ಬೈಕೊಂಡೇ ಫುಲ್ ವಿಡಿಯೋ ನೋಡಿದ್ರು ಜನ, ಸೋನುಗೌಡ ಬಿಕಿನಿ ವಿಡಿಯೋಗೆ ಬಂದಿರುವ ವೀವ್ಸ್ ಎಷ್ಟು ಗೊತ್ತಾ?
ಬಿಗ್ಬಾಸ್ ಖ್ಯಾತಿಯ ನಟಿ ಸೋನು ಗೌಡ ಕಳೆದ ಕೆಲವು ವಾರಗಳಿಂದ ಸಖತ್ ಸುದ್ದಿಯಲ್ಲಿದ್ದಾರೆ. ಬಿಕಿನಿ ಹಾಕ್ಕೊಂಡು, ತುಂಡುಡುಗೆ ತೊಟ್ಟು ಎದೆ ಮುಷ್ಕೊಂಡು ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದ್ದಾರೆ. ಆದ್ರೆ ಅಚ್ಚರಿಯ ವಿಚಾರ ಅಂದ್ರೆ ಸೋನುಗೌಡ ವಿಡಿಯೋಗೆ ಸಖತ್ ವೀವ್ಸ್ ಬಂದಿದೆ. ಜನರು ಬೈಯ್ತಾನೆ ಕದ್ದುಮುಚ್ಚಿ ಫುಲ್ ವಿಡಿಯೋ ನೋಡ್ತಿದ್ದಾರೆ.

ಬಿಗ್ಬಾಸ್ ಖ್ಯಾತಿಯ ನಟಿ ಸೋನು ಗೌಡ ಕಳೆದ ಕೆಲವು ವಾರಗಳಿಂದ ಸಖತ್ ಸುದ್ದಿಯಲ್ಲಿದ್ದಾರೆ. ಮಾಲ್ದೀವ್ಸ್ ಹನಿಮೂನ್ ಪ್ಯಾಕೇಜ್ ಆಯ್ಕೆ ಮಾಡಿಕೊಂಡು ಹೋಗಿರೋ ಸೋನು ಗೌಡ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. ಸ್ನೇಹಿತೆ ಜೊತೆ ಇಡೀ ಮಾಲ್ಡೀವ್ಸ್ ಸುತ್ತಾಡಿಕೊಂಡು ಯುಟ್ಯೂಬ್ ವ್ಲಾಗ್ ಮಾಡುತ್ತಿದ್ದಾರೆ. ಅಲ್ಲಿನ ಎಂಜಾಯ್‌ಮೆಂಟ್‌ನಲ್ಲಿ ಮುಳುಗಿ ಸೋನು ಬಿಕಿನಿ ಧರಿಸಿರುವ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ.
ಎರಡ್ಮೂರು ದಿನಗಳಿಂದ ಬಿಕಿನಿ ತೊಟ್ಟು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಸೋನು ಶ್ರೀನಿವಾಸ್ ಗೌಡ ಮತ್ತೆ ಬೆಡ್‌ರೂಮ್ ಫೋಟೋಸ್ ಪೋಸ್ಟ್ ಮಾಡಿದ್ದರು. ಬಿಕಿನಿ ಫೋಟೋ ಹಾಗೂ ಬೆಡ್‌ರೂಮ್ ಫೋಟೋಸ್ ಹಂಚಿಕೊಳ್ಳುವ ಮೂಲಕ ಮತ್ತೆ ಪಡ್ಡೆ ಹುಡುಗರ (Boys) ಹೃದಯಕ್ಕೆ ಬೆಂಕಿ ಹಚ್ಚಿದ್ದಾರೆ. ಟ್ರೋಲ್‌ಗೆ ಕೇರ್ ಮಾಡದೇ, ಬಿಕಿನಿ ಅವತಾರದ ಫೋಟೋಗಳನ್ನ ಮತ್ತಷ್ಟು ಶೇರ್ ಮಾಡಿದ್ದಾರೆ. ಬಿಗ್ ಬಾಸ್ ಬೆಡಗಿ ಸೋನು ಗೌಡ ಈಗ ಕೆಂಪು ಬಣ್ಣದ ಬಿಕಿನಿಯಲ್ಲಿ ಹಾಗೂ ಬೆಡ್‌ರೂಮ್‌ನಲ್ಲಿ ಹಳದಿ ಬಣ್ಣದ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದು, ಕ್ಯಾಮೆರಾ ಕಣ್ಣಿಗೆ ಸಖತ್ ಹಾಟ್ ಆಗಿ ಪೋಸ್ ನೀಡಿದ್ದಾರೆ.
