ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ ಒಟಿಟಿ ಬಿಡುಗಡೆ ದಿನಾಂಕ ಫಿಕ್ಸ್; ದಿನಾಂಕ, ಪ್ಲ್ಯಾಟ್‌ಫಾರಂ ಯಾವುದು ?
ಕೃತಿ ಸನೋನ್ ಮತ್ತು ಶಾಹಿದ್ ಕಪೂರ್ ನಟನೆಯ ಈ ವರ್ಷದ ಹಿಟ್ ಚಿತ್ರ ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ ಚಿತ್ರ ಒಟಿಟಿ ಬಿಡುಗಡೆಗೆ ಸಜ್ಜಾಗಿದೆ. ವಿವರಗಳು ಇಲ್ಲಿವೆ.
'ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ' ಚಿತ್ರದಲ್ಲಿ ಕೃತಿ ಸನೋನ್ ಮತ್ತು ಶಾಹಿದ್ ಕಪೂರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆಯಿತು. ಇದು 2024ರ ಐದನೇ ಅತಿ ಹೆಚ್ಚು ಗಳಿಕೆಯ ಭಾರತೀಯ ಚಲನಚಿತ್ರದ ಸ್ಥಾನವನ್ನು ಪಡೆದುಕೊಂಡಿದೆ. ಅದರ ಥಿಯೇಟ್ರಿಕಲ್ ರನ್ ನಂತರ, ಚಿತ್ರವು ಈಗ OTT ನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.
ಎಲ್ಲಿ ವೀಕ್ಷಿಸಬೇಕು?
ವರದಿಗಳ ಪ್ರಕಾರ, ಚಿತ್ರವು ಏಪ್ರಿಲ್ 5, 2024 ರಂದು OTTಯಲ್ಲಿ ಬಿಡುಗಡೆಯಾಗಲಿದೆ ಮತ್ತು ಇದು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಸ್ಟ್ರೀಮ್ ಆಗುತ್ತದೆ. ಇದು ಜಿಯೋ ಸ್ಟುಡಿಯೋಸ್ ಮತ್ತು ಮ್ಯಾಡಾಕ್ ಫಿಲ್ಮ್ಸ್ ಜಂಟಿ ಉದ್ಯಮವಾಗಿದೆ.
ಔಟ್ ಆಫ್ ಔಟ್ ಅಂಕ ಪಡೆವ ನಿಮ್ಮ ಮಕ್ಕಳ ಕ್ಲಾಸ್ಮೇಟ್ಸ್ ಸೀಕ್ರೆಟ್ಸ್..
ಕಥಾವಸ್ತು
ಚಿತ್ರವು ಶಾಹಿದ್ ಕಪೂರ್ ಅವರ ಪಾತ್ರ(ಆರ್ಯನ್)ದ ಸುತ್ತ ಸುತ್ತುತ್ತದೆ, ಅವರು ರೊಬೊಟಿಕ್ಸ್ ಎಂಜಿನಿಯರ್ ಆಗಿದ್ದ, ಊರ್ಮಿಳಾ (ಡಿಂಪಲ್ ಕಪಾಡಿಯಾ ಪಾತ್ರದಲ್ಲಿ ನಟಿಸಿದ್ದಾರೆ) ಆರ್ಯನ್ ಅನ್ನು ಅಮೆರಿಕಕ್ಕೆ ಆಹ್ವಾನಿಸುತ್ತಾರೆ. ಅಲ್ಲಿ ಅವರು ಸೂಪರ್ ಇಂಟೆಲಿಜೆಂಟ್ ಫೀಮೇಲ್ ರೋಬೋಟ್ ಆಟೊಮೇಷನ್ (SIFRA) ಅನ್ನು ನೋಡುತ್ತಾರೆ ಮತ್ತು ಅದು ಮನುಷ್ಯನಂತೆ ಕಾಣುತ್ತದೆ ಮತ್ತು ವರ್ತಿಸುತ್ತದೆ. ಆರ್ಯನ್ ಸಿಫ್ರಾಳೊಂದಿಗೆ ಪ್ರೀತಿಯಲ್ಲಿ ಬೀಳುತ್ತಾನೆ. ಆದರೆ ಅವಳು ನಿಜವಾಗಿಯೂ ರೋಬೋಟ್ ಎಂದು ತಿಳಿಯುತ್ತಿದ್ದಂತೆ ಆತನ ಜಗತ್ತು ತಲೆ ಕೆಳಗಾಗುತ್ತದೆ.
ಕಪ್ಪು ಗೌನ್‌ನಲ್ಲಿ ಶಿಲ್ಪಾ ಶೆಟ್ಟಿ; ನೀಳ ಸೊಂಟಕ್ಕೆ ಸರಿಸಾಟಿ ಯಾವ ನಾಯಕಿನೂ ಇಲ್ಲ ಎಂದ್ರು ಫ್ಯಾನ್ಸ್, ಆದ್ರೂ ಟ್ರೋಲ್ ಆಗಿದ್ದೇಕೆ?
ಪಾತ್ರವರ್ಗ
ಚಿತ್ರದ ಪಾತ್ರವರ್ಗದಲ್ಲಿ ಆರ್ಯನ್ ಅಗ್ನಿಹೋತ್ರಿಯಾಗಿ ಶಾಹಿದ್ ಕಪೂರ್, ಸಿಫ್ರಾ ಆಗಿ ಕೃತಿ ಸನೋನ್, ಅಗ್ನಿಹೋತ್ರಿಯಾಗಿ ಧರ್ಮೇಂದ್ರ ಜೈ ಸಿಂಗ್, ಪಂಡಿತ್ ಜಿಯಾಗಿ ರಾಜನ್ ತಿವಾರಿ, ಮಂಗಳಾ ಆಗಿ ಸ್ನೇಹಲ್ ಶಿದಮ್, ಕುಶಾಲ್ ಆಗಿ ಸೂರ್ಯಾಂಶ್ ಮಿಶ್ರಾ ಮತ್ತು ಕಪಿಲ್ ಆಗಿ ಚಿತ್ರಾಂಶ್ ರಾಜ್ ಇದ್ದಾರೆ. ಈ ಚಿತ್ರದಲ್ಲಿ ಜಾನ್ವಿ ಕಪೂರ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.