ಬೆಂಗಳೂರು (ಏ. 12): ಬಾಲಿವುಡ್ ನಟಿ, ನೀಲಿತಾರೆ ಸನ್ನಿ ಲಿಯೋನ್ ವೆಡ್ಡಿಂಗ್ ಆ್ಯನಿವರ್ಸರಿ ಸಂಭ್ರಮದಲ್ಲಿದ್ದಾರೆ. ವೆಡ್ಡಿಂಗ್ ಆ್ಯನಿವರ್ಸರಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಸನ್ನಿ ಲಿಯೋನ್ ದಂಪತಿ 9 ನೇ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. 

ಅಪ್ಪ-ಅಮ್ಮನ ವೆಡ್ಡಿಂಗ್ ಆ್ಯನಿವರ್ಸರಿಗೆ ಮುದ್ದಿನ ಮಗಳು ನಿಶಾ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ. ವಿಶೇಷವಾಗಿ ಕೇಕ್ ತಯಾರಿಸಿ ಗಿಫ್ಟ್ ಆಗಿ ಕೊಟ್ಟಿದ್ದಾರೆ. ಇದು ವೆಡ್ಡಿಂಗ್ ಆ್ಯನಿವರ್ಸರಿ ಸಂಭ್ರಮವನ್ನು ಹೆಚ್ಚಿಸಿತ್ತು. ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

 

‘ಮದುವೆ ವಾರ್ಷಿಕೋತ್ಸವದ ಶುಭಾಷಯಗಳು. ನೀನು ನನ್ನ ಜೀವ. ನನ್ನ ಬೆಸ್ಟ್ ಫ್ರೆಂಡ್. ಮಕ್ಕಳಿಗೆ ಒಳ್ಳೆಯ ತಂದೆ’ ಎಂದು ಪತಿಯನ್ನು ಹಾಡಿ ಹೊಗಳಿದ್ದಾರೆ. 

2011 ರಲ್ಲಿ ಸನ್ನಿ ಲಿಯೋನ್ , ಡೇನಿಯಲಕ್ ಜೊತೆ ಹಸೆಮಣೆ ಏರಿದ್ದರು.