ಹಿಂದಿ ಬಿಗ್ ಬಾಸ್ ಆಫರ್ ಕಳೆದುಕೊಂಡ ನಟಿ. ಕಾರು ಅಪಘಾತ ಬಗ್ಗೆ ವಿವರಿಸಿದ ನಟಿ....
ತಮಿಳು (Tamil) ಮತ್ತು ತೆಲುಗು (Telugu) ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದಿರುವ ನಟಿ ಯಶಿಕಾ ಆನಂದ್ (Yashika Anand) ಸೋಷಿಯಲ್ ಮೀಡಿಯಾದಲ್ಲಿ 2.7 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಪಾಪ್ಯುಲರ್ ಹಾಗೂ ಹಾಟ್ ನಟಿಯರ ಪಟ್ಟಿಯಲ್ಲಿರುವ ಯಶಿಕಾಗೆ ಹಿಂದಿ ಬಿಗ್ ಬಾಸ್ (Hindi Bigg Boss) ಪ್ರವೇಶಿಸುವ ಅವಕಾಶ ಬಂದಿತ್ತು. ಬ್ಯಾಗ್ ಪ್ಯಾಕಿಂಗ್ ಮುಗೀತು ಬಿಬಿ ಮನೆ ಎಂಟ್ರಿ ಆಗಲು ಎರಡು ದಿನಗಳಿವೆ ಎನ್ನುವಾಗ ಕಾರು ಅಪಘಾತವಾಗಿ ಭೀಕರವಾಗಿ ಗಾಯಗೊಂಡಿದ್ದರು. ತಮ್ಮ ರಿಕವರಿ ಜರ್ನಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ತಮಿಳು ಬಿಗ್ ಬಾಸ್‌ನಲ್ಲಿ (Tamil Bigg Boss) ಭಾಗವಹಿಸಿ, ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಂಪಾದಿಸಿದ ಯಶಿಕಾಗೆ ಹಿಂದಿ ಬಿಗ್ ಬಾಸ್‌ನಲ್ಲಿ ಅವಕಾಶ ಸಿಕ್ಕಿತ್ತು. ಆದರೆ ವಿಧಿಯ ಆಟವೇ ಬೇರೆ ಅಗಿತ್ತು. ಈಗೀಗ ಬೆಡ್‌ನಿಂದ ಎದ್ದು,ಓಡಾಡುತ್ತಿರುವ ಯಶಿಕಾ ಘಟನೆ ಬಗ್ಗೆ ಮಾತನಾಡಿದ್ದಾರೆ.
ಕಳೆದ ಜುಲೈನಲ್ಲಿ 25ರಂದು ಮುಂಜಾನೆ 1 ಗಂಟೆ ಸಮಯದಲ್ಲಿ ಯಶಿಕಾ ಮತ್ತು ಅವರ ಸ್ನೇಹಿತರು ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು (Car Accident). ಮಹಾಬಲಿಪುರಂನ (Mahabalipuram) ಈಸ್ಟ್ ಕೋಸ್ಟ್ ರೋಡ್‌ನಲ್ಲಿ ಅತಿ ವೇಗವಾಗಿ ಕಾರು ಸಾಗುತ್ತಿತ್ತು, ವೇಗ ನಿಯಂತ್ರಿಸಲಾಗದೇ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದ ಬಳಿಕೆ ಕಂದಕಕ್ಕೆ ಜಾರಿ ಬಿದ್ದಿತ್ತು, ಎಂದು ಅಲ್ಲಿನ ಸ್ಥಳೀಯರು ಘಟನೆ ಬಗ್ಗೆ ಹೇಳಿದ್ದರು. ಈ ಅಪಘಾತದಲ್ಲಿ ಯಶಿಕಾ ಬೆಸ್ಟ್ ಫ್ರೆಂಡ್ (Bestfriend) ಸಾವನ್ನಪ್ಪಿದ್ದರು, ಈ ಘಟನೆಯಿಂದ ಯಶಿಕಾ ಕ್ಷಣ ಕ್ಷಣಕ್ಕೂ ದುಃಖ ನೀಡುತ್ತಿತ್ತಂತೆ.

ಘಟನೆ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಿದ್ದರು. ಇದರಿಂದ ಬೇಸರಗೊಂಡ ಯಶಿಕಾ ಸೋಷಿಯಲ್ ಮೀಡಿಯಾದಲ್ಲಿ (Social Media) ಪೋಸ್ಟ್ ಹಂಚಿಕೊಳ್ಳುತ್ತಿದ್ದರು. ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡುತ್ತಲೇ ಇದ್ದರು. ಹಾಸಿಗೆ ಹಿಡಿದ ಯಶಿಕಾ ಹಾಸಿಗೆ ಮೇಲೆ ಮೂತ್ರ ಮಲ ವಿಸರ್ಜನೆ ಮಾಡುತ್ತಿದ್ದರು. ಅವರಿಗೆ ಬಲ ಮತ್ತು ಎಡಕ್ಕೆ ತಿರುಗುವಷ್ಟು ಶಕ್ತಿ ಕೂಡ ಯಶಿಕಾಗೆ ಇರಲಿಲ್ಲವಂತೆ.
