ರಸ್ತೆ ಅಪಘಾತದಿಂದ ತೆಲಗು ನಟ ಸಾಯಿ ಧರ್ಮ್ ತೇಜ್ ಗಂಭೀರವಾಗಿ ಗಾಯಗೊಂಡು ಅಪೋಲೊ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿದ್ದು, ಐಸಿಯುನಲ್ಲಿದ್ದಾರೆ ಎನ್ನಲಾಗಿದೆ. 

ತೆಲುಗು ಚಿತ್ರರಂಗದ ಜನಪ್ರಿಯ ನಟ, ದೊಡ್ಡ ಮನೆ ಅಳಿಯ ಸಾಯಿ ಧರ್ಮ್ ತೇಜ್ ಹೈದರಾಬಾದ್‌ನ ಕೇಬಲ್ ಸೇತುವೆ ಮೇಲೆ ಶುಕ್ರವಾರ ಭೀಕರ ಬೈಕ್ ಅಪಘಾತಕ್ಕೆ ಒಳಗಾಗಿದ್ದಾರೆ.

"

'ವೇಗವಾಗಿ ಬೈಕ್ ಚಲಿಸುತ್ತಿದ್ದ ಕಾರಣ ಬೈಕ್ ಸ್ಕಿಡ್ ಆಗಿದ್ದರಿಂದ ಈ ಅಪಘಾತ ಸಂಭವಿಸಿದೆ. ಸಾಯಿ ಧರ್ಮ ತೇಜ್ ಅವರು ಹೆಲ್ಮೆಟ್ ಧರಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಅಪಘಾತ ಪ್ರಕರಣವನ್ನು ದಾಖಲಿಸಲಾಗಿದೆ,' ಎಂದು ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ. 

ಜುಬಿಲಿ ಹಿಲ್ಸ್‌ ಅಪೋಲೊ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಸಾಯಿ ಧರ್ಮ್ ತೇಜ್ ಅವರನ್ನು ಇರಿಸಲಾಗಿದೆ. ಮುಖಕ್ಕೆ ಸಣ್ಣ ಪುಟ್ಟ ಗಾಯವಾಗಿದ್ದು ಕೈ-ಕಾಲು ತರಚಿದೆ ಎಂಬ ಮಾಹಿತಿ ಲಭ್ಯವಾಗಿದೆ. 'ತಲೆಗೆ ಯಾವುದೇ ರೀತಿ ಪೆಟ್ಟು ಆಗಿಲ್ಲ, ಬೆನ್ನು ಮೂಳೆ ಹಾಗೂ ಅಂಗಾಂಗಗಳಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ಸದ್ಯದ ಮಟ್ಟಕ್ಕೆ ಹೇಳಬಹುದು. ಕಾಲರ್ ಬೋನ್ ಫ್ಯಾಕ್ಚರ್ ಅಗಿದೆ. ಮುಂದಿನ 24 ಗಂಟೆಗಳ ಕಾಲ ಅಬ್ಸರ್ವೇಷನ್‌ ಮಾಡಲಾಗುತ್ತದೆ,' ಎಂದು ಅಪೋಲೊ ಆಸ್ಪತ್ರೆ ಬಿಡುಗಡೆ ಮಾಡಿದ ಬುಲೆಟಿನ್‌ನಲ್ಲಿ ಮಾಹಿತಿ ನೀಡಲಾಗಿದೆ. ಸಾಯಿ ತೇಜ್‌ ಅವರ ಆರೋಗ್ಯ ವಿಚಾರಿಸಲು ಪವನ್ ಕಲ್ಯಾಣಾ, ಚಿರಂಜೀವಿ, ವರುಣ್ ತೇಜ್ ಸೇರಿದಂತೆ ಇಡೀ ತೆಲುಗು ಚಿತ್ರರಂಗ ಆಸ್ಪತ್ರೆಗೆ ಭೇಟಿ ನೀಡಿತ್ತು.

ಬೆಳಗಾವಿ: ರಸ್ತೆ ಬದಿ‌ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ, ಇಬ್ಬರು ಯುವಕರ ದುರ್ಮರಣ

2014ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಸಾಯಿ ಧರ್ಮ್ ತೇಜ್ ಸುಮಾರು 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 'Pilla Nuvvu Leni Jeevitam' ಚಿತ್ರಕ್ಕೆ ಮೂರು ಸಲ ಬೆಸ್ಟ್‌ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ.