ಬಾಲಿವುಡ್‌ ಬಿಗ್ ಬಿ ಅಮಿತಾಭ್‌ ಬಚ್ಚನ್ ಮತ್ತು ತಾಪ್ಸಿ ಪನ್ನು ಒಟ್ಟಾಗಿ ಕಾಣಿಸಿಕೊಂಡ ಚಿತ್ರ 'ಬದ್ಲಾ' ಮಾರ್ಚ್‌ 8 ರಂದು ತೆರೆ ಕಂಡು ಬಾಕ್ಸ್‌ ಆಫೀಸ್ ಮುಟ್ಟವುದರಲ್ಲಿ ಕೊಂಚ ವಿಫಲವಾಗಿತ್ತು. ಆದರೀಗ ಅದರ ಬಗ್ಗೆ 50 ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಅಮಿತಾಭ್‌ಗೆ ಸಿಕ್ಕ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ್ದಾರೆ.

ತಾಪ್ಸಿ ಪನ್ನುಗೆ ಈ ನಟಿಯರೇ ಗುರುಗಳು!

ಬಣ್ಣದ ಲೋಕಕ್ಕೆ ಕಾಲಿಟ್ಟ ನಂತರ ಪ್ರಾಮುಖ್ಯತೆ ಬಗ್ಗೆ ಚಿಂತಿಸಬಾರದು ಎಂಬ ಮಾತುಗಳು ಕೇಳಿ ಬರುವುದು ಸಹಜ. ಚಿತ್ರದ ಬಿಡುಗಡೆ ಸಮಯದಲ್ಲಿ ಇದರ ಬಗ್ಗೆ ಮಾತನಾಡದೇ ಈಗ ಪ್ರಾಮುಖ್ಯತೆ ಬಗ್ಗೆ ಮಾತನಾಡಿರುವುದಕ್ಕೆ ತಾಪ್ಸಿ ವಿರುದ್ಧ ಬಚ್ಚನ್ ಅಭಿಮಾನಿಗಳು ಕಿಡಿ ಕಾಡಿದ್ದಾರೆ. ಅಷ್ಟಕ್ಕೂ ಏನ್‌ ಈ ಘಟನೆ ಇಲ್ಲಿದೆ ನೋಡಿ.

50 ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ನಡೆದ ಪ್ಯಾನಲ್‌ನಲ್ಲಿ ನಟಿ ತಾಪ್ಸಿ ನಟರಿಗೆ ಸಿಗುತ್ತಿರುವ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಆಕೆಯ 'ಬದ್ಲಾ' ಸಿನಿಮಾ ಬಗ್ಗೆ ಮಾತನಾಡಿದ್ದಾರೆ. 'ಬದ್ಲಾ' ಚಿತ್ರದಲ್ಲಿ ಅಮಿತಾಬ್‌ಗಿಂತ ತಾಪ್ಸಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ತಾಪ್ಸಿಗಿಂತ ಹೆಚ್ಚಾಗಿ ಅಮಿತಾಬ್‌ಗೆ ಹೆಚ್ಚು ಪ್ರಚಾರ ಸಿಕ್ಕಿದೆ. ಸಣ್ಣ ಪಾತ್ರ ಮಾಡಿದ ಅಮಿತಾಬ್‌ದೇ ಸಿನಿಮಾ ಅನ್ನುವ ರೀತಿ ಪ್ರಚಾರದ ವೇಳೆ ಮಾತುಗಳು ಕೇಳಿ ಬರುತ್ತಿತ್ತು. ಇದನ್ನು ಕೇಳಿದಾಗ ಬೇಸರವಾಗುತ್ತಿತ್ತು ಎಂದು ಹೇಳಿದ್ದಾರೆ.

ಈ ನಟಿಗೂ ಇದ್ಯಂತಪ್ಪಾ ಈ ವೀಕ್‌ನೆಸ್!

ತಾಪ್ಸಿ ನೀಡಿರುವ ಈ ಹೇಳಿಕೆ ಬಗ್ಗೆ ನೆಟ್ಟಿಗರು ಗರಂ ಆಗಿದ್ದಾರೆ. ಖ್ಯಾತ ನಟನೊಂದಿಗೆ ನಟಿಸುವ ಅವಕಾಶ ಸಿಕ್ಕಿರುವುದೇ ಹೆಚ್ಚು. ಈ ರೀತಿ ಮಾತನಾಡಬೇಡಿ ಎಂದು ಕೆಲವರು ಹೇಳಿದ್ದರೆ ಇನ್ನು ಕೆಲವರು ತಾಪ್ಸಿ ನೀಡಿರುವುದು ಉದಾಹರಣೆ ಅಷ್ಟೇ. ಅದರಿಂದ ಅವರ ನಡುಗೆ ಮನಸ್ತಾಪ ತರಬೇಡಿ ಎಂದಿದ್ದಾರೆ. ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ವ್ಯಕ್ತವಾಗುತ್ತಿದೆ.