ಸ್ವಿಗ್ಗಿಯಿಂದ ಊಟ ಆರ್ಡರ್ ಮಾಡಿದ ನಟಿಗೆ ಸಿಕ್ತು ಜಿರಳೆ ಕಾಲಿವುಡ್ ನಟಿ ನಿವೇತಾ ಕಂಪ್ಲೇಂಟ್

ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡೋದು, ಹೊಟ್ಟೆ ತಣ್ಣಗಾಗಿಸೋದು ಸುಲಭ. ಆದರೆ ಅದರ ಸುರಕ್ಷತೆ, ಶುಚಿ, ಆಹಾರ ಗುಣಮಟ್ಟದ ಬಗ್ಗೆ ಯಾವುದೇ ಖಾತರಿ ಇಲ್ಲ. ಇದೀಗ ತಮಿಳು ನಟಿಗೆ ಊಟದಲ್ಲಿ ಜಿರಳೆ ಸಿಕ್ಕಿದೆ.

ನಟಿ ನಿವೇತಾ ಪೆತುರಾಜ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ. ಅವರು ತಮ್ಮ ಊಟದಲ್ಲಿ ಜಿರಳೆ ಇರೋ ಫೋಟೋ ಶೇರ್ ಮಾಡಿದ್ದಾರೆ.

ಸ್ವಿಗ್ಗಿ ಆಹಾರದಲ್ಲಿ ರಕ್ತಸಿಕ್ತ ಬ್ಯಾಂಡೇಜ್‌: ಕ್ಷಮೆಯಾಚಿಸಿದ ಕಂಪನಿ

ಪೋಸ್ಟ್ ಹಂಚಿಕೊಂಡ ಅವರು, ಸ್ವಿಗ್ಗಿ ಮತ್ತು ರೆಸ್ಟೋರೆಂಟ್‌ಗಳು ಈಗ ಯಾವ ಮಾನದಂಡಗಳನ್ನು ನಿರ್ವಹಿಸುತ್ತಿವೆ ಎಂದು ನನಗೆ ತಿಳಿದಿಲ್ಲ. ನನ್ನ ಆಹಾರದಲ್ಲಿ ಇತ್ತೀಚೆಗೆ ಎರಡು ಬಾರಿ ಜಿರಳೆಗಳನ್ನು ನಾನು ಕಂಡುಕೊಂಡಿದ್ದೇನೆ. ಈ ರೆಸ್ಟೋರೆಂಟ್‌ಗಳನ್ನು ನಿಯಮಿತವಾಗಿ ಪರೀಕ್ಷಿಸುವುದು ಮತ್ತು ಭಾರೀ ದಂಡ ವಿಧಿಸುವುದು ಬಹಳ ಮುಖ್ಯ ಎಂದು ಬರೆದಿದ್ದಾರೆ.

ಅದೇ ರೆಸ್ಟೋರೆಂಟ್ ಬಗ್ಗೆ ದೂರು ನೀಡುತ್ತಾ ಇತರರು ಸಹ ತನ್ನ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ನಿವೇತಾ ಪೆತುರಾಜ್ ಹೇಳಿದ್ದಾರೆ. "ಮತ್ತು ಸಂದೇಶಗಳಿಂದ, ನಾನು ಇದನ್ನು ಸ್ವೀಕರಿಸುತ್ತಿದ್ದೇನೆಂದರೆ ರೆಸ್ಟೋರೆಂಟ್ ತಮ್ಮ ಆಹಾರಕ್ಕೆ ಜಿರಳೆ ಸೇರಿಸಿದ ಮೊದಲ ಬಾರಿಗೆ ಅಲ್ಲ. ರೆಸ್ಟೋರೆಂಟ್ ಎಷ್ಟು ಅಜಾಗರೂಕತೆಯಿಂದ ಕೂಡಿರುತ್ತದೆ? ಈ ರೆಸ್ಟೋರೆಂಟ್ ಅನ್ನು ಅಪ್ಲಿಕೇಶನ್‌ನಿಂದ ತೆಗೆದುಹಾಕಲು ಸ್ವಿಗ್ಗಿಂಡಿಯಾವನ್ನು ವಿನಂತಿಸುತ್ತಿದೆ" ಎಂದು ನಿವೇತಾ ಬರೆದಿದ್ದಾರೆ.

ನಟಿಯ ಪೋಸ್ಟ್‌ಗೆ ನೆಟಿಜನ್‌ಗಳು ತಕ್ಷಣ ತೀಕ್ಷ್ಣ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ನನಗೂ ಇದೇ ರೀತಿಯ ಅನುಭವವಾಗಿದೆ. ಮೂನ್‌ಲೈಟ್ ರೆಸ್ಟೋರೆಂಟ್‌ನಿಂದ ಮೂರು ಬಾರಿ ಈ ರೀತಿ ಘಟನೆ ಎದುರಿಸಿದ್ದೇನೆ. ಅವರು ರೆಸ್ಟೋರೆಂಟ್ ಅನ್ನು ಅಪ್ಲಿಕೇಶನ್‌ನಿಂದ ತೆಗೆದುಹಾಕುತ್ತಾರೆ ಎಂದು ಭಾವಿಸುತ್ತೇವೆ ಎಂದು ನೆಟ್ಟಿಗರು ಕಮೆಂಟಿಸಿದ್ದಾರೆ.

 ಸ್ವಿಗ್ಗಿ ಇದಕ್ಕೆ ಸ್ಪಂದಿಸಿ ಸಮಸ್ಯೆಯನ್ನು ಪರಿಹರಿಸುತ್ತೇವೆ ಎಂದು ನಟಿಗೆ ಭರವಸೆ ನೀಡಿದ್ದಾರೆ. "ನಿವೇತಾ, ನಮ್ಮ ಮೇಲೆ ನಿಮ್ಮ ನಂಬಿಕೆಗೆ ಧನ್ಯವಾದಗಳು. ಸಂಬಂಧಪಟ್ಟ ರೆಸ್ಟೋರೆಂಟ್‌ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಎಂದು ಸ್ವಿಗ್ಗಿ ಟ್ವೀಟ್ ಮಾಡಿದೆ.

Scroll to load tweet…