'ಬಿಕಿನಿ ಫೋಟೋಸ್ ನೋಡಿ ಸಾಕಾಯ್ತು..' ಎಂದು ಕಾಮೆಂಟ್ ಬಂದಿದ್ದೇ, ಬೆಡ್‌ರೂಮ್ ಫೋಟೋಸ್ ಪೋಸ್ಟ್ ಮಾಡಿದ ಸೋನು ಗೌಡ!
ತುಂಡುಡುಗೆ ಧರಿಸಿ ಕೈಯಿಂದ ಎದೆ ಮುಚ್ಕೊಂಡ ಸೋನು
ಆ ನಂತರದ ಫೋಟೋಗಳಲ್ಲಿ ಚಿಕ್ಕ ಡ್ರೆಸ್ ಧರಿಸಿ ಕೈಯಿಂದ ಮೈ ಮುಚ್ಚಿಕೊಂಡಿದ್ದಾರೆ. ಬಿಕಿನಿ ವಿಡಿಯೋ ಬಳಿಕ ಸೋನು ಹೊಸ ಫೋಟೋಸ್ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಾಲ್ದೀವ್ಸ್‌ನಲ್ಲಿ ಸೋನು ಗೌಡ ಅವತಾರಕ್ಕೆ ಜನರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದರು. ಯಾಕೆ ಕನ್ನಡಿಗರ ಮರ್ಯಾದೆ ತೆಗೀತಿಯಾ, ಅಷ್ಟು ಬಟ್ಟೆಯನ್ನಾದ್ರೂ ಯಾಕೆ ಹಾಕ್ಕೊಂಡಿದ್ದೀಯಾ ಅದನ್ನು ತೆಗಿಬೋದಿತ್ತಲ್ಲಾ, ನಿನಗೆ ಹೇಳೋರು ಕೇಳೋರು ಯಾರು ಇಲ್ವಾ ಅಂದೆಲ್ಲಾ ಬೈದಿದ್ದರು. ಇನ್‌ಸ್ಟಾದಲ್ಲಿ ವೈರಲ್ ಆದ ವಿಡಿಯೋದಲ್ಲಿ (Viral video) ಮಹಿಳೆಯೊಬ್ಬರು, ಅಷ್ಟೂ ತೋರಿಸುವ ಚಪಲ ಇದ್ರೆ ನಿನ್ ಗಂಡನಿಗೆ ತೋರಿಸಮ್ಮಾ ಎಂದು ಬೈದಾಕಿದ್ದರು.
ಬೈಕೊಂಡ್ರೂ ಕದ್ದು ಮುಚ್ಚಿ ವಿಡಿಯೋ ನೋಡ್ತಿದ್ದಾರೆ ಜನ್ರು
ಆದರೆ ಅಚ್ಚರಿಯ ವಿಚಾರ ಅಂದ್ರೆ ಇಷ್ಟೆಲ್ಲಾ ಟ್ರೋಲ್‌ಗಳ ಮಧ್ಯೆಯೂ ಸೋನುಗೌಡ ಮಾಡಿರೋ ವಿಡಿಯೋ ಭರ್ತಿ 1.9 ಕೋಟಿ ವೀವ್ಸ್ ಗಳಿಸಿದೆ. ವೀಡಿಯೋಗೆ 78 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ ಎಂದರೆ ವ್ಯೂಸ್ ಹೇಗಿರಬಹುದು ಊಹಿಸಿ. ಟ್ರೋಲ್‌ಗಳ ಮಧ್ಯೆಯೂ ಕೋಟಿಗಟ್ಟಲೆ ವ್ಯೂಸ್ ಪಡೆದು ಸೋನು ಗೌಡ ಫಾಲೋವರ್ಸ್ ಸಂಖ್ಯೆ ಹೆಚ್ಚಿಸ್ಕೊಳ್ತಾನೆ ಇದ್ದಾರೆ . ಜನರು ಬೈಯ್ತಾನೆ ಕದ್ದುಮುಚ್ಚಿ ಫುಲ್ ವಿಡಿಯೋ ನೋಡ್ತಿದ್ದಾರೆ. ವಿಡಿಯೋ, ರೀಲ್ಸ್, ಫೋಟೋಗಳಿಗೆ ಸಖತ್ ರೆಸ್ಪಾನ್ಸ್ ಸಿಗ್ತಿದೆ. ಸುಮ್ಮನೆ ಕ್ಯಾಮೆರಾ ಮುಂದೆ ಬಂದು ಖಾಲಿ ಮ್ಯೂಸಿಕ್ಗೆ ಬಳುಕಿಕೊಂಡು ಎಕ್ಸ್ಪ್ರೆಷನ್ ಕೊಟ್ರೂ ಸೋನು ಗೌಡ ವಿಡಿಯೋಗೆ ಲಕ್ಷಗಟ್ಟಲೆ ವ್ಯೂಸ್, ಲೈಕ್ಸ್, ಕಾಮೆಂಟ್ಸ್ ಬರುತ್ತಿವೆ.
