Asianet Suvarna News Asianet Suvarna News

ಅವ್ರು ಸುರಸುಂದರ... ಮದ್ವೆಯಾಗಲು ನನಗೇ ತೊಂದ್ರೆ ಇಲ್ಲ, ನಿಮ್ಮದೇನ್ರಿ? ಟ್ರೋಲಿಗರ ಕೆನ್ನೆಗೆ ಬಾರಿಸಿದ ನಟಿ ವರಲಕ್ಷ್ಮಿ

ನಿಕೊಲಾಯ್ ಸಚ್ದೇವ್ ಅವರನ್ನು ಮದ್ವೆಯಾಗುತ್ತಿರುವುದಕ್ಕೆ ಟ್ರೋಲ್​ಗೆ ಒಳಗಾಗುತ್ತಿರುವ ನಟಿ ವರಲಕ್ಷ್ಮಿ ಟ್ರೋಲಿಗರ ವಿರುದ್ಧ ಗರಂ ಆಗಿದ್ದಾರೆ. ಅವರು ಹೇಳಿರೋದೇನು?
 

Varalaxmi Sarathkumar shuts down negative comments on fiance Nicholais looks marriage suc
Author
First Published Apr 29, 2024, 6:52 PM IST

ಸುದೀಪ್‌ ಜೊತೆ  ಮಾಣಿಕ್ಯ ಸಿನಿಮಾ ಸೇರಿದಂತೆ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ನಟಿ ವರಲಕ್ಷ್ಮಿ ಶರತ್​ಕುಮಾರ್ ಈಚೆಗೆ  ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.  ಮದುವೆ ಬೇಡ ಎಂದಿದ್ದರೂ ಮದುವೆಯಾಗಲು ಹೊರಟಿದ್ದಾರೆ ನಟಿ. ಸಮಯ ಬಂದಾಗ ಮದುವೆ ಆಗುತ್ತೆ ಬಿಡಿ. ಮದುವೆಯು ಜೀವನದ ಒಂದು ಭಾಗ ಮಾತ್ರ, ಅದೇ ಜೀವನವಲ್ಲ ಮತ್ತು ಗುರಿಯಲ್ಲ. ನನಗೆ 18 ವರ್ಷವಾದ ನಂತರ ಮನೆಯಲ್ಲಿ ಮದುವೆಯ ಬಗ್ಗೆ ಮಾತನಾಡತೊಡಗಿದ್ದರು ಆದರೆ ನಾನು ಅದಕ್ಕೆ ಬ್ರೇಕ್‌ ಹಾಕಿದೆ. ನನ್ನ  ದೃಷ್ಟಿಯಲ್ಲಿ ಮದುವೆ ಮುಖ್ಯವಲ್ಲ, ಮದುವೆ ಆಗದಿದ್ದರೂ ಪರವಾಗಿಲ್ಲ.  ಸದ್ಯ ಅಂತೂ ಮದ್ವೆನೇ ಬೇಡ, ಅದರಲ್ಲ ನನಗೆ ಇಷ್ಟವೂ ಇಲ್ಲ ಎಂದಿದ್ದ ನಟಿ ಮದುವೆಯಾಗುತ್ತಿರುವ ಸುದ್ದಿ ಅಭಿಮಾನಿಗಳಿಗೆ ಸಂತಸವನ್ನೇ ನೀಡಿತ್ತು. ಆದರೆ ನಟಿ ಮದುವೆಯಾಗ ಹೊರಟಿರುವುದು  ತಮ್ಮ ಬಹುಕಾಲದ ಗೆಳೆಯ  ನಿಖೋಲಯ್ ಸಚ್​ದೇವ್ ಜೊತೆಗೆ ಎಂದಾಗ ಅಭಿಮಾನಿಗಳಿಗೆ ಬೇಸರವಾಗಿದೆ.

ಅಷ್ಟಕ್ಕೂ,  ನಿಖೋಲಯ್‌ ಅವರಿಗೆ ಇದಾಗಲೇ ಮದ್ವೆಯಾಗಿ ಇಬ್ಬರು ಮಕ್ಕಳೂ ಇದ್ದಾರೆ. ನಟಿಗೆ ಈಗ 38 ವರ್ಷ ವಯಸ್ಸು. ಅವರು ಈ ವಯಸ್ಸಿನಲ್ಲಿ ಮದುವೆಯಾಗುವ ಪ್ಲ್ಯಾನ್‌ ಮಾಡಿದ್ದರೂ, ಎರಡು ಮಕ್ಕಳ ತಂದೆಯ ಜೊತೆ ಮದ್ವೆಯಾಗುತ್ತಿರುವುದು ಏಕೆ ಎಂದು ಪ್ರಶ್ನಿಸುತ್ತಿದ್ದಾರೆ ಫ್ಯಾನ್ಸ್‌. ಈ ಬಗ್ಗೆ ಸಾಕಷ್ಟು ಟ್ರೋಲ್​ ಕೂಡ ಆಗುತ್ತಿದೆ. ನಿಖೋಲಯ್ ಸಚ್​ದೇವ್ ಅವರು ಈ ಮೊದಲು ಕವಿತಾ ಎಂಬುವವರನ್ನು ಮದ್ವೆಯಾಗಿದ್ದರು. ಅವರಿಗೆ ಈಗ ಇಬ್ಬರು ವಯಸ್ಸಿಗೆ ಬಂದ ಮಕ್ಕಳಿದ್ದಾರೆ. ಪುತ್ರಿ ಕಾಶಾ ಪವರ್‌ಲಿಫ್ಟ್‌ನಲ್ಲಿ ರಾಷ್ಟ್ರಮಟ್ಟದ ಪದಕ ಪಡೆದುಕೊಂಡಿದ್ದಾರೆ. ದಂಪತಿ ಈಗ ಡಿವೋರ್ಸ್‌ ಪಡೆದುಕೊಂಡಿದ್ದು, ಇದಾದ ಮೇಲೆ  ನಟಿ ಅವರನ್ನು ಪ್ರೀತಿಸಿದರು ಎನ್ನಲಾಗುತ್ತಿದೆ. ಅಂದಹಾಗೆ ವರಲಕ್ಷ್ಮಿ ಶರತ್ ಕುಮಾರ್ ಅವರು,  ತಮಿಳಿನ ಖ್ಯಾತ ನಟ ಶರತ್ ಕುಮಾರ್ ಹಾಗೂ ನಟಿ ರಾಧಿಕಾ ಶರತ್​ಕುಮಾರ್ ಅವರ ಪುತ್ರಿ. ಇವರ ಎಂಗೇಜ್ಮೆಂಟ್‌ ಸದ್ದಿಲ್ಲದೇ ಸರಳವಾಗಿ ನೆರವೇರಿದ್ದು, ಅದರ ಫೋಟೋಗಳು ವೈರಲ್​ ಆದ ಬಳಿಕ ವಿಷಯ ಬೆಳಕಿಗೆ ಬಂದಿದೆ.  

