ಇತ್ತೀಚಿಗೆ ಒಟಿಟಿಯಲ್ಲಿ ಬಿಡುಗಡೆಯಾದ 'ಕೃಷ್ಣ ಆ್ಯಂಡ್ ಹಿಸ್ ಲೀಲಾ' ಸಿನಿಮಾ ದಿನೆ ದಿನೇ ವಿವಾದದ ಸುಳಿಯಲ್ಲಿದೆ. ಯು-ಟರ್ನ್ ಚಿತ್ರದ ನಟಿ ಶ್ರದ್ಧಾ ಶ್ರೀನಾಥ್‌ ನಾಯಕಿಯಾಗಿ ಮಿಂಚಿರುವ ಈ ಸಿನಿಮಾದಲ್ಲಿ, ಅನೇಕ ದೃಶ್ಯಗಳು ಧಾರ್ಮಿಕ ವಿಚಾರಕ್ಕೆ ಧಕ್ಕೆ ತರುವಂತಿದ್ದು, ಚರ್ಚೆ ಸೃಷ್ಟಿಸಿದೆ. ಇದೇ ಸಂದರ್ಭದಲ್ಲಿ ನಟ- ನಿರ್ದೇಶಕನ ಲಿಪ್‌ಲಾಕ್‌ ಫೋಟೋ ಕೂಡ ವೈರಲ್ ಆಗುತ್ತಿದೆ. 

ಏನಿದು ಫೋಟೋ?:
2017ರಿಂದ ಸಿಧು ಮತ್ತು ರೆವಿಕಾಂತ್ ಒಟ್ಟಾಗಿ ಕೆಲಸ ಮಾಡುತ್ತಿದ್ದ ಕಾರಣ ಆತ್ಮೀಯ ಬಾಂಧವ್ಯ ಹೊಂದಿದ್ದಾರೆ. ಒಟಿಟಿಯಲ್ಲಿ ತಮ್ಮ ಸಿನಿಮಾ ಯಶಸ್ಸನ್ನು ಕಂಡ ಸಿಧು ನಿರ್ಮಾಪಕರ ಜೊತೆ ಪೋಟೋ ಶೇರ್ ಮಾಡಿಕೊಂಡಿದ್ದಾರೆ. ಪೋಟೋದಲ್ಲಿ ಇಬ್ಬರು ಲಿಪ್‌ಲಾಕ್‌ ಮಾಡಿರುವುದು ವೈರಲ್ ಅಗುತ್ತಿದೆ.

'ಇದೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಫೋಟೋನಾ? ಗಂಡಸರೇ ಹೀಗೆ ಮುತ್ತು ಕೊಟ್ಟರೆ ಏನು ಕಥೆ?' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ದಿನೆ ದಿನೇ ಚರ್ಚೆ ಹೆಚ್ಚಾಗಿ ಇವರನ್ನು ಸಲಿಂಗಿಗಳು ಎಂದು ಜನರು ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ಆಗ ನಿರ್ಮಾಪಕ ರವಿಕಾಂತ್ ಗರಂ ಆಗಿದ್ದಾರೆ. ಗಾಸಿಪ್ ಬೇಡ ಎಂದು ಸ್ಪಷ್ಟನೆ ನೀಡಿದ್ದಾರೆ.

ಹಿಂದೂ ಭಾವನೆಗೆ ಧಕ್ಕೆ,  'ಕೃಷ್ಣಾ ಎಂಡ್ ಹಿಸ್ ಲೀಲಾ'ದಲ್ಲಿ ಇರುವ  ಅಂಥ ದೃಶ್ಯ ಏನು?

ರವಿಕಾಂತ್ ಕ್ಲಾರಿಟಿ:
ತಮ್ಮ ಚಿತ್ರದ ಬಗ್ಗೆ ಹುಟ್ಟಿಕೊಂಡಿರುವ ವಿವಾದಗಳಿಂದ ಬೇಸತ್ತ ನಿರ್ದೇಶಕ ರವಿಕಾಂತ್ ಸ್ಪಷ್ಟನೆ ನೀಡಿದ್ದಾರೆ. 'ನಮ್ಮ ಸಿನಿಮಾ ಪಬ್ಲಿಸಿಟಿಗೆ ನಾವು ಇದನ್ನು ಮಾಡಬೇಕಿಲ್ಲ. ಇದು ಪಬ್ಲಿಸಿಟಿ ಫೋಟೋ ಅಲ್ಲವೇ ಅಲ್ಲ. ಮೂರು ವರ್ಷಗಳ ಕಠಿಣ ಶ್ರಮಕ್ಕೆ ಸಂಭ್ರಮವಷ್ಟೇ. ಇಷ್ಟೆಲ್ಲಾ ಕಷ್ಟ ಪಟ್ಟಿದ್ದ ಇಬ್ಬರೂ ಭಾವುಕರಾದೆವು. ಈ ಸಮಯದಲ್ಲಿ ಈ ರೀತಿ ಚುಂಬಿಸಿದ್ದು. ಇದನ್ನು ವೈಭವೀಕರಿಸುವ ಅಗತ್ಯವೇ ಇಲ್ಲ' ಎಂದು ಉತ್ತರ ನೀಡಿದ್ದಾರೆ.