಲ್ಲಿದ್ದಾರೆ.
ಹೈದರಾಬಾದ್ (ನ.12) ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿ ಇತ್ತೀಚೆಗೆ ರಹಸ್ಯವಾಗಿ ಎಂಗೇಜ್‌ಮೆಂಟ್ ಮುಗಿಸಿರುವ ಸುದ್ದಿ ಭಾರಿ ಸದ್ದು ಮಾಡುತ್ತಿತ್ತು. ಫೆಬ್ರವರಿಯಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿ ಕುರಿತು ಇತರ ಸೆಲೆಬ್ರೆಟಿಗಳಂತೆ ಅತೀ ಹೆಚ್ಚು ಗಾಸಿಪ್ ಹರಿದಾಡಿದೆ. ರಹಸ್ಯವಾಗಿ ರಿಲೇಶನ್‌ಶಿಪ್‌ನಲ್ಲಿದ್ದರೂ ಇವರ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು ಕೆಲ ಸುಳಿವು ನೀಡಿತ್ತು.ಈಗಲೂ ಈ ಜೋಡಿಯ ರಿಲೇಶನ್‌ಶಿಪ್ ರಹಸ್ಯವಾಗಿದ್ದರೂ, ಸುಮಧುರ ಕ್ಷಣದ ವಿಡಿಯೋ ಬಹಿರಂಗವಾಗಿದೆ. ರಶ್ಮಿಕಾ ಮಂದಣ್ಣ ಕೈಗೆ ವಿಜಯ್ ದೇವರಕೊಂಡ ಮುತ್ತಿಟ್ಟ ವಿಡಿಯೋ ಒಂದು ಬಹಿರಂಗವಾಗಿದೆ.
ಮೊದಲ ಬಾರಿಗೆ ಬಹಿರಂಗವಾಗಿ ಪ್ರೀತಿ ತೋರಿಸಿದ ದೇವರಕೊಂಡ
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ರಿಲೇಶನ್‌ಶಿಪ್ ಕುರಿತು ಸೋಶಿಯಲ್ ಮೀಡಿದಲ್ಲಿನ ಕೆಲ ಸುಳಿವು ಬಿಟ್ಟರೆ, ಸಾರ್ವಜನಿಕವಾಗಿ ಯಾವುದೇ ಸುಳಿವು ಇರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ವಿಜಯ್ ದೇವರಕೊಂಡ ರಶ್ಮಿಕಾ ಮೇಲಿನ ಪ್ರೀತಿ ತೋರಿಸಿದ್ದಾರೆ. ಕಾರ್ಯಕ್ರಮದಲ್ಲಿ ಎಲ್ಲರ ಸಮ್ಮುಖದಲ್ಲಿ ರಶ್ಮಿಕಾ ಕೈಗಳನ್ನು ಹಿಡಿದು ಮುತ್ತಿಟ್ಟಿದ್ದಾರೆ.
ಗರ್ಲ್‌ಫ್ರೆಂಡ್ ಕಾರ್ಯಕ್ರಮದಲ್ಲಿ ಸ್ವೀಟ್ ಕಿಸ್
ರಶ್ಮಿಕಾ ಮಂದಣ್ಣ ಅಭಿನಯದ ಗರ್ಲ್‌ಫ್ರೆಂಡ್ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಯಶಸ್ಸುಗಳಿಸಿದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಮಾತ್ರವಲ್ಲ, ಉತ್ತಮ ಕಲೆಕ್ಷನ್ ಮಾಡಿದೆ. ದಿ ಗರ್ಲ್‌ಫ್ರೆಂಡ್ ಸಿನಿಮಾದ ಸಕ್ಸಸ್ ಕಾರ್ಯಕ್ರಮವನ್ನು ಹೈದರಾಬಾದ್‌ನಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ನಟ ವಿಜಯ್ ದೇವರಕೊಂಡ ಕೂಡ ಹಾಜರಾಗಿದ್ದಾರೆ. ಸೆಲೆಬ್ರೆಟಿಗಳು, ಸಿನಿಮಾ ತಂಡ, ಮಾಧ್ಯಮಗಳ ಮುಂದೆ ಮಾತನಾಡುತ್ತಾ ನಿಂತಿದ್ದ ರಶ್ಮಿಕಾ ಮಂದಣ್ಣ ಬಳಿ ಬಂದ ವಿಜಯ್ ದೇವರಕೊಂಡ ಕೈಗಳನ್ನು ಹಿಡಿದು ಸಿಹಿ ಮುತ್ತು ನೀಡಿದ್ದಾರೆ.
ನಾಚಿ ನೀರಾದ ರಶ್ಮಿಕಾ ಮಂದಣ್ಣ
ದೇವರಕೊಂಡ ಆಗಮಿಸುತ್ತಿದ್ದಂತೆ ರಶ್ಮಿಕಾ ಮಂದಣ್ಣ ಮುಖದಲ್ಲಿ ಸಂಭ್ರಮ ಡಬಲ್ ಆಗಿದೆ. ವಿಜಯ್ ದೇವರಕೊಂಡ ಶೇಕ್‌ಹ್ಯಾಂಡ್ ಮೂಲಕ ಸ್ವಾಗತಿಸಲು ರಶ್ಮಿಕಾ ಕೈ ನೀಡಿದ್ದಾರೆ. ಆದರೆ ವಿಜಯ್ ದೇವರಕೊಂಡ ಕೈಗಳನ್ನು ಹಿಡಿದು ಮುತ್ತಿಟ್ಟಿದ್ದಾರೆ. ಇತ್ತ ರಶ್ಮಿಕಾ ಮಂದಣ್ಣ ನಾಚಿ ನೀರಾಗಿದ್ದಾರೆ.ಈ ವೇಳೆ ಸುತ್ತಲು ನೆರೆದಿದ್ದ ಮಾಧ್ಯಮಗಳ ಕ್ಯಾಮೆರಾ ಫೋಟೋ, ವಿಡಿಯೋ ಸೆರೆ ಹಿಡಿದಿದೆ. ಇತ್ತ ನೆರೆದಿದ್ದವರೂ ಓಹ್ ಎಂದು ಉದ್ಘರಿಸಿದ್ದಾರೆ. ಇದರಿಂದ ರಶ್ಮಿಕಾ ಮತ್ತಷ್ಟು ನಾಚಿಕೊಂಡಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಕೊನೆಗೂ ಬಹಿರಂಗವಾಗಿ ರಶ್ಮಿಕಾ ದೇವರಕೊಂಡ ಜೋಡಿ ಪ್ರೀತಿ ಒಪ್ಪಿಕೊಂಡು ತೋರ್ಪಡಿಸಿದೆ. ಕ್ಯೂಟ್ ಜೋಡಿಯ ಲವ್ ಸ್ಟೋರಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋಗೆ ಭರ್ಜರಿ ಲೈಕ್ಸ್ ಹಾಗೂ ಕಮೆಂಟ್ ವ್ಯಕ್ತವಾಗುತ್ತಿದೆ. ಅಧಿಕೃತವಾಗಿ ಪ್ರೀತಿ ಘೋಷಿಸಿ, ಮದುವೆ ದಿನಾಂಕ ಪ್ರಕಟಿಸುವಂತೆ ಹಲವರು ಮನವಿ ಮಾಡಿದ್ದಾರೆ.
