ಟಾಲಿವುಡ್‌ ಹಾರ್ಟ್‌ ವಿನ್ನರ್ ಅಲ್ಲು ಅರ್ಜುನ್‌ ತೆಲುಗು ಚಿತ್ರರಂಗದ ಸ್ಮಾರ್ಟ್ ಪ್ಲೆಯರ್‌. ವರ್ಷಕ್ಕೊಂದು ಚಿತ್ರ ಮಾಡಿದರೂ ಬ್ಲಾಕ್‌ ಬಸ್ಟರ್‌ ಹಿಟ್‌ ಆಗುವುದರಲ್ಲಿ ಅನುಮಾನವೇ ಇಲ್ಲ. 

ಎಲ್ಲೆಡೆ ಜನವರಿ 15 ರಂದು ತೆರೆ ಕಂಡ 'ಅಲ್ಲ ವೈಕುಂಠಪುರಮುಲೋ' ಚಿತ್ರವೂ ಪ್ರೇಕ್ಷಕರ ಮನಸ್ಸು ಕದಿಯುವಲ್ಲಿ ಯಶಸ್ವಿಯಾಗಿದೆ. ಚಿತ್ರದ ಹಾಡುಗಳು ಹಿಟ್‌ ಆಗಿ ಅಭಿಮಾನಿಗಳು ಟಿಕ್‌ಟಾಕ್‌ ವಿಡಿಯೋ ಮಾಡುತ್ತಿದ್ದಾರೆ. ತೆರೆ ಕಂಡ ದಿನದಿಂದಲೇ ಚಿತ್ರಮಂದಿರಗಳು ಹೌಸ್‌ ಫುಲ್‌ ಅಗುತ್ತಿವೆ. ಚಿತ್ರ ಹಾಗೂ ಅಲ್ಲು ಅರ್ಜುನ್‌ಗೆ ಎಂದಿನಿಂತೆ ಪ್ರೇಕ್ಷಕರು ಫಿದಾ ಆಗಿದ್ದಾರೆ. 

ಅಬ್ಬಬ್ಬಾ! ಇದು ರೀಲಾ, ರಿಯಲ್ಲಾ? ಅರ್ಜುನ್‌-ಸ್ನೇಹ ಲವ್‌ ಸ್ಟೋರಿ ಕೇಳಿದ್ದೀರಾ?

ಹಾಗಾದರೆ ಕಲೆಕ್ಷನ್‌ ಎಷ್ಟು ಮುಟ್ಟಿದೆ? 

ಕೇವಲ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ 116.44 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಈ ಹಿಂದೆ ಇದೇ ರೀತಿಯ ಕಲೆಕ್ಷನ್‌ ಅನ್ನು ಪ್ರಭಾಸ್‌ ಅಭಿನಯದ 'ಬಾಹುಬಲಿ' ಚಿತ್ರ ಮಾಡಿತ್ತು. 16 ದಿನದಲ್ಲಿ ಬಾಹುಬಲಿ 9.94 ಕೋಟಿ ರೂ. ಕಲೆಕ್ಷನ್‌ ಮುಟ್ಟಿತ್ತು. ಇದೇ ಮೊದಲ ಸಲ ಬಾಹುಬಲಿ ಚಿತ್ರವನ್ನು ಒಂದು ಕಮರ್ಷಿಯಲ್‌ ಚಿತ್ರ ಮೀರಿಸುತ್ತಿದೆ. ದೇದದ್ಯಾಂತ ಕಲೆಕ್ಷನ್‌ ವರದಿ ಪ್ರಕಾರ 274 ಕೋಟಿ ರೂ. ಗಳಿಸಿದೆ ಎನ್ನಲಾಗುತ್ತಿದೆ.

ಅಲ್ಲು ಅರ್ಜುನ್ ಫಾಲ್ಕನ್ ವ್ಯಾನ್; ಹೇಗಿದೆ 7 ಕೋಟಿ ರೂಪಾಯಿ ವಾಹನ?

ಪೂಜಾ ಹೆಗ್ಡೆ ಹಾಗೂ ಅಲ್ಲು ಅರ್ಜುನ್ ನಟಿಸಿರುವ ಈ ಚಿತ್ರ ನಿರೀಕ್ಷೆಯಂತೆ ಹಿಟ್ ಆಗಿದೆ. ಆಗಲೇ ಅಲ್ಲು ತೆಲುಗು ಚಿತ್ರರಂಗದಲ್ಲಿ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಿರುವ ನಟ. ಈ ಚಿತ್ರದ ನಂತರ ಕುಡ್ಲದ ಕುವರಿ, ಬಾಲಿವುಡ್‌ನಲ್ಲೂ ನಟಿಸಿದ ಪೂಜಾ ಹೆಗ್ಡೆ ಬೇಡಿಕೆಯೂ ಹೆಚ್ಚಾಗಿದ್ದು, ತಮ್ಮ ಸಂಭಾವನೆಯನ್ನು ಸಿಕ್ಕಾಪಟ್ಟೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಪ್ರಭಾಸ್‌,ಅಲ್ಲು ಅರ್ಜುನ್‌; ಒಬ್ಬರನ್ನೊಬ್ಬರು ಮೀರಿಸುವ ಸಂಭಾವನೆ ಪಟ್ಟಿ ಇಲ್ಲಿದೆ!