95 ದಿನಗಳ ಕಾಲ ಹಾಸಿಗೆ ಹಿಡಿದಿದ್ದ ಯಶಿಕಾ ಹೆಜ್ಜೆ ಇಡಲು ಪ್ರಯತ್ನ ಪಡುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. 'ಬೇಬಿ ಹೆಜ್ಜೆ. 95 ದಿನಗಳ ನಂಬಿಕೆ, ಶಕ್ತಿ ಮತ್ತು ಪ್ರಾರ್ಥನೆ ಇದಕ್ಕೆ ಕಾರಣ. ಯಾರ ಸಹಾಯವೂ ಇಲ್ಲದೆ ನನ್ನ ಕಾಲಿನ ಮೇಲೆ ನಾನೇ ನಿಲ್ಲಬೇಕು. ವೈದ್ಯರಿಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಬೇಕು,' ಎಂದು ಬರೆದುಕೊಂಡಿದ್ದರು.
ಗೆಳತಿಯ ಸಾವು: ಬದುಕುವುದೇ ತಪ್ಪೆನಿಸುತ್ತಿದೆ ಎಂದ ಯಶಿಕಾ
ಯಶಿಕಾ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಮೇಕಪ್ ಆರ್ಟಿಸ್ಟ್ ಮತ್ತು ಬ್ರ್ಯಾಂಡ್‌ಗಳ ಜೊತೆ ಕೋಲಾಬೋರೆಟ್ ಮಾಡಿಕೊಂಡಿದ್ದಾರೆ.
ಆಗಸ್ಟ್ 1999ರಲ್ಲಿ ಹುಟ್ಟಿದ್ದ ಯಶಿಕಾ ಮಾಡೆಲ್ ಆಗಿಯೂ ವೃತ್ತಿ ಜೀವನ ಅರಂಭಿಸಿದ್ದರು. ಆನಂತರ ಧಾರಾವಾಹಿ ಮತ್ತು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟರು. ಪಂಜಾಬಿ ಕುಟುಂಬದಲ್ಲಿ (Punjabi Family) ಹುಟ್ಟಿದ ಯಶಿಕಾ ಸಂಪೂರ್ಣವಾಗಿ ಬೆಳೆದದ್ದು ಡೆಲ್ಲಿ ಮತ್ತು ಚೆನ್ನೈನಲ್ಲಿ. ಅದೆಲ್ಲ 2018ರಲ್ಲಿ ಮೀ ಟೂ ಪ್ರಕರಣದಲ್ಲಿ ಗುರುತಿಸಿಕೊಂಡಿದ್ದರು. ಸಿನಿಮಾ ಅವಕಾಶ ಕೇಳಿದ್ದಕ್ಕೆ ನಿರ್ದೇಶಕರು ಸೆಕ್ಸ್‌ಗೆ ಆಫರ್ ಮಾಡಿದ್ದರು. ಅದನ್ನು ನಿರಾಕರಿಸಿದಕ್ಕೆ ದೌರ್ಜನ್ಯ ಎಸಗಿದ್ದರು, ಎಂದು ಆರೋಪ ಮಾಡಿದ್ದರು.
ಯಶಿಕಾ ನಟನೆಯ 9 ಸಿನಿಮಾಗಳು ಬಿಡುಗಡೆ ಆಗಿವೆ. ಇನ್ನೂ 5 ಸಿನಿಮಾಗಳ ಚಿತ್ರೀಕರಣ ಮಾಡುತ್ತಿದ್ದಾರೆ. ಅಪಘಾತವಾದ ಕಾರಣ ಸಿನಿಮಾ ಅರ್ಧಕ್ಕೆ ನಿಂತಿದ್ದವು. ಈಗ ಚೇತರಿಸಿಕೊಂಡಿರುವ ಕಾರಣ ಒಂದೊಂದೇ ಚಿತ್ರೀಕರಣ ಆರಂಭಿಸುತ್ತಿದ್ದಾರೆ. ಅದಲ್ಲದೆ ಯಶಿಕಾ ಪರಿಸ್ಥಿತಿ ಮತ್ತು ಪ್ರತಿಭೆ ನೋಡಿ ಅನೇಕರು ಈಗ ಅವಕಾಶಗಳನ್ನು ನೀಡುತ್ತಿದ್ದಾರೆ.
