ದೇಶಾದ್ಯಂತ ಭಾರೀ ಸದ್ದು ಮಾಡಿದ್ದ ‘ದಿ ಕಾಶ್ಮೀರ್‌ ಫೈಲ್ಸ್‌’ ಚಿತ್ರದ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ, ‘ದಿ ಕಾಶ್ಮೀರ್‌ ಫೈಲ್ಸ್‌ ಅನ್‌ರಿಪೋರ್ಟೆಡ್‌’ ಎಂಬ ತಮ್ಮ ನೂತನ ವೆಬ್‌ಸರಣಿಯ ಟ್ರೈಲರ್‌ ಅನ್ನು ಶುಕ್ರವಾರ ಬಿಡುಗಡೆ ಮಾಡಿದರು.

ಶ್ರೀನಗರ: ದೇಶಾದ್ಯಂತ ಭಾರೀ ಸದ್ದು ಮಾಡಿದ್ದ ‘ದಿ ಕಾಶ್ಮೀರ್‌ ಫೈಲ್ಸ್‌’ ಚಿತ್ರದ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ, ‘ದಿ ಕಾಶ್ಮೀರ್‌ ಫೈಲ್ಸ್‌ ಅನ್‌ರಿಪೋರ್ಟೆಡ್‌’ ಎಂಬ ತಮ್ಮ ನೂತನ ವೆಬ್‌ಸರಣಿಯ ಟ್ರೈಲರ್‌ ಅನ್ನು ಶುಕ್ರವಾರ ಬಿಡುಗಡೆ ಮಾಡಿದರು. ಈ ಸಿರೀಸ್‌ ಜೀ5 ಅಲ್ಲಿ 7 ಭಾಗಗಳಲ್ಲಿ ಪ್ರಸಾರವಾಗಲಿದೆ. ಬಳಿಕ ಸರಣಿ ಬಗ್ಗೆ ಮಾತನಾಡಿದ ಅವರು ಈ ಸರಣಿ 2022ರಲ್ಲಿ ತೆರೆಕಂಡ ತಮ್ಮ ನಿರ್ದೇಶನದ ‘ದಿ ಕಾಶ್ಮೀರ್‌ ಫೈಲ್ಸ್‌’ ಚಿತ್ರಕ್ಕಾಗಿ ತಾವು ಮಾಡಿದ ಸಂಶೋಧನೆ ಮತ್ತು ಜನರ ಸಂದರ್ಶನಗಳನ್ನು ಒಳಗೊಂಡಿದೆ ಎಂದು ತಿಳಿಸಿದರು. ಅಲ್ಲದೇ ‘ಈ ಸರಣಿಯು 1990 ರ ದಶಕದಲ್ಲಿ ಕಾಶ್ಮೀರದಲ್ಲಿ ನಡೆದ ಪಂಡಿತರ ಹತ್ಯಾಕಾಂಡ ಮತ್ತು ಸಾಮೂಹಿಕವಾಗಿ ಅಲ್ಲಿನ ಜನ ಬೇರೆಡೆ ಸ್ಥಳಾಂತರಗೊಂಡ ಘಟನೆ, ಅದಕ್ಕೆ ಕಾರಣ, ಅಲ್ಲಿನ ಅಪರಾಧ ಮತ್ತು ಐತಿಹಾಸಿಕ, ಭೌಗೋಳಿಕ ರಾಜಕೀಯವನ್ನು ಒಳಗೊಂಡಿದೆ ಎಂದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಶ್ಮೀರ್‌ ಫೈಲ್ಸ್‌, ಕೇರಳ ಸ್ಟೋರಿ ಬಳಿಕ ಇದೀಗ ಸದ್ದು ಮಾಡುತ್ತಿದೆ ಕರಾವಳಿ ಸ್ಟೋರಿ!

The Kerala Story: ಇವರೇ ನೋಡಿ ಕೇರಳ ಸಿನಿಮಾ ಯಶಸ್ಸಿನ ಹಿಂದಿರುವ ಸೂಪರ್ ವುಮನ್