Upasana: ಡೆಲಿವರಿಗೂ ಇಷ್ಟು ದುಬಾರಿ ಡ್ರೆಸ್ಸಾ? ಈ ದುಡ್ಡಲ್ಲಿ ಎರಡೆರಡು ಹೆರಿಗೆ ಆಗ್ತಿತ್ತೆಂದ ನೆಟ್ಟಿಗರು

ನಟ ರಾಮ್​ಚರಣ್​ ಪತ್ನಿ ಉಪಾಸನಾ ಮೊನ್ನೆ ಮಗುವಿಗೆ ಜನ್ಮ ನೀಡಿದ್ದು, ಈ ಸಮಯದಲ್ಲಿ ಅವರು ಧರಿಸಿದ್ದ ಟಿ-ಷರ್ಟ್​ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ. 
 

Upasanas stylish maternity fashion She wears costly Gucci T Shirt suc

ಇದೇ ಜೂನ್​ 14ರಂದು ಸೌತ್‌ ಸೂಪರ್‌ ಸ್ಟಾರ್‌ ರಾಮ್ ಚರಣ್ (Ram Charan)  ಮತ್ತು ಪತ್ನಿ ಉಪಾಸನಾ ತಮ್ಮ 11ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು. ಈ ಬಾರಿಗೆ ವಿವಾಹ ವಾರ್ಷಿಕೊತ್ಸವ ಅವರಿಗೆ ಬಹಳ ಮಹತ್ವದ್ದು. ಇದಕ್ಕೆ  ಕಾರಣ,  ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 11 ವರ್ಷಗಳ ನಂತರ ಅವರು ಜೂನ್​ 20ರಂದು ಅಪ್ಪ-ಅಮ್ಮ ಆದರು.  ಉಪಾಸನಾ ಹೆಣ್ಣು ಮಗುವಿಗೆ ಮಂಗಳವಾರದ ತುದಿ ಮುಂಜಾವಿನಲ್ಲಿ ಜನ್ಮ ನೀಡಿದ್ದಾರೆ. ರಾಮ್ ಚರಣ್ ಹಾಗೂ  ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿರುವುದು ಸಹಜವಾಗಿಯೇ ಕೋನಿಡೆಲಾ ಹಾಗೂ ಕಾಮಿನೇನಿ ಕುಟುಂಬಕ್ಕೆ ಹರ್ಷ ತಂದಿದೆ. ರಾಮ್ ಚರಣ್ ಹಾಗೂ ಉಪಾಸನಾ ಪೋಷಕರಾಗಬೇಕು ಎಂದು ಸ್ವತಃ ಚಿರಂಜೀವಿ ಬಹು ಸಮಯದಿಂದ ಆಶಿಸಿದ್ದರು. ಅವರು ಬಯಸಿದಂತೆ ಅವರು ತಾತ ಆಗಿದ್ದಾರೆ.  ಅದರಂತೆಯೇ ಇಬ್ಬರ ಫ್ಯಾನ್ಸ್​ ಕೂಡ ಶುಭಾಶಯಗಳ ಸುರಿಮಳೆಯನ್ನೇಗೈಯುತ್ತಿದ್ದಾರೆ.

ಆದರೆ ಈ ನಡುವೆಯೇ ಉಪಾಸನಾ (Upasana) ಅವರು ಡೆಲವರಿಗೆ ಹೋಗುತ್ತಿದ್ದ ಫೋಟೋ ಒಂದು ವೈರಲ್​ ಆಗಿದೆ. ಜೂನ್​ 20ರಂದು ಮಗು ಜನಿಸಿದರೆ ಹಿಂದಿನ ದಿನ ಅಂದರೆ ಜೂನ್​ 19ರಂದು ಉಪಾಸನಾ ಆಸ್ಪತ್ರೆಗೆ ದಾಖಲಾಗಿದ್ದರು. ಹೈದರಾಬಾದ್​ನ ಜುಬ್ಲಿ ಹಿಲ್ಸ್​​ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿಯೇ ಅವರಿಗೆ ಹೆರಿಗೆ ಆಗಿದೆ. ಆಸ್ಪತ್ರೆಗೆ ಹೋಗುವ ಸಮಯದಲ್ಲಿ ಉಪಾಸನಾ ಧರಿಸಿದ್ದ ಟೀ-ಷರ್ಟ್​ ಈಗ ಭಾರಿ ಸುದ್ದಿಯಾಗುತ್ತಿದೆ. ಏಕೆಂದರೆ ಸಾಮಾನ್ಯ ಎಂದು ಕಾಣಿಸುವ ಈ ಟೀ-ಷರ್ಟ್​ ಬೆಲೆ ಕೇಳಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.