ನಟಿ ಶ್ರೀದೇವಿಯ ನಿಗೂಢ ಸಾವಿಗೆ ಈಗೇನಿದು ಟ್ವಿಸ್ಟ್​? ರಹಸ್ಯವಾಗಿದ್ದ ತಂಗಿ ಶ್ರೀಲತಾ ಹೆಸರು ಮುನ್ನೆಲೆಗೆ!

ಈ ಟ್ರೋಲ್​ಗಳಿಗೆ ಮೌನ ಮುರಿದಿರುವ ನಟಿ, ಸ್ವಲ್ಪ ಗರಂ ಆಗಿಯೇ ಉತ್ತರಿಸಿದ್ದಾರೆ. ಬೇರೆಯವರಿಗೆ ನಾನು ಯಾಕೆ ಉತ್ತರ ಕೊಡಬೇಕು? ಮೊದಲಿನಿಂದಲೂ ನಾನು ಅದನ್ನು ಅವಾಯ್ಡ್​ ಮಾಡಿಕೊಂಡು ಬಂದಿದ್ದೇನೆ. ನಿಕ್​ ತಂದೆ-ತಾಯಿ ಒಂದು ಆರ್ಟ್​ ಗ್ಯಾಲರಿ ನಡೆಸುತ್ತಾರೆ. ನಿಕ್​ ಮತ್ತು ಅವರ ಪುತ್ರಿ ಪವರ್ ಲಿಫ್ಟಿಂಗ್​ನಲ್ಲಿ ಬಂಗಾರದ ಪದಕ ಗೆದ್ದಿದ್ದಾರೆ. ಅವರ ಮಾಜಿ ಪತ್ನಿ ಜೊತೆಗೂ ನಾನು ಆತ್ಮೀಯವಾಗಿ ಇದ್ದೇನೆ. ಅವರು ಒಳ್ಳೆಯ ವ್ಯಕ್ತಿ. ಎಲ್ಲವೂ ಚೆನ್ನಾಗಿದೆ. ನನಗೆ ಅವರು ಸುರಸಂದರನೇ. ಬೇರೆಯವರಿಗೆ ಹೇಗೆ ಕಂಡರೆ ನಾನೇನೂ ಮಾಡಲು ಆಗುವುದಿಲ್ಲ ಎಂದು ಟ್ರೋಲಿಗರಿಗೆ ಖಡಕ್​ ಉತ್ತರ ನೀಡಿದ್ದಾರೆ. 

ಎರಡು ಮದುವೆಯ ವಿಷಯದ ಕುರಿತು ಮಾತನಾಡಿರುವ ನಟಿ,  ‘ನನ್ನ ತಂದೆ ಕೂಡ 2ನೇ ಮದುವೆ ಆದರು. ಅದರಲ್ಲಿ ಯಾವ ತಪ್ಪೂ ಇಲ್ಲ. ನಿಕ್​  ಬಗ್ಗೆ ಜನರು ಮಾತಾಡುವುದನ್ನು ನಾನು ಕೇಳಿದ್ದೇನೆ. ನನ್ನ ಕಣ್ಣಿಗೆ ಅವರು ಹ್ಯಾಂಡ್​ಸಮ್​ ಆಗಿಯೇ ಕಾಣುತ್ತಾರೆ.  ನಮ್ಮಿಬ್ಬರ ರಿಲೇಷನ್​ ಕುರಿತು  ನೆಗೆಟಿವ್​ ಕಮೆಂಟ್​ ಮಾಡುವವರ ಬಗ್ಗೆ ನಾನು ಕೇರ್​ ಮಾಡುವುದಿಲ್ಲ. ಯಾವುದಕ್ಕೂ ನಾನು ಡೋಂಟ್​ ಕೇರ್​ ಎಂದಿದ್ದಾರೆ.  
 

ಭಾರಿ ತೂಕದ ವ್ಯಕ್ತಿ ಮೈಮೇಲೆ ಮಲಗಿರುವಾಗ.... ಇಂಟಿಮೇಟ್​ ದೃಶ್ಯಗಳ ಕುರಿತು ನಟಿ ದಿವ್ಯಾ ಹೇಳಿದ್ದೇನು?

Latest Videos
Follow Us:
Download App:
  • android
  • ios