Asianet Suvarna News Asianet Suvarna News

ವಿಜಯ್ ದೇವರಕೊಂಡ ಚಿತ್ರಕ್ಕೆ ಹಾಡಿದ ಇಂಡಿಯನ್ ಐಡಲ್ ಸ್ಪರ್ಧಿ ಷಣ್ಮುಖಪ್ರಿಯಾ!

ಕೊಟ್ಟ ಮಾತು ಉಳಿಸಿಕೊಂಡ ನಟ ವಿಜಯ್ ದೇವರಕೊಂಡ. ನೆಚ್ಚಿನ ನಟನ ಜೊತೆ ಫೋಟೋ ಹಂಚಿಕೊಂಡ ಷಣ್ಮುಖಪ್ರಿಯಾ. ಸಿಕ್ಕ ಅವಕಾಶಕ್ಕೆ ಫುಲ್ ಖುಷ್.
 

Tollywood Vijay Devarakona keeps his promise welcomes Indian idol Shanmukha Priya to liger team  vcs
Author
Bangalore, First Published Sep 7, 2021, 1:56 PM IST
  • Facebook
  • Twitter
  • Whatsapp

ಬಾಲಿವುಡ್ ಜನಪ್ರಿಯ ಸಂಗೀತ ರಿಯಾಲಿಟಿ ಶೋನಲ್ಲಿ ತೆಲುಗು ಮೂಲದ ಷಣ್ಮುಖಪ್ರಿಯಾ ಸ್ಪರ್ಧಿಸಿದ್ದರು. ಫಿನಾಲೆ ಹಂತ ತಲುಪಿದ ಷಣ್ಮುಖಪ್ರಿಯಾ ಕೆಲವು ಅಂಕಗಳಿಂದ ವಿನ್ನರ್ ಟ್ರೋಫಿ ಮಾಸ್ ಮಾಡಿಕೊಂಡರು. ಷಣ್ಮುಖಪ್ರಿಯಾ ಧ್ವನಿಗೆ ಫಿದಾ ಆಗಿದ್ದ ತೆಲಗು ಪ್ರಸಿದ್ಧ ನಟ ವಿಜಯ್ ದೇವರಕೊಂಡು, ಟ್ಟೀಟ್ ಮಾಡುವ ಮೂಲಕ ಬೆಂಬಲ ಸೂಚಿಸಿದ್ದರು.

ಹೌದು! ಟಾಲಿವುಡ್‌ನ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಸಿನಿಮಾ ಕ್ಷೇತ್ರದಲ್ಲಿ ಎಷ್ಟು ಬ್ಯುಸಿಯಾಗಿದ್ದರೂ, ಕಿರುತೆರೆ ಶೋಗಳನ್ನು ವೀಕ್ಷಿಸುವುದು ಮಿಸ್ ಮಾಡಿಕೊಳ್ಳುವುದಿಲ್ಲ. ತಪ್ಪದೇ ಇಂಡಿಯನ್ ಐಡಲ್ ಫಾಲೋ ಮಾಡುತ್ತಿದ್ದ ವಿಜಯ್ ತಮ್ಮ ನೆಚ್ಚಿನ ಸ್ಪರ್ಧಿ ಸೋತಾಗ ಭಾವುಕರಾಗಿ ಟ್ಟೀಟ್ ಮಾಡಿದ್ದರು. 'ನೀನು ಗೆದ್ದರೂ ಸರಿ ಸೋತರೂ ಸರಿ, ನೀನು ಹೈದರಾಬಾದ್‌ಗೆ ಬರುತ್ತೀಯಾ, ನನ್ನನ್ನು ಭೇಟಿ ಮಾಡುತ್ತೀಯಾ. ನನ್ನ ಸಿನಿಮಾದಲ್ಲಿ ಹಾಡು ಹಾಡುತ್ತೀಯಾ,' ಎಂದು ಹೇಳಿದ್ದರು. 

ವಿಜಯ್ ದೇವರಕೊಂಡ BMW ಕಾರ್‌ ನಂಬರ್‌ನಲ್ಲಿದೆ ಒಂದು ಇಂಟ್ರೆಸ್ಟಿಂಗ್ ವಿಚಾರ!

ಷಣ್ಮುಖಪ್ರಿಯಾ ಮತ್ತು ವಿಜಯ್ ದೇವರಕೊಂಡ ಭೇಟಿ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. 'ನೀವು ನನ್ನ ಸಿನಿಮಾ ಹಾಡು ಹಾಡುವ ಬಗ್ಗೆ. ಲೈಗರ್ ಸಿನಿಮಾ ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ಸಂಗೀತ  ನಿರ್ದೇಶರಾದ ಮಣಿಶರ್ಮಾ ಮತ್ತು ತನಿಷ್ಕ್ ಅವರು ತುಂಬಾ ಉತ್ಸುಕರಾಗಿದ್ದಾರೆ. ಇದೊಂದು ಒಳ್ಳೆಯ ಹಾಡು. ಅದಷ್ಟು ಬೇಗ ಬಿಡುಗಡೆ ಮಾಡುತ್ತೇವೆ,' ಎಂದು ವಿಜಯ್ ಹೇಳಿದ್ದಾರೆ.  ಒಂದು  ರೌಂಡ್ ರೆಕಾರ್ಡಿಂಗ್ ಮುಗಿಸಿರುವ ಷಣ್ಮುಖಪ್ರಿಯಾರನ್ನು ಅನುಭವದ ಬಗ್ಗೆ ವಿಜಯ್ ಪ್ರಶ್ನೆ ಮಾಡಿದ್ದಾರೆ. 'ಸೂಪರ್ ಆಗಿತ್ತು. ಬಹಳ ಬೆಂಬಲ ನೀಡಿದರು,' ಎಂದು ಷಣ್ಮುಖಪ್ರಿಯಾ ಉತ್ತರಿಸಿದ್ದಾರೆ.

ಕರ್ನಾಟಕಗ ಮೂಡಬಿದ್ರೆಯ ನಿಹಾಲ್ ಸಹ ಇಂಡಿಯನ್ ಐಡಲ್‌ನ ಫೈನಲ್ ಹಂತಕ್ಕೆ ತಲುಪಿದ್ದರು. ನಿಹಾಲ್ ಹಾಗೂ ಷಣ್ಮುಖಪ್ರಿಯಾ ಜೋಡಿ ನೋಡುಗರನ್ನು ಸಾಕಷ್ಟು ಮೋಡಿ ಮಾಡಿತ್ತು. ಇಬ್ಬರೂ ದಕ್ಷಿಣ ಭಾರತೀಯರಾಗಿದ್ದು, ದಕ್ಷಿಣ ಭಾರತೀಯರಿಗೆ ಈ ಗಾಯಕರು ಮೆಚ್ಚುಗೆಗೆ ಪಾತ್ರರಾಗಿದ್ದರು.

 

Follow Us:
Download App:
  • android
  • ios