ತುಂಡುಡುಗೆ ತೊಟ್ಟು, ಎದೆ ಮುಚ್ಕೊಂಡ ಸೋನು ಗೌಡ, ಸಾಕಮ್ಮ ಮುಚ್ಕೊಂಡಿದ್ದು ಎಂದ ಫ್ಯಾನ್ಸ್!
ನೆಟ್ಟಿಗರು ಬೋಲ್ಡ್ ಕಂಟೆಂಟ್ಗಳನ್ನೇ ಬ್ರೌಸ್ ಮಾಡುವ ಕಾಲದಲ್ಲಿ ಸೋಷಿಯಲ್ ಮಿಡಿಯಾ ಬಳಕೆದಾರರು ಅಂಥದ್ದೇ ಕಂಟೆಂಟ್ ಕೊಡುತ್ತಿದ್ದಾರೆ. ಬಹಳಷ್ಟು ಜನರು ಈ ಮೂಲಕ ಚೆನ್ನಾಗಿ ಆದಾಯ ಕೂಡಾ ಗಳಿಸುತ್ತಿದ್ದಾರೆ. 'ಮಾಲ್ಡೀವ್ಸ್‌ಗೆ ಬಂದ ಮೇಲೆ ನಾನು ವೈರಲ್ ಆಗುತ್ತೀನಿ ಎಂದು ಗೊತ್ತಿರಲಿಲ್ಲ. ನಮ್ಮ ಖುಷಿಗೆ ನಾನು ಎಂಜಾಯ್ ಮಾಡಲ್ಲ ಬಿಕಿನಿ ಹಾಕಬೇಕು ಅಲ್ವಾ? ನನಗೆ ಒಂದು ಮಿಲಿಯನ್ ಫಾಲೋವರ್ಸ್ ಆಗಿರುವುದಕ್ಕೆ ನಾನು ಬೇರೆ ಅವರ ತರ ಜಾತ್ರೆ ಆಚರಣೆ ಮಾಡಿಕೊಳ್ಳುವುದಿಲ್ಲ. ನನ್ನ ಬಳಿ ಇನ್ನು ಹೆಚ್ಚಿಗೆ ಬಿಕಿನಿ ವಿಡಿಯೋಗಳು ಇಲ್ಲ ಅಷ್ಟೇ ಇರುವುದು. ನಾವು ಉಳಿಸುಕೊಂಡಿರುವುದು ಸೆಂಟಾರಾ ರೆಸಾರ್ಟ್‌ನಲ್ಲಿ ನಾವು ಸಿಂಗಲ್ ಹೀಗಾಗಿ ನಮಗೆ ತಕ್ಕಂತೆ ಎಂಜಾಯ್ ಮಾಡುತ್ತಿರುವೆ. ಬೆಳಗ್ಗೆ ಎದ್ದು ತಿನ್ನೋದು ಮಲಗೋದು ಫೋಟೋಶೂಟ್ ಮಾಡೋದು ಹಾಗೂ ಸ್ವಿಮ್ಮಿಂಗ್ ಮಾಡುವುದು ಅಷ್ಟೇ ಕೆಲಸ' ಎಂದು ಸೋನು ಗೌಡ ಹೇಳಿದ್ದಾರೆ.