ಮುಂಬೈ(ಡಿ.  04)  ಈ ಸೋಶಿಯಲ್ ಮೀಡಿಯಾ ಎಲ್ಲಿಂದ ಎಲ್ಲಿಗೋ ಲಿಂಕ್ ಮಾಡಿ ಹಾಕುತ್ತದೆ. ಕಂಗನಾ ರಣಾವತ್ ಜತೆ ಒಂದು  ಕಾಲದಲ್ಲಿ ಡೇಟಿಂಗ್ ಮಾಡುತ್ತಿದ್ದ ಹೃತಿಕ್ ರೋಶನ್  ಅವರ ಕ್ಷಮೆ ಕೇಳುತ್ತೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಬರೆದುಕೊಂಡಿದ್ದಾರೆ.

ಕಂಗನಾ ರಣಾವತ್ ಮಾಡಿರುವ ಮಾಡುತ್ತಿರುವ ವಿವಾದಾತ್ಮಕ ಟ್ವೀಟ್ ಗಳಿಗಾಗಿ ಒಂದು ಕಾಲದಲ್ಲಿ ಆಕೆ ಜತೆನ ಗೆಳತನದಿಂದ ಇದ್ದ ಹೃತಿಕ್ ರೋಶನ್ ಕ್ಷಮೆಯನ್ನು ದೇಶವೇ ಕೇಳಬೇಕು. ಈಕೆಯನ್ನು ಆತ ಹೇಗೆ ಸಹಿಸಿಕೊಂಡಿದ್ದನೋ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.ದೆಹಲಿ ಚಲೋ ರೈತರ ಪ್ರತಿಭಟನೆ ಸಂಬಂಧವೂ ಕಂಗನಾ ವಿವಾದಾತ್ಮಕ ಟ್ವೀಟ್  ಮಾಡಿದ್ದರು.

ಕಂಗನಾ ಹುಚ್ಚಾಟಕ್ಕೆ ಮೊದಲು ಬ್ರೇಕ್ ಹಾಕಿ

'ಶಹೀನ್ ಬಾಗ್ ದಾದಿ' ವಿಚಾರದಲ್ಲಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಇನ್ನೊಂದು ಕಡೆ ಕಂಗನಾ ಅವರ ಟ್ವಿಟರ್ ಖಾತೆಯನ್ನು ಅಮಾನತು ಮಾಡಬೇಕು  ಎಂದು ವಕೀಲರೊಬ್ಬರು ಕೋರ್ಟ್ ಮೊರೆ ಹೋಗಿದ್ದಾರೆ.