ಕಾಂಟ್ರವರ್ಸಿ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ.  ಬೇಕಿರುವ ವಿಚಾರಕ್ಕಿಂತ ಬೇಡದ ವಿಚಾರಗಳ ಬಗ್ಗೆ ಚರ್ಚೆ ಮಾಡುವುದೇ ಹೆಚ್ಚು. ಇದೀಗ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್‌ ಕಾಲೆಳೆದಿದ್ದಾರೆ.

ಲಾಕ್‌ಡೌನ್‌ ಸಮಯವನ್ನು ಸಿರೀಶ್ ವರ್ಕೌಟ್‌ಗೆ ಮೀಸಲಿಟ್ಟಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳಿಗೆ ಅಪ್ಡೇಟ್ ನೀಡುತ್ತಿರುತ್ತಾರೆ.  ಹೀಗಿರುವಾಗ ವರ್ಕೌಟ್ ಮಾಡಿದ ನಂತರದ ಫೋಟೋ ಹಂಚಿಕೊಂಡಿದ್ದಾರೆ. ಈ ಮಿರರ್ ಸೆಲ್ಫಿ ಶೇರ್ ಮಾಡಿಕೊಂಡ ಆರ್‌ಜಿವಿ ' ಈ ನನ್ನ ಮಗ ಹಾಲಿವುಡ್ ನಟ, ಬಾಡಿ ಬಿಲ್ಡರ್ ಅರ್ನಾರ್ಲ್ಡ್‌ರ ಮಗ ಅಲ್ಲ, ಅಲ್ಲು ಅರವಿಂದ್ ಮಗ' ಎಂದು ಬರೆದುಕೊಂಡಿದ್ದಾರೆ. 

ಮದ್ಯದ ಅಮಲಿನಲ್ಲಿ ಸಮಂತಾ ಮೇಲಿರುವ ಫೀಲಿಂಗ್‌ ಟ್ವೀಟ್‌ ಮಾಡಿದ RGV! 

'ಈ ನನ್ ಮಗ' ಎಂಬ ಪದ ಬಳಸಿದಕ್ಕೆ ಅಲ್ಲು ಕುಟುಂಬದ ಅಭಿಮಾನಿಗಳು ಗರಂ ಆಗಿದ್ದಾರೆ. ಈ ನಡುವೆ ಒಂದು ಗೊಂದಲವೂ ಸೃಷ್ಟಿಯಾಗಿದೆ. ಯಾಕೆಂದರೆ ಆರ್‌ಜಿವಿ ಸಿರೀಶ್ ಕಾಲೆಳೆದಿದ್ದಾ ಅಥವಾ ಹೊಗಳುವ ಶೈಲಿಯೋ ಎಂಬ ಅನುಮಾನವೂ ಸೃಷ್ಟಿಯಾಗಿದೆ. ಮೇ.30ರಂದು ಸಿರೀಶ್ ಹುಟ್ಟುಹಬ್ಬವಿದ್ದು ಹೊಸ ಸಿನಿಮಾ ಪ್ರಾಜೆಕ್ಟ್ ರಿವೀಲ್ ಮಾಡಬಹುದು ಎಂದು ಅಭಿಮಾನಿಗಳು ಗೆಸ್ ಮಾಡುತ್ತಿದ್ದಾರೆ.