ಹೌದು.  ಉಪಾಸನಾ ಧರಿಸಿದ್ದ ಟೀ ಶರ್ಟ್ ಬೆಲೆ ಈಗ ರಿವೀಲ್ ಆಗಿದೆ,  ಟೀ ಶರ್ಟ್​ಗೆ ಬರೋಬ್ಬರಿ 48,375 ರೂಪಾಯಿ ಎಂಬುದು ತಿಳಿದು ಬಂದಿದೆ. ಇದು ಅತ್ಯುನ್ನತ ಬ್ರ್ಯಾಂಡ್​ ಎನಿಸಿರುವ ಗುಸ್ಸಿ ಬ್ರ್ಯಾಂಡ್​ನ ಟೀ ಶರ್ಟ್ ಎನ್ನಲಾಗಿದೆ.  ಬೇಬಿ ಪಿಂಕ್ ಬಣ್ಣದ ಈ ಟೀ ಶರ್ಟ್​ (T Shirt) ನೋಡಲು ಸಾಧಾರಣ ಷರ್ಟ್​ ಅಂತೆಯೇ ಇದ್ದು, ಅಷ್ಟೊಂದು ಬೆಲೆ ಇರುವುದನ್ನು ಕೇಳಿ ಬಹುತೇಕರು ಹುಬ್ಬೇರಿಸಿದ್ದಾರೆ. ಕುತೂಹಲದ ಸಂಗತಿ ಏನೆಂದರೆ, ತಮಗೆ ಹೆಣ್ಣು ಮಗು ಹುಟ್ಟುತ್ತದೆ ಎಂದು ಕೂಡ ಈ ಷರ್ಟ್​ ಮೂಲಕ ಉಪಾಸನಾ ಹಿಂಟ್​ ಕೊಟ್ಟಿದ್ದರು ಎನ್ನಲಾಗಿದೆ. ಹೆಚ್ಚಾಗಿ ಬೇಬಿ ಪಿಂಕ್​ ಹೆಣ್ಣುಮಕ್ಕಳ ಸಂಕೇತವಾಗಿದ್ದು, ಅವರು ಇದಕ್ಕಾಗಿಯೇ ಆ ಬಣ್ಣದ ಷರ್ಟ್​ ಧರಿಸಿದ್ದಾರೆ ಎನ್ನಲಾಗಿದೆ.

11 ವರ್ಷಗಳ ನಂತ್ರ ಪ್ರೆಗ್ನೆಂಟ್​ ಆದ್ರೂ ರಾಮ್​ ಚರಣ್​ ಖುಷಿ ಪಡಲಿಲ್ವಂತೆ: ಏನಕ್ಕೆ?

ಅದೇನೆ ಇದ್ದರು ಅದರ ಬೆಲೆ ಮಾತ್ರ ಸಕತ್​ ಸುದ್ದಿಯಾಗುತ್ತಿದೆ.  ನೆಟ್ಟಿಗರು ಇದನ್ನು ಕೇಳಿ ಥಹರೇವಾರಿ ಕಮೆಂಟ್​ ಮಾಡುತ್ತಿದ್ದಾರೆ. ಈ ಬೆಲೆಯನ್ನು ಕೊಟ್ಟು ನಾರ್ಮಲ್​ ಅಲ್ಲ, ಸಿಸರಿಯನ್​ ಡೆಲವರಿಯನ್ನೇ ಮಾಡಿಸಬಹುದಿತ್ತು ಎಂದು ಹೇಳಿದರೆ, ಒಂದಲ್ಲ ನಮ್​ ಕಡೆ ಎರಡೇ ಆಗ್ತಿತ್ತು ಎಂದು ಕೆಲವರು ಕಾಲೆಳೆದಿದ್ದಾರೆ. ಡೆಲಿವರಿಗೆ ಹೋಗುವಾಗಲೂ ಇಷ್ಟೊಂದು ದುಬಾರಿ ಡ್ರೆಸ್​ (Costly Dress) ಏಕೆ ಎಂದು ಕೆಲವರು ಪ್ರಶ್ನಿಸಿದರೆ, ಅದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಇನ್ನು ಕೆಲವರು, ಉಪಾಸನಾ ಅತ್ಯಂತ ಶ್ರೀಮಂತ ವ್ಯಕ್ತಿ. ಅವರು ಲಕ್ಷುರಿ ಬ್ರ್ಯಾಂಡ್ ವಸ್ತುಗಳನ್ನೇ ಬಳಸುತ್ತಾರೆ. ಗುಸ್ಸಿ ಟೀ ಶರ್ಟ್ ಆಯ್ಕೆ ಮಾಡಿರುವುದು ಕೂಡಾ ಇದಕ್ಕಾಗಿಯೇ. ಅದರಲ್ಲೇನು ವಿಶೇಷ ಎಂದಿದ್ದಾರೆ.    

ಮದುವೆಯಾಗಿ 10 ವರ್ಷಗಳಾದರೂ ಮಕ್ಕಳಾಗದಿದ್ದ ಬಗ್ಗೆ ಪದೇ ಪದೇ ಕೇಳಲಾಗುತ್ತಿದ್ದ ಪ್ರಶ್ನೆಗೆ ಈಚೆಗೆ ಉತ್ತರಿಸಿದ್ದ ಉಪಾಸನಾ ಅವರು,  ಕುಟುಂಬ ಮತ್ತು ಸಮಾಜದಿಂದ ಸಾಕಷ್ಟು ಒತ್ತವಿತ್ತು. ಆದರೆ ರಾಮ್ ಚರಣ್ (Ram charan) ಮತ್ತು ನಾನು ಯಾವುದೇ ಪರಿಣಾಮ ಬೀರಲು ಬಿಡಲಿಲ್ಲ ಎಂದಿದ್ದರು.  ಸಮಾಜ ಬಯಸಿದಾಗ ಅಲ್ಲ... ನಾವು ಬಯಸಿದಾಗ ಮಗು ಪಡೆಯುತ್ತಿದ್ದೇವೆ.  ಇದು ಉತ್ತಮ ಸಮಯವಾಗಿದೆ ಎಂದು ನಾನು ಭಾವಿಸುತ್ತೇನೆ. ಯಾಕೆಂದರೆ ನಾವು ಅಭಿವೃದ್ದಿ ಹೊಂದಿದ್ದೇವೆ, ಇಬ್ಬರೂ ಆರ್ಥಿಕವಾಗಿ ಸದೃಢರಾಗಿದ್ದೇವೆ. ಮಕ್ಕಳನ್ನೂ (Children) ನಾವೆ ನೋಡಿಕೊಳ್ಳಬಹುದು. ಇದು ನಮ್ಮ ಪರಸ್ಪರ ನಿರ್ಧಾರವಾಗಿತ್ತು. ನಾವು ದಂಪತಿ ಸಮಾಜ ಅಥವಾ ಕುಟುಂಬದಿಂದ ಅಥವಾ ಹೊರಗಿನಿಂದ ಯಾವುದೇ ಒತ್ತಡ ಬರಲು ಬಿಡಲಿಲ್ಲ. ಇದು ನಮ್ಮ ನಮ್ಮ ಸಂಬಂಧದ ಬಗ್ಗೆ ಮತ್ತು ನಾವು ಹೇಗೆ ಮಗುವನ್ನು ಬೆಳೆಸಲಿದ್ದೇವೆ ಎನ್ನುವ ಬಗ್ಗೆ ಸಾಕಷ್ಟು ಹೇಳುತ್ತೆ'  ಎಂದು ಹೇಳಿದ್ದರು. 

ರಾಮ್ ಚರಣ್-ಉಪಾಸನಾ ಮದುವೆ ವಾರ್ಷಿಕೋತ್ಸವ: ಪವರ್‌ ಕಪಲ್‌ ಸುಂದರ ಲವ್‌ಸ್ಟೋರಿ ಇಲ್ಲಿದೆ

Latest Videos
Follow Us:
Download App:
  • android
